Best Saving Scheme: ಹೆಣ್ಣು ಮಕ್ಕಳು ಹುಟ್ಟಿದರೆ ಸಾಕು ಅವರ ವಿದ್ಯಾಭ್ಯಾಸ ಮಾತ್ರವಲ್ಲದೆ ಮದುವೆ, ಮುಂಜಿ ಅಂತ ಖರ್ಚು ಜಾಸ್ತಿ. ಹಾಗಾಗಿಯೇ, ಹೆಣ್ಣು ಹುಟ್ಟಿದರೆ ಸಾಕು ಆ ಮಗು ಹೊರೆ ಎನ್ನುವ ಭಾವನೆ ಬಹುತೇಕ ಜನರಲ್ಲಿ ಇದೆ. ಆದರೆ, ಇಂತಹ ಆಲೋಚನೆಗಳಿಂದ ಹೊರಬರಲು ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆಯಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿಯೇ ಜಾರಿಯಾಗಿರುವ 'ಸುಕನ್ಯಾ ಸಮೃದ್ಧಿ ಯೋಜನೆ'ಯಲ್ಲಿ ನಿಗದಿತ ಅವಧಿಯವರೆಗೆ ಹೂಡಿಕೆ ಮಾಡುವುದರಿಂದ ಹೆಣ್ಣು ಮಗು ವಯಸ್ಸಿಗೆ ಬರುವವರೆಗೆ ಒಂದಲ್ಲ... ಎರಡಲ್ಲ... ಬರೋಬ್ಬರಿ 70 ಲಕ್ಷ ರೂಪಾಯಿಯನ್ನು ಕಲೆಹಾಕಬಹುದು. ಸುಕನ್ಯಾ ಸಮೃದ್ಧಿ ಯೋಜನೆ (SSY) ಪ್ರಯೋಜನವೇನು? ಇದರಲ್ಲಿ ಎಷ್ಟು ಹೂಡಿಕೆ ಮಾಡಿದರೆ ಬೃಹತ್ ಮೊತ್ತ ಕೂಡಿಡ ಬಹುದು? ಎಸ್‌ಎಸ್‌ವೈ ಯೋಜನೆಯಲ್ಲಿ ಹೂಡಿಕೆ ಮೇಲೆ ಎಷ್ಟು ಬಡ್ಡಿ ದೊರೆಯುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಉದ್ದೇಶ?
"ಬೇಟಿ ಬಚಾವೋ, ಬೇಟಿ ಪಡಾವೋ" ಅಭಿಯಾನದ ಅಡಿಯಲ್ಲಿ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸುಕನ್ಯಾ ಸಮೃದ್ಧಿ ಯೋಜನೆ-SSY ಅನ್ನು ಪ್ರಾರಂಭಿಸಿದರು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ, ಅವರ ವಿವಾಹದ ಸಂದರ್ಭದಲ್ಲಿ ಖರ್ಚು ವೆಚ್ಚವನ್ನು ಸುಲಭವಾಗಿ ನಿಭಾಯಿಸಲು ಒಂದು ಉತ್ತಮ ಮೊತ್ತವನ್ನು ಸಂಗ್ರಹಿಸಬಹುದು ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದು ಸರ್ಕಾರವೇ ನಿರ್ವಹಿಸುವ ಯೋಜನೆ ಆಗಿರುವುದರಿಂದ ಎಸ್‌ಎಸ್‌ವೈ ಹೂಡಿಕೆಯ ಮೇಲೆ ಖಾತರಿ ಆದಾಯ/ಗ್ಯಾರಂಟಿ ರಿಟರ್ನ್ ಪಡೆಯುವುದನ್ನು ಖಚಿತಪಡಿಸುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಯಾರು ತೆರೆಯಬಹುದು?
ಸುಕನ್ಯಾ ಸಮೃದ್ಧಿ ಹಣಕಾಸು ಯೋಜನೆಯು ತಂದೆ-ತಾಯಿ ತಮ್ಮ ಹೆಣ್ಣು ಮಗುವಿಗೆ ಅಧಿಕೃತ ಬ್ಯಾಂಕುಗಳು ಅಥವಾ ಭಾರತೀಯ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಅನುವು ಮಾಡಿಕೊಡುತ್ತದೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಯಾಲ್ಲಿ ಆಕೆಯ ಪೋಷಕರು ಎಸ್‌ಎಸ್‌ವೈ ಖಾತೆಯನ್ನು ತೆರೆಯಬಹುದು. ಆದರೆ, ಒಂದು ಮಗುವಿನ ಹೆಸರಿನಲ್ಲಿ ಒಂದೇ ಒಂದು ಖಾತೆಯನ್ನು ತೆರೆಯಬಹುದು. ಗಮನಾರ್ಹವಾಗಿ ಒಂದು ಕುಟುಂಬದಲ್ಲಿ ಹೆಚ್ಚೆಂದರೆ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು.
ಇದನ್ನೂ ಓದಿ- EPFO Rules: ಕೆಲಸ ಬಿಟ್ಟ ಬಳಿಕವೂ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಸಿಗುತ್ತಾ ಬಡ್ಡಿ?
ಸುಕನ್ಯಾ ಸಮೃದ್ಧಿ ಯೋಜನೆ ಕನಿಷ್ಠ ಹೂಡಿಕೆ, ಬಡ್ಡಿದರ, ಅವಧಿಗೂ ಮುನ್ನ ವಿತ್ ಡ್ರಾ:
ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆ:
>> ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು.
>> ಎಸ್‌ಎಸ್‌ವೈ ಖಾತೆಯಲ್ಲಿ 15 ವರ್ಷಗಳ ಕಾಲ ಹೂಡಿಕೆ ಮಾಡುವುದು ಕಡ್ಡಾಯವಾಗಿದೆ.
>> ಎಸ್‌ಎಸ್‌ವೈ ಖಾತೆಯನ್ನು ಭಾರತದ ಯಾವುದೇ ಸ್ಥಳಕ್ಕೆ ಒಂದು ಅಂಚೆ ಕಚೇರಿ/ಬ್ಯಾಂಕಿನಿಂದ ಇನ್ನೊಂದು ಅಂಚೆ ಕಚೇರಿ/ಬ್ಯಾಂಕಿಗೆ ಸುಲಭವಾಗಿ ವರ್ಗಾಯಿಸಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅವಧಿಗೂ ಮುನ್ನ ಮುಚ್ಚಬಹುದೇ?
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (ಎಸ್‌ಎಸ್‌ವೈ) ಖಾತೆ ತೆರೆದ ದಿನಾಂಕದಿಂದ 21 ವರ್ಷಗಳು ಪೂರ್ಣಗೊಂಡ ಬಳಿಕ ಈ ಹೂಡಿಕೆಯು ಪಕ್ವವಾಗುತ್ತದೆ. ಆದಾಗ್ಯೂ, ಎಸ್‌ಎಸ್‌ವೈ ಯೋಜನೆಯ ಫಲಾನುಭವಿಯು 18 ವರ್ಷ ತುಂಬಿದ ನಂತರ ಮದುವೆಯಾದರೆ ಖಾತೆಯನ್ನು ಅವಧಿಪೂರ್ವವಾಗಿ ಮುಚ್ಚಲು ಅವಕಾಶವಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿದರ?
ಕೇಂದ್ರ ಸರ್ಕಾರ ನಿರ್ವಹಿಸುತ್ತಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರಸ್ತುತ 8.2% ಬಡ್ಡಿದರವನ್ನು ನೀಡಲಾಗುತ್ತಿದೆ.
ಎಸ್‌ಎಸ್‌ವೈ ಯಲ್ಲಿ ಹೂಡಿಕೆ ಮಾಡುವುದರಿಂದ ಇದರಲ್ಲಿ ಗಳಿಸಿದ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10ರ ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಕೂಡ ಲಭ್ಯವಿದೆ.
ಇದನ್ನೂ ಓದಿ- 8ನೇ ವೇತನ ಆಯೋಗ ಜಾರಿಗೆ ಬಂದ ಮೇಲೆ ಕೇಂದ್ರ ಸರ್ಕಾರಿ ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತದೆ ಗೊತ್ತಾ?
ಸುಕನ್ಯಾ ಸಮೃದ್ಧಿ ಯೋಜನೆ ಹೂಡಿಕೆಯಿಂದ 70 ಲಕ್ಷ ಕಲೆಹಾಕುವ ಲೆಕ್ಕಾಚಾರ:
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ 250ರೂ.ಗಳಿಂದ ಗರಿಷ್ಠ 150,000ರೂ. ವರೆಗೆ ಠೇವಣಿ ಮಾಡಬಹುದು. ಈ ಯೋಜನೆಯಲ್ಲಿ ಒಮ್ಮೆಗೆ ಒಟ್ಟು ಮೊತ್ತ ಹೂಡಿಕೆ ಮಾಡಬಹುದು. ಇಲ್ಲವೇ, ಮಾಸಿಕ ಹೂಡಿಕೆಗೂ ಅವಕಾಶವಿದೆ.
ಎಸ್‌ಎಸ್‌ವೈ ಯೋಜನೆಯಲ್ಲಿ ವಾರ್ಷಿಕ 1,50,000 ಲಕ್ಷ ರೂ. ಪ್ರತಿ ತಿಂಗಳು 12,500 ರೂ. (ದಿನಕ್ಕೆ 416.6 ರೂ.) ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ ಒಟ್ಟು 22,50,000ರೂ. ಹೂಡಿಕೆ ಮಾಡಿದಂತಾಗುತ್ತದೆ. ಪ್ರಸ್ತುತ, ಎಸ್‌ಎಸ್‌ವೈ ಹೂಡಿಕೆ ಮೇಲೆ 8.2% ಬಡ್ಡಿ ಪಾವತಿಸಲಾಗುತ್ತಿದ್ದು, 49,32,119ರೂ. ಬಡ್ಡಿ ಪಾವತಿಸಲಾಗುತ್ತದೆ. ಈ ರೀತಿಯಾಗಿ ಮಗಳಿಗೆ 21 ವರ್ಷ ತುಂಬಿದಾಗ ಮೆಚ್ಯೂರಿಟಿ ಮೊತ್ತವಾಗಿ ಒಟ್ಟು 71,82,119 ರೂ. ಹಣ ಕೈ ಸೇರುತ್ತದೆ.









