)
Nandini Milk Products Price Reduce: ಕೇಂದ್ರ ಸರ್ಕಾರದ ಜಿಎಸ್ಟಿ ಸುಧಾರಣೆಗಳು ಇಂದಿನಿಂದ (ಸೆಪ್ಟೆಂಬರ್ 22) ಜಾರಿಗೆ ಬರಲಿದ್ದು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಒಡೆತನದ ಹಾಲು ಮತ್ತು ಹಾಲು ಆಧಾರಿತ ಉತ್ಪನ್ನಗಳ ಬ್ರಾಂಡ್ 'ನಂದಿನಿ'ಕೂಡ ತನ್ನ ಉತ್ಪನ್ನಗಳ ಬೆಲೆಗಳನ್ನು ಕಡಿತಗೊಳಿಸಿದೆ.
ಹೌದು, ದೈನಂದಿನ ಬಳಕೆಯ 21 ಉತ್ಪನ್ನಗಳ ಬೆಲೆಯನ್ನು ಕೆಎಂಎಫ್ ಪರಿಷ್ಕರಿಸಿದ್ದು, ಇಂದಿನಿಂದ ಜಾರಿಗೆ ಬರುವಂತೆ ನಂದಿನ ಉತ್ಪನ್ನಗಳ ಪರಿಷ್ಕೃತ ದರವನ್ನು ಬಿಡುಗಡೆ ಮಾಡಲಾಗಿದೆ. ಈ ದರಗಳು ಹಾಲು, ತುಪ್ಪದಿಂದ ಹಿಡಿದು ಐಸ್ಕ್ರೀಮ್ಗಳು, ಚೀಸ್, ಕುಕೀಸ್, ಕೇಕ್ಗಳು ಮತ್ತು ಚಾಕೊಲೇಟ್ಗಳವರೆಗೆ ಹಲವು ಉತ್ಪನ್ನಗಳ ಬೆಲೆಗಳಲ್ಲಿ ಕಡಿತವನ್ನು ಘೋಷಿಸಲಾಗಿದೆ.
ಸಾಮಾನ್ಯವಾಗಿ 80 ಗ್ರಾಂ ನಿಂದ 1 ಕಿಲೋಗ್ರಾಂವರೆಗಿನ ಪ್ಯಾಕೇಜ್ ಮಾಡಿದ ಡೈರಿ ಉತ್ಪನ್ನಗಳ ಮೇಲೆ 7 ರಿಂದ 10% ಬೆಲೆ ಕಡಿತ ಮಾಡಲಾಗಿದ್ದು, ನಂದಿನಿಯ ಯಾವೆಲ್ಲಾ ಉತ್ಪನ್ನಗಳಲ್ಲಿ ದರ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಪಟ್ಟಿ ಇಲ್ಲಿದೆ.
ಕೆಎಂಎಫ್ ನೀಡಿರುವ ಪತ್ರಿಕಾ ಪ್ರಕಟಣೆಯ ಅನುಸಾರ, ಕೆಎಂಎಫ್ ನಂದಿನಿ ತುಪ್ಪ, ನಂದಿನಿ ಬೆಣ್ಣೆ, ನಂದಿನಿ ಚೀಸ್ ಮತ್ತು ನಂದಿನಿ ಕುರುಕಲು ತಿಂಡಿಗಳ ಮೇಲಿನ ಜಿಎಸ್ಟಿಯನ್ನು 12% ರಿಂದ 5% ಗೆ ಕಡಿತಗೊಳಿಸಲಾಗಿದೆ. ಇದೇ ವೇಳೆ ಕುಕೀಸ್, ಚಾಕೊಲೇಟ್ಗಳು, ಐಸ್ ಕ್ರೀಮ್ಗಳು, ಇನ್ಸ್ಟೆಂಟ್ ಮಿಕ್ಸ್ಗಳು ಮತ್ತು ಪ್ಯಾಕೇಜ್ ಮಾಡಿದ ಕುಡಿಯುವ ನೀರಿನ ಮೇಲಿನ ಜಿಎಸ್ಟಿಯನ್ನು 18%ನಿಂದ 5%ಗೆ ಇಳಿಕೆ ಮಾಡಲಾಗಿದೆ. ಇದಲ್ಲದೆ, ಈ ಮೊದಲು ಪನೀತ್ ಮತ್ತು ಅಲ್ಟ್ರಾ ಹೈ ಟೆಂಪರೇಚರ್ (ಯುಎಚ್ಟಿ) ಹಾಲಿನ ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿದ್ದ 5% ಜಿಎಸ್ಟಿ ದರವನ್ನು ಕೈ ಬಿಡಲಾಗಿದೆ.
| ಕ್ರಮ ಸಂಖ್ಯೆ | ಉತ್ಪನ್ನ & ಪ್ಯಾಕ್ ಗಾತ್ರ | ಹಿಂದಿನ MRP ಬೆಲೆ (ರೂ.ಗಳಲ್ಲಿ) |
ಹೊಸ MRP ಬೆಲೆ (ರೂ.ಗಳಲ್ಲಿ) |
| 1 | ತುಪ್ಪ (1000 ಮಿ.ಲೀ.) | 650 | 610 |
| 2 | ಬೆಣ್ಣೆ - ಉಪ್ಪುರಹಿತ (500 ಗ್ರಾಂ) | 305 | 286 |
| 3 | ಪನೀರ್ (1000 ಗ್ರಾಂ) | 425 | 408 |
| 4 | ಗುಡ್ಲೈಫ್ ಹಾಲು ( 1000 ಮಿ.ಲೀ.) | 70 | 68 |
| 5 | ಚೀಸ್ - Mozzarella Diced (1 ಕೆಜಿ) | 480 | 450 |
| 6 | ಚೀಸ್ - Processed (1 ಕೆಜಿ) | 530 | 497 |
| 7 | ಐಸ್ ಕ್ರೀಮ್ಗಳು - ವೆನಿಲ್ಲಾ ಟಬ್ (1000 ಮಿ.ಲೀ.) | 200 | 178 |
| 8 | ಐಸ್ ಕ್ರೀಮ್ - ಫ್ಯಾಮಿಲಿ ಪ್ಯಾಕ್ ವೆನಿಲ್ಲಾ (5000 ಮಿ.ಲೀ.) | 645 | 575 |
| 9 | ಐಸ್ ಕ್ರೀಮ್ - ಚಾಕೊಲೇಟ್ ಸಂಡೇ (500 ಮಿ.ಲೀ.) | 115 | 102 |
| 10 | ಐಸ್ ಕ್ರೀಮ್ಗಳು - ಮ್ಯಾಂಗೋ ನ್ಯಾಚುರಲ್ಸ್ (100 ಮಿ.ಲೀ.) | 35 | 31 |
| 11 | ಸವೌರೀಸ್ (180 ಗ್ರಾಂ) | 60 | 56 |
| 12 | ಮಫಿನ್ಗಳು (150 ಗ್ರಾಂ) | 50 | 45 |
| 13 | ಕೇಕ್ಗಳು (200 ಗ್ರಾಂ) | 110 | 98 |
| 14 | ಅಕ್ವಾ (ನೀರು) (1000 ಮಿ.ಲೀ.) | 20 | 18 |
| 15 | ಪಾಯಸ ಮಿಶ್ರಣ (200 ಗ್ರಾಂ) | 90 | 80 |
| 16 | ಜಾಮೂನ್ ಮಿಶ್ರಣ (200 ಗ್ರಾಂ) | 80 | 71 |
| 17 | ಬಾದಾಮ್ ಪುಡಿ (200 ಗ್ರಾಂ) | 120 | 107 |
| 18 | ಕೊಕೊನಟ್ ಕುಕೀಸ್ (100 ಗ್ರಾಂ) | 35 | 31 |
| 19 | ಸ್ಪ್ಲಾಸ್ ವೇ ಪಾನೀಯಗಳು (200 ಮಿ.ಲೀ.) | 10 | 9.5 |
| 20 | ಬೌನ್ಸ್ (200 ಮಿ.ಲೀ.) | 15 | 15 |
| 21 | ರೈಸ್ ಕ್ರಿಸ್ಪಿ ಮಿಲ್ಕ್ ಚಾಕೊ (80 ಗ್ರಾಂ) | 65 | 58 |