)
Pensioners News: ಕೇಂದ್ರ ಸರ್ಕಾರದ ನಿವೃತ್ತ ನೌಕರರು, ಪಿಂಚಣಿದಾರರಿಗೆ ಬಂಪರ್ ಗುಡ್ ನ್ಯೂಸ್ ನೀಡಿದೆ. ಪಿಎಂ ನರೇಂದ್ರ ಮೋದಿ ಸರ್ಕಾರದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಪಿಂಚಣಿದಾರರ ಅನುಕೂಲಕ್ಕಾಗಿ "ಬೃಹತ್ ಡಿಜಿಟಲ್ ಜೀವನ ಪ್ರಮಾಣಪತ್ರ" ಅಭಿಯಾನವನ್ನು ಆರಂಭಿಸಲು ಸಜ್ಜಾಗಿದ್ದು ಇದರಿಂದ ಲಕ್ಷಾಂತರ ಮಂದಿ ಪಿಂಚಣಿದಾರರು, ಹಿರಿಯ ನಾಗರೀಕರಿಗೆ ನೇರವಾಗಿ ಪ್ರಯೋಜನವಾಗಿದೆ.
ಕೇಂದ್ರ ಸರ್ಕಾರವು, ದೇಶಾದ್ಯಂತ ಸುಮಾರು 1,600 ಜಿಲ್ಲೆಗಳು ಮತ್ತು ಉಪ-ವಿಭಾಗೀಯ ಕೇಂದ್ರಗಳಲ್ಲಿ ಈ "ಬೃಹತ್ ಡಿಜಿಟಲ್ ಜೀವನ ಪ್ರಮಾಣಪತ್ರ" ಅಭಿಯಾನವನ್ನು ಆರಂಭಿಸಲು ಯೋಜಿಸಿದ್ದು, ಇದರ ಭಾಗವಾಗಿ 2025ರ ನವೆಂಬರ್ 01ರಿಂದ ನವೆಂಬರ್ 30ರವರೆಗೂ ನಡೆಯುವ ಈ ಅಭಿಯಾನದಡಿ ಪಿಂಚಣಿದಾರರು ಡಿಜಿಟಲ್ ರೂಪದಲ್ಲಿ ಸುಲಭವಾಗಿ 'ಜೀವನ ಪ್ರಮಾಣಪತ್ರವನ್ನು' ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
೮೦ವರ್ಷ ಮೇಲ್ಪಟ್ಟವರಿಗೆ ವಿಶೇಷ ಸೌಲಭ್ಯ:
ಪಿಂಚಣಿದಾರರಿಗಾಗಿ ಡಿಜಿಟಲ್ ಜೀವನ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 01ರಿಂದ ಅಭಿಯಾನ ಆರಂಭವಾಗುತ್ತದೆ. ಆದರೂ, ೮೦ವರ್ಷಕ್ಕಿಂತ ಮೇಲ್ಪಟ್ಟ ವಯೋವೃದ್ಧರು, ಪಿಂಚಣಿದಾರರಿಗೆ ಮುಂಗಡವಾಗಿಯೇ ಸರ್ಕಾರ ವಿಶೇಷ ಸೌಲಭ್ಯ ಒದಗಿಸುತ್ತಿದೆ. ಇದರಡಿ, 01 ಅಕ್ಟೋಬರ್ 2025ರಿಂದಲೇ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಅವಕಾಶ ನೀಡಿದೆ.
ಯಾವುದೇ ಅಡೆತಡೆ ಇಲ್ಲದೆ ಪಿಂಚಣಿ ಪಡೆಯುವುದನ್ನು ಮುಂದುವರೆಸಲು ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಒದಗಿಸುವುದು ಅವಶ್ಯಕವಾಗಿದ್ದು, ಇದಕ್ಕಾಗಿ ಫಲಾನುಭವಿಗಳು ಬ್ಯಾಂಕ್ಗಳು ಅಥವಾ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ ಮತ್ತು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಡಿಜಿಟಲ್ ಸೇವೆಯ ಮೂಲಕ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿದೆ. ಇದರಿಂದ ಸಮಯ ಉಳಿತಾಯದ ಜೊತೆಗೆ ಪಿಂಚಣಿದಾರರು, ವಿಶೇಷವಾಗಿ ವೃದ್ಧರು ಮತ್ತು ಗ್ರಾಮೀಣ ಪ್ರದೇಶದ ಜನತೆಗೆ ಭಾರೀ ಪರಿಹಾರ ಸಿಕ್ಕಂತಾಗುತ್ತದೆ.
ಸ್ಮಾರ್ಟ್ಫೋನ್ನಿಂದಲೇ ಸಾಧ್ಯವಾಗುತ್ತೆ ಈ ಕೆಲಸ:
ಪಿಂಚಣಿದಾರರು ಇದೀಗ ಜೀವನ ಪ್ರಮಾಣಪತ್ರ ಸಲ್ಲಿಸಲು ಎಲ್ಲಿಯೂ ಅಲೆದಾಡುವ ಅಗತ್ಯವಿಲ್ಲ. ಬದಲಿಗೆ ಸ್ಮಾರ್ಟ್ಫೋನ್ನ ಸಹಾಯದಿಂದ ನೀವು ಇರುವ ಜಾಗದಲ್ಲಿಯೇ ಈ ಕೆಲಸವನ್ನು ಮಾಡಬಹುದು. ಇದಕ್ಕಾಗಿ, ಎರಡು ಡಿಜಿಟಲ್ ಆಪ್ಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ.
ಸ್ಮಾರ್ಟ್ಫೋನ್ನಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ?
ಹಂತ-1: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಆಧಾರ್ ಫೇಸ್ ಆರ್ಡಿ ಮತ್ತು ಜೀವನ್ ಪ್ರಮಾಣ ಎಂಬ ಎರಡೂ ಆಪ್ಗಳು ಲಭ್ಯವಿದ್ದು ಇದನ್ನು ಡೌನ್ಲೋಡ್ ಮಾಡಿಕೊಳ್ಳಿ.
ಹಂತ-2: ಜೀವನ್ ಪ್ರಮಾಣ ಆಪ್ನಲ್ಲಿ ಲಾಗಿನ್ ಮಾಡಲು ಮೊದಲಿಗೆ ಆಪರೇಟರ್ ಆಗಿ ನೊಂದಾಯಿಸಿಕೊಳ್ಳಿ. ಇದಕ್ಕಾಗಿ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ, ನೊಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸುವ ಒಟಿಪಿ ಮೂಲಕ ಪರಿಶೀಲನೆ ಪೂರ್ಣಗೊಳಿಸಿ.
ಹಂತ-3: ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆಪ್ನಲ್ಲಿ ಅಗತ್ಯವಿರುವ ಮಾಹಿತಿಗಳನ್ನು ನಿಗದಿತ ಜಾಗದಲ್ಲಿ ಭಾರ್ತಿ ಮಾಡಿ, ನಂತರ ಮುಖ ಸ್ಕ್ಯಾನ್ ಮಾಡಿ ಫೇಸ್ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹಂತ-4: ಮೇಲ್ಕಂಡ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪಿಪಿಒ (ಪಿಂಚಣಿ ಪಾವತಿ ಆದೇಶ) ಸಂಖ್ಯೆಯೊಂದಿಗೆ ಪ್ರಮಾಣ ಐಡಿ ಪಿಂಚಣಿದಾರರಿಗೆ ಸಂದೇಶ ಕಳುಹಿಸಲಾಗುತ್ತದೆ. ಇದನ್ನು ಬಳಸಿಕೊಂಡು ಜೀವನ್ ಪ್ರಮಾಣ ವೆಬ್ಸೈಟ್ನಿಂದ ಜೀವನ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ ಸಲ್ಲಿಸಬಹುದು.