Gold buy ideas : ಅನೇಕ ಜನರು ಚಿನ್ನದ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಕೆಲವರು ಯಂತ್ರದಿಂದ ಮಾಡಿದ ಚಿನ್ನದ ಆಭರಣಗಳನ್ನು ಖರೀದಿಸುತ್ತಾರೆ. ಇನ್ನು ಕೈಯಿಂದ ತಯಾರಿಸಿದ ಆಭರಣ ಉತ್ತಮ ಅಂತ ಅದನ್ನೇ ಖರೀದಿ ಮಾಡ್ತಾರೆ. ಹಾಗಿದ್ರೆ, ಅಕ್ಕಸಾಲಿಗರ ಪೈಕಿ ಇವು ಎರಡರಲ್ಲಿ ಯಾವುದು ಉತ್ತಮ. ಬನ್ನಿ ನೋಡೋಣ
ಯಂತ್ರ ನಿರ್ಮಿತ ಚಿನ್ನದ ಆಭರಣಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಕೈಯಿಂದ ಮಾಡಿದ ಆಭರಣಗಳು ವಿಶಿಷ್ಟ ವಿನ್ಯಾಸಗಳು, ಕಲಾತ್ಮಕತೆಗೆ ಸಾಕ್ಷಿಯಾಗಿರುತ್ತವೆ. ಇವುಗಳು ಕೆಲ ವ್ಯತ್ಯಾಸಗಳನ್ನು ಹೊಂದಿವೆ. ರೆಡಿಮೆಡ್ ಆಭರಣಗಳು ಕಡಿಮೆ ಬೆಲೆಗೆ ಲಭ್ಯವಿರುತ್ತವೆ, ಕೌಶಲ್ಯ ಮತ್ತು ಶ್ರಮದಿಂದಾಗಿ ಕೈಯಿಂದ ಮಾಡಿದ ಆಭರಣಗಳನ್ನು ಹೆಚ್ಚು ಮೌಲ್ಯಯುತ ಮತ್ತು ವಿಶಿಷ್ಟವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ:ಮಗುವಿನ ಆದಾಯದ ಮೇಲೆ ಯಾರು ತೆರಿಗೆ ಪಾವತಿಸಬೇಕು? ಕಾನೂನು ಹೇಳುವುದೇನು?
ಯಂತ್ರಗಳಿಂದ ತಯಾರಿಸಿದ ಆಭರಣಗಳಿಗಿಂತ ಕೈಯಿಂದ ತಯಾರಿಸಿದ ಆಭರಣಗಳು ಹೆಚ್ಚು ಸುಂದರ ಮತ್ತು ಮೌಲ್ಯಯುತವಾಗಿರುತ್ತವೆ. ಕೈಯಿಂದ ತಯಾರಿಸಿದ ಆಭರಣಗಳನ್ನು ಚಿನ್ನ, ಬೆಳ್ಳಿ, ಪ್ಲಾಟಿನಂ, ಟೈಟಾನಿಯಂ ಮತ್ತು ಇತರ ಹಲವು ಲೋಹಗಳಿಂದ ತಯಾರಿಸಬಹುದು. ಕೈಯಿಂದ ಮಾಡಿದ ಆಭರಣಗಳನ್ನು ತಮ್ಮ ಕೆಲಸದ ಬಗ್ಗೆ ಹೆಮ್ಮೆಪಡುವ ನುರಿತ ಕುಶಲಕರ್ಮಿಗಳು ತಯಾರಿಸುತ್ತಾರೆ.
ರೆಡಿಮೇಡ್ ಆಭರಣಗಳು ಕಡಿಮೆ ಬೆಲೆಗೆ ಲಭ್ಯವಿದೆ. ರೆಡಿಮೇಡ್ ಸರಪಳಿಗಳು ತುಂಬಾ ದಪ್ಪವಾಗಿ ಕಾಣುತ್ತವೆ ಮತ್ತು ಬೇಗನೆ ಮುರಿಯುತ್ತವೆ. ಮತ್ತೊಂದೆಡೆ, ಕೈಯಿಂದ ಮಾಡಿದ ಆಭರಣಗಳು ಬಲವಾಗಿರುತ್ತವೆ ಮತ್ತು ಮುರಿಯುವುದಿಲ್ಲ. ಕೈಯಿಂದ ಮಾಡಿದ ಆಭರಣಗಳು ಹತ್ತು ವರ್ಷಗಳವರೆಗೆ ಮುರಿಯುವುದಿಲ್ಲ, ಆದರೆ ಯಂತ್ರದಿಂದ ಮಾಡಿದ ಆಭರಣಗಳು ಎರಡು ವರ್ಷಗಳಲ್ಲಿ ಒಡೆಯುತ್ತವೆ.
ಇದನ್ನೂ ಓದಿ:DA Hike: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್, ತುಟ್ಟಿಭತ್ಯೆ ಹೆಚ್ಚಳ, ಎಷ್ಟು ಜಾಸ್ತಿ? ಯಾವಾಗ ಎಫೆಕ್ಟ್?
ಯಾವುದೇ ರೆಡಿಮೆಡ್ ಆಭರಣಗಳು ಮುರಿದುಹೋದರೆ, ವಿನಿಮಯ ಮಾಡಿಕೊಳ್ಳಬಹುದು. ಕೈಯಿಂದ ಮಾಡಿದ ಆಭರಣಗಳು, ಮುರಿದು ಹೋದರೆ ಆಭರಣ ವ್ಯಾಪಾರಿಗಳ ಬಳಿಗೆ ಹೋಗಿ ಅದನ್ನು ಮತ್ತೆ ಅಂಟಿಸಿಕೊಳ್ಳಬಹುದು.. ಇದು ಗ್ರಾಹಕರು ಮತ್ತೆ ಹೆಚ್ಚುವರಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೂ, ಕೈಯಿಂದ ತಯಾರಿಸಿದ ಆಭರಣಗಳು ಯಂತ್ರದಿಂದ ತಯಾರಿಸಿದ ಆಭರಣಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ, ಉತ್ತಮ ಗುಣಮಟ್ಟ ಮತ್ತು ಮೌಲ್ಯಯುತವಾಗಿವೆ.









