)
Retirement Age Increased News: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಖಾಸಗಿ ಕ್ಷೇತ್ರಗಳಲ್ಲಿನ ನಿವೃತ್ತಿ ವಯಸ್ಸಿನ ಏರಿಕೆ ಮಾಡುವ ಬಗ್ಗೆ ಬಹಳ ದಿನಗಳಿಂದ ಚರ್ಚೆಯಾಗುತ್ತಿದೆ. ಏಕೆಂದರೆ ಒಂದು ದೊಡ್ಡ ವರ್ಗ ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳ ಮೇಲೆ ನಿವೃತ್ತಿ ವಯಸ್ಸನ್ನು ಏರಿಕೆ (Retirement Age Hike) ಮಾಡುವಂತೆ ಒತ್ತಡ ಹೇರುತ್ತಲೇ ಬರುತ್ತಿದೆ. ಇನ್ನೊಂದೆಡೆ ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ (Unemployment problem) ಹೆಚ್ಚಾಗುತ್ತಿರುವುದರಿಂದ ನಿವೃತ್ತಿ ವಯಸ್ಸನ್ನು ಕಮ್ಮಿ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಮಾತುಗಳು ಕೂಡ ತೀವ್ರವಾಗಿ ಕೇಳುತ್ತಿವೆ.
ಹಿಂದೆಯಾಗಿದ್ದರೆ ಅದು ಬೇರೆ ಮಾತು, ಆದರೆ ಕಳೆದ ಎಂಟತ್ತು ವರ್ಷಗಳಲ್ಲಿ ನಿರುದ್ಯೋಗದ (Unemployment) ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದ್ದರಿಂದ ನಿವೃತ್ತಿ ವಯಸ್ಸನ್ನು ಕಮ್ಮಿ ಮಾಡಿ ಹೊಸಬರಿಗೆ ಅವಕಾಶ ಮಾಡಿಕೊಡುವುದು ಸೂಕ್ತ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರ (Central Govt) ಯಾವ ರೀತಿಯ ತೀರ್ಮಾನ ಕೈಗೊಳ್ಳಲಿದೆ ಎನ್ನುವುದು ಈಗಾಗಲೇ ಕೆಲಸ ಮಾಡುತ್ತಿರುವ ಮತ್ತು ಕೆಲಸ ಮಾಡಲು ಸಿದ್ದರಿದ್ದು ಕೈ ಖಾಲಿ ಇರುವ ನಿರುದ್ಯೋಗಿಗಳ ಭವಿಷ್ಯವನ್ನು ನಿರ್ಧರಿಸಲಿದೆ.
ಸದ್ಯ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷ. 1998ರಿಂದಲೂ ಇದೇ ನಿಯಮ ಇದೆ. ಇದಕ್ಕೆ ವ್ಯತಿರಿಕ್ತವಾಗಿ ಖಾಸಗಿ ವಲಯದಲ್ಲಿ ನಿವೃತ್ತಿ ವಯಸ್ಸು 58 ಇದೆ. ಅದನ್ನು 60 ವರ್ಷಕ್ಕೆ ಏರಿಸಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಲ್ಲದೆ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು (Retirement age of state government employees) ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಇದೆ. ಹಾಗೆಯೇ ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ ಮತ್ತು ಶೈಕ್ಷಣಿಕ ಕ್ಷೇತ್ರಗಳಂತಹ ಕೆಲವು ವಿಶೇಷ ಕ್ಷೇತ್ರಗಳಲ್ಲಿ ಅನುಭವಿಗಳು ಇರಬೇಕು ಎಂದು ನೌಕರರು ನಿವೃತ್ತರಾದ ಮೇಲೂ ಅವರನ್ನು 65 ವರ್ಷಗಳವರೆಗೆ ಉಳಿಸಿಕೊಳ್ಳಲಾಗುತ್ತಿದೆ.
ಕೆಲವು ರಾಜ್ಯಗಳಲ್ಲಿ ಉದಾಹರಣೆಗೆ ಆಂಧ್ರ, ನಿವೃತ್ತಿ ವಯಸ್ಸು 62 ವರ್ಷ ಇರುವುದರಿಂದ ಎಲ್ಲಾ ರಾಜ್ಯಗಳಲ್ಲೂ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಸಬೇಕು ಎಂಬ ಬೇಡಿಕೆ ಮತ್ತು ಒತ್ತಡ ಎರಡೂ ಇದೆ. ಕೇಂದ್ರ ಸರ್ಕಾರದ ಮುಂದೆ ಕೂಡ ಇಂಥ ಪ್ರಸ್ತಾವನೆ ಇದೆ. ಹಾಗೆಯೇ ಖಾಸಗಿ ಕ್ಷೇತ್ರದಲ್ಲೂ 58ರಿಂದ 60 ವರ್ಷ ಇರುವ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಏರಿಸಬೇಕು ಎಂಬ ವಾದವಿದೆ. ಆದರೆ ಇದಕ್ಕೆ ಅಡ್ಡ ಬರುತ್ತಿರುವುದು ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಹೊರೆ.
ನೌಕರರ ನಿವೃತ್ತಿ ವಯಸ್ಸು ಹೆಚ್ಚಳ ಮಾಡಲು ಇರುವ ಪ್ರಮುಖ ಸಮಸ್ಯೆ ನಿರುದ್ಯೋಗದ್ದು. ದೇಶದಲ್ಲಿ ಕಳೆದ ಎಂಟತ್ತು ವರ್ಷಗಳಲ್ಲಿ ಉದ್ಯೋಗ ನಿರ್ಮಾಣವಾಗುತ್ತಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ಉಲ್ಬಣವಾಗುತ್ತಿದೆ. ಇದರ ನಡುವೆ ನೌಕರರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದರೆ ಇರುವ ಉದ್ಯೋಗಕ್ಕೂ ಕತ್ತರಿ ಹಾಕಿದಂತಾಗುತ್ತದೆ. ಆದರಿಂದ ಕೇಂದ್ರ ಸರ್ಕಾರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡುವ ಬಗ್ಗೆ ಮೀನಾ ಮೇಷ ಎನಿಸುತ್ತಿದೆ.
ಇನ್ನೊಂದೆಡೆ ಈಗ ನೌಕರರ ನಿವೃತ್ತಿ ವಯಸ್ಸನ್ನು ಏರಿಸಿದರೆ ಅದು ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರಗಳೇ ಇರಲಿ ಅಥವಾ ಖಾಸಗಿ ಕಂಪನಿಗಳೇ ಇರಲಿ ಹಿರಿಯ ಮತ್ತು ಅನುಭವಿ ನೌಕರರಿಗೆ ಹೆಚ್ಚಿನ ಪ್ರಮಾಣದ ಸಂಬಳ ಮತ್ತು ಭತ್ಯೆಗಳನ್ನು ನೀಡಬೇಕಾಗುತ್ತದೆ. ಇದು ಆರ್ಥಿಕ ಹೊರೆಯನ್ನು ಉಂಟು ಮಾಡುತ್ತದೆ. ಜೊತೆಗೆ ವಯಸ್ಸಾದ ನೌಕರರ ಕೆಲಸ ಮಾಡುವ ಸಾಮರ್ಥ್ಯವೂ ಕಮ್ಮಿಯಾಗಿರುತ್ತದೆ. ಇದರಿಂದ ಹೆಚ್ಚಿನ ಸಂಬಳಕ್ಕೆ ಕಮ್ಮಿ ಕೆಲಸ ಸಿಗುತ್ತದೆ. ಇದರ ಬದಲು ಹೊಸಬರಿಗೆ ಅವಕಾಶ ಕೊಟ್ಟರೆ ಕಮ್ಮಿ ಸಂಬಳಕ್ಕೆ ಹೆಚ್ಚಿನ ಕೆಲಸ ತೆಗಿಸಬಹುದು ಎನ್ನುವ ಲೆಕ್ಕಾಚಾರಗಳು ಕೇಳಿಬರುತ್ತಿವೆ. ಈಗ ಸರ್ಕಾರ ಏನು ತೀರ್ಮಾನ ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕು.
Disclaimer: ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದು ಯಾವುದೇ ರೀತಿಯ ಸರ್ಕಾರದ ವೇತನ ಹೆಚ್ಚಳ ಅಥವಾ ಪಿಂಚಣಿ ಏರಿಕೆಯನ್ನು ಖಾತರಿಪಡಿಸುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್ಸೈಟ್ಗಳನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.