ಸರ್ಕಾರಿ ನೌಕರರ ನಿರೀಕ್ಷೆಗೆ ಬಿತ್ತು ತೆರೆ ! ನಾಳೆಯೇ ತುಟ್ಟಿಭತ್ಯೆ ಹೆಚ್ಚಳ ಘೋಷಣೆ !ಸಚಿವ ಸಂಪುಟದಲ್ಲಿ ವೇತನ ಹೆಚ್ಚಳ ಪ್ರಕಟಿಸಲಿರುವ ಸರ್ಕಾರ

ಈ ಸಭೆಯಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡರೆ, ಕೋಟ್ಯಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಅದರ ನೇರ ಪ್ರಯೋಜನ ಪಡೆಯುತ್ತಾರೆ.  

Written by - Ranjitha R K | Last Updated : Mar 18, 2025, 03:53 PM IST
  • ಸರ್ಕಾರ ನಾಳೆಯೇ ತುಟ್ಟಿ ಭತ್ಯೆ ಹೆಚ್ಚಿಸಬಹುದು
  • ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
  • ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ
ಸರ್ಕಾರಿ ನೌಕರರ ನಿರೀಕ್ಷೆಗೆ ಬಿತ್ತು ತೆರೆ ! ನಾಳೆಯೇ ತುಟ್ಟಿಭತ್ಯೆ ಹೆಚ್ಚಳ ಘೋಷಣೆ !ಸಚಿವ ಸಂಪುಟದಲ್ಲಿ ವೇತನ ಹೆಚ್ಚಳ ಪ್ರಕಟಿಸಲಿರುವ ಸರ್ಕಾರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೀಘ್ರದಲ್ಲೇ ದೊಡ್ಡ ಪರಿಹಾರ ಸಿಗಲಿದೆ. ತುಟ್ಟಿ ಭತ್ಯೆ (ಡಿಎ) ಹೆಚ್ಚಳಕ್ಕಾಗಿ ಕಾಯುತ್ತಿರುವ 1 ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಮುಖ ಸುದ್ದಿ ಇದೆ. ಸರ್ಕಾರ ನಾಳೆಯೇ  ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ (ಡಿಆರ್) ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರವು ಕೇಂದ್ರ ನೌಕರರ ವೇತನ ಮತ್ತು ಪಿಂಚಣಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. 

Add Zee News as a Preferred Source

ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ : 
ಜನವರಿ 2025ರ ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಬಹಳ ಹಿಂದಿನಿಂದಲೂ ಊಹಾಪೋಹಗಳಿವೆ.  ಹೋಳಿಗೆ ಮೊದಲು ಇದನ್ನು ಘೋಷಿಸುವ ನಿರೀಕ್ಷೆಯಿತ್ತು.ಇದೀಗ ನಾಳೆ ಅಂದರೆ ಮಾರ್ಚ್ 19, 2025 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡರೆ, ಕೋಟ್ಯಂತರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಅದರ ನೇರ ಪ್ರಯೋಜನ ಪಡೆಯುತ್ತಾರೆ.

ಇದನ್ನೂ ಓದಿ : ಬಾಲಿವುಡ್ ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟ ಈತ ! ಟ್ಯಾಕ್ಸ್ ಪೇಮೆಂಟ್ ನಲ್ಲಿ ಶಾರುಖ್ ಖಾನ್ ನನ್ನು ಹಿಂದಿಕ್ಕಿದ ಈ ನಟನ ಆದಾಯ ಎಷ್ಟು ಗೊತ್ತಾ ?

ತುಟ್ಟಿ ಭತ್ಯೆ ಶೇ. 53 ರಿಂದ ಶೇ. 55 ಕ್ಕೆ ಏರಿಕೆಯಾಗುವ ಸಾಧ್ಯತೆ  :
ಸರ್ಕಾರವು ತುಟ್ಟಿ ಭತ್ಯೆಯಲ್ಲಿ ಶೇ.2 ರಷ್ಟು ಹೆಚ್ಚಳವನ್ನು ಘೋಷಿಸಬಹುದು ಎಂದು ವರದಿಗಳು ಸೂಚಿಸುತ್ತವೆ. ಇದು ಕೇಂದ್ರ ಸರ್ಕಾರಿ ನೌಕರರ ಪ್ರಸ್ತುತ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು ಶೇ.53 ರಿಂದ ಶೇ.55 ಕ್ಕೆ ಹೆಚ್ಚಿಸುತ್ತದೆ. ಸರ್ಕಾರಿ ನೌಕರರ ವೇತನದ ಪ್ರಮುಖ ಭಾಗವೆಂದರೆ ತುಟ್ಟಿ ಭತ್ಯೆ. 

ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರ :
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹಣದುಬ್ಬರದಿಂದ ಪರಿಹಾರ ಒದಗಿಸಲು, ವರ್ಷಕ್ಕೆ ಎರಡು ಬಾರಿ ಡಿಎ ಮತ್ತು ಡಿಆರ್ ಅನ್ನು ಪರಿಷ್ಕರಿಸಲಾಗುತ್ತದೆ. ಈ ಹೆಚ್ಚಳವು ಜನವರಿ ಮತ್ತು ಜುಲೈ ತಿಂಗಳುಗಳಲ್ಲಿ ಮಾಡಲಾಗುತ್ತದೆ. 

ಉದ್ಯೋಗಿಗಳಿಗೆ ವೇತನ ಎಷ್ಟು ಹೆಚ್ಚಳವಾಗುವುದು ? :
ವೇತನ ಹೆಚ್ಚಳವನ್ನು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ. ಒಬ್ಬ ಉದ್ಯೋಗಿಯ ಮೂಲ ವೇತನ 1,00,000 ಆಗಿದ್ದರೆ, ಅವರು ಪ್ರಸ್ತುತ ಶೇ. 53 ರಷ್ಟು ತುಟ್ಟಿ ಭತ್ಯೆಯ ಅಡಿಯಲ್ಲಿ 53,000 ರೂ.ತುಟ್ಟಿ ಭತ್ಯೆಯನ್ನು ಪಡೆಯುತ್ತಾರೆ. ತುಟ್ಟಿ ಭತ್ಯೆ ಶೇ.2 ರಷ್ಟು ಹೆಚ್ಚಾಗಿ  ಶೇ. 55 ಕ್ಕೆ ತಲುಪಿದರೆ ಡಿಎ 55,000 ಆಗಲಿದೆ. ಅಂದರೆ 2,000 ರೂ.ಗಳ ವೇತನ ಹೆಚ್ಚಳವಾಗಲಿದೆ.

ಇದನ್ನೂ ಓದಿ : ಮಾರುಕಟ್ಟೆಯಲ್ಲಿ 350 ರೂಪಾಯಿ ನೋಟು! ಈ ಹೊಸ ನೋಟಿನ ಬಗ್ಗೆ ಆರ್‌ಬಿಐ ನೀಡಿದ ಮಾಹಿತಿ ಇದು !

ಪಿಂಚಣಿದಾರರ ಪಿಂಚಣಿಯಲ್ಲೂ ಹೆಚ್ಚಳ: 
ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ನೀಡಲಾಗುತ್ತದೆ. ಆದರೆ ಪಿಂಚಣಿದಾರರು ಅದನ್ನು ತುಟ್ಟಿ ಪರಿಹಾರ (DR) ರೂಪದಲ್ಲಿ ಪಡೆಯುತ್ತಾರೆ. ತುಟ್ಟಿ ಭತ್ಯೆ ಹೆಚ್ಚಾದಾಗಲೆಲ್ಲಾ, ಪಿಂಚಣಿದಾರರ ತುಟ್ಟಿ ಪರಿಹಾರವೂ ಹೆಚ್ಚಾಗುತ್ತದೆ.

ಡಿಎ ಬಾಕಿಯೂ ಸಿಗುತ್ತದೆಯೇ?
ಸರ್ಕಾರವು ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಿದಾಗಲೆಲ್ಲಾ, ಅದು ಜನವರಿ 1, 2025 ರಿಂದ ಜಾರಿಗೆ ಬರುತ್ತದೆ. ಇದರರ್ಥ ಜನವರಿಯಿಂದ ನೌಕರರಿಗೆ ತುಟ್ಟಿ ಭತ್ಯೆ ದೊರೆಯಲಿದೆ. 

ಡಿಎ ಹೆಚ್ಚಳ: ಹಿಂದಿನ ಡಿಎ ಹೆಚ್ಚಳ ಯಾವಾಗ ಆಗಿತ್ತು?
ಇದಕ್ಕೂ ಮೊದಲು, ಕೇಂದ್ರ ಸರ್ಕಾರವು ಜುಲೈ 2024 ರಲ್ಲಿ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಶೇ.3 ರಷ್ಟು ಹೆಚ್ಚಿಸಿತ್ತು. ಇದಾದ ನಂತರ, ತುಟ್ಟಿ ಭತ್ಯೆಯನ್ನು 50% ರಿಂದ 53% ಕ್ಕೆ ಹೆಚ್ಚಿಸಲಾಯಿತು. ಈ ಬಾರಿ, ಡಿಎ ಶೇ.2 ರಷ್ಟು ಹೆಚ್ಚಾಗುವ ಅಂದಾಜಿದ್ದು, ಒಟ್ಟು ಡಿಎ ಶೇ.55 ಕ್ಕೆ ಏರಿಕೆಯಾಗಲಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News