)
Sheep/goat farming: ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಜನರ ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಕುರಿ/ಮೇಕೆ ಸಾಕಾಣಿಕೆ ಪ್ರೋತ್ಸಾಹಿಸಲು RGM (Rashtriya Gokul Mission) ಅಡಿಯಲ್ಲಿ ಗುಣಮಟ್ಟದ ಜಾನುವಾರು ತಳಿ ಸಾಕಣೆ ಯೋಜನೆಯನ್ನ ಹಮ್ಮಿಕೊಂಡಿದೆ. ಈ ಯೋಜನೆಯ ಪ್ರಮುಖ ಅಂಶಗಳು ಇಲ್ಲಿವೆ ನೋಡಿ...
ಯೋಜನೆಯ ಉದ್ದೇಶ: ಉತ್ತಮ ಗುಣಮಟ್ಟದ ಕುರಿ ಮತ್ತು ಮೇಕೆ ತಳಿಗಳನ್ನ ಅಭಿವೃದ್ಧಿಪಡಿಸುವುದು. ರೈತರಿಗೆ ಮತ್ತು ಉದ್ಯಮಿಗಳಿಗೆ ವೈಜ್ಞಾನಿಕವಾಗಿ ಸಾಕಣೆ ಮಾಡಲು ಪ್ರೋತ್ಸಾಹ ನೀಡುವುದು. ಸ್ಥಳೀಯ ತಳಿಗಳ ಉತ್ಪಾದನಾ ಸಾಮರ್ಥ್ಯವನ್ನ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ಘಟಕದ ವಿವರಗಳು (Unit Details): ಸಾಮಾನ್ಯವಾಗಿ ಈ ಯೋಜನೆಯಡಿ ಒಂದು ಘಟಕದಲ್ಲಿ ಜಾನುವಾರುಗಳ ಸಂಖ್ಯೆ 500 ಹೆಣ್ಣು ಕುರಿ/ಮೇಕೆಗಳು + 25 ಗಂಡು ಕುರಿ/ಮೇಕೆಗಳು. ಇದನ್ನ ಒಂದು "ತಳಿ ಗುಣಾಕಾರ ಘಟಕ" (Breed Multiplication Farm) ಎಂದು ಕರೆಯಲಾಗುತ್ತದೆ.
ಸಹಾಯಧನ (Subsidy): ಈ ಯೋಜನೆಯು ಕೇಂದ್ರ ಸರ್ಕಾರದ ಸಹಾಯಧನದೊಂದಿಗೆ ನಡೆಯುತ್ತದೆ. ಒಟ್ಟು ಯೋಜನಾ ವೆಚ್ಚದ 50% ರಷ್ಟು ಸಹಾಯಧನ ಸಿಗುತ್ತದೆ. ಒಂದು ಘಟಕಕ್ಕೆ ಗರಿಷ್ಠ 25 ಲಕ್ಷ ರೂ.ವರೆಗೆ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಉಳಿದ 50% ಹಣವನ್ನ ಅರ್ಜಿದಾರರು ಸ್ವಂತ ಹೂಡಿಕೆ ಅಥವಾ ಬ್ಯಾಂಕ್ ಸಾಲದ ಮೂಲಕ ಭರಿಸಬೇಕು.
ಅರ್ಹತೆಗಳು: ವೈಯಕ್ತಿಕ ರೈತರು, ಸ್ವಸಹಾಯ ಸಂಘಗಳು, ಎಫ್ಪಿಒ (FPO) ಅಥವಾ ಸಹಕಾರಿ ಸಂಘಗಳು ಅರ್ಜಿ ಸಲ್ಲಿಸಬಹುದು. ಸ್ವಂತ ಜಮೀನು ಅಥವಾ ದೀರ್ಘಾವಧಿಯ ಲೀಸ್ ಪಡೆದ ಜಮೀನು ಇರಬೇಕು. ಕುರಿ/ಮೇಕೆ ಸಾಕಾಣಿಕೆಯಲ್ಲಿ ತರಬೇತಿ ಅಥವಾ ಅನುಭವ ಹೊಂದಿದ್ದರೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?: ಈ ಯೋಜನೆಯು National Livestock Mission (NLM) ಪೋರ್ಟಲ್ ಅಡಿಯಲ್ಲಿ ಬರುತ್ತದೆ. ನೀವು nlm.udyamimitra.in ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಹತ್ತಿರದ ಪಶುಸಂಗೋಪನಾ ಇಲಾಖೆಯ ಕಚೇರಿಯನ್ನ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ಪ್ರತಿ ವರ್ಷದ ಗುರಿ ಮತ್ತು ಅನುದಾನದ ಆಧಾರದ ಮೇಲೆ ಅರ್ಜಿ ಸಲ್ಲಿಕೆಯ ದಿನಾಂಕಗಳು ಬದಲಾಗುತ್ತಿರುತ್ತವೆ.