ಆಗಸ್ಟ್ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ, RBI ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು (bps) ಕಡಿತಗೊಳಿಸಬಹುದು.ಇದರಿಂದ ಗೃಹ ಸಾಲಗಳು, ಕಾರು ಸಾಲಗಳು ಮತ್ತು ವೈಯಕ್ತಿಕ ಸಾಲಗಳ EMI ಅಗ್ಗವಾಗಬಹುದು.

ದೀಪಾವಳಿಗೂ ಮುನ್ನ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಮಾನ್ಯ ಜನರಿಗೆ ದೊಡ್ಡ ಉಡುಗೊರೆ ನೀಡಲು ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ, ಆಗಸ್ಟ್ನಲ್ಲಿ ನಡೆಯಲಿರುವ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ, RBI ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು (bps) ಕಡಿತಗೊಳಿಸಬಹುದು. ಹೀಗಾದಲ್ಲಿ ಗೃಹ ಸಾಲಗಳು, ಕಾರು ಸಾಲಗಳು ಮತ್ತು ವೈಯಕ್ತಿಕ ಸಾಲಗಳ EMI ಅಗ್ಗವಾಗಬಹುದು. ಇದು ಸಾರ್ವಜನಿಕರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ರಿಸರ್ಚ್ ರಿಪೋರ್ಟ್ RBI ಆಗಸ್ಟ್ ನೀತಿಯಲ್ಲಿ "ಫ್ರಂಟ್ ಲೋಡ್" ಅಂದರೆ ಪೂರ್ವ-ನಿರ್ಧರಿತ ಕಡಿತ ತಂತ್ರವನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳುತ್ತದೆ. ಈ ಕ್ರಮವು 'ಅರ್ಲಿ ದೀಪಾವಳಿ' ಅಂದರೆ ಆರಂಭಿಕ ಆರ್ಥಿಕ ಉತ್ಸಾಹವನ್ನು ತರಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.
2017 ರ ಉದಾಹರಣೆಯನ್ನು ಉಲ್ಲೇಖಿಸಿ, ಆಗಸ್ಟ್ 2017 ರಲ್ಲಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿತಗೊಳಿಸಿದ ನಂತರ, ದೀಪಾವಳಿಯವರೆಗೆ 1.95 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲದ ಬೆಳವಣಿಗೆ ಕಂಡುಬಂದಿದೆ ಎಂದು ಎಸ್ಬಿಐ ಹೇಳಿದೆ. ಇದರಲ್ಲಿ ಸುಮಾರು 30% ವೈಯಕ್ತಿಕ ಸಾಲಗಳಿಂದಲೇ ಬಂದಿದೆ. ಇದರರ್ಥ ದೀಪಾವಳಿಗೆ ಮೊದಲು ಬಡ್ಡಿದರಗಳನ್ನು ಕಡಿಮೆ ಮಾಡಿದಾಗಲೆಲ್ಲಾ, ಮಾರುಕಟ್ಟೆಯಲ್ಲಿ ಸಾಲಗಳ ಬೇಡಿಕೆ ಮತ್ತು ಬಳಕೆ ಹೆಚ್ಚಾಗಿದೆ.
ವರದಿಯಲ್ಲಿ ಏನಿದೆ?:
ಹಣದುಬ್ಬರವು ಪ್ರಸ್ತುತ ಆರ್ಬಿಐನ ಗುರಿ ವ್ಯಾಪ್ತಿಯಲ್ಲಿದೆ ಎಂದು ವರದಿ ಹೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ಹಣಕಾಸು ನೀತಿಯನ್ನು ಬಿಗಿಯಾಗಿ ಇಡುವುದು ಆರ್ಥಿಕ ಬೆಳವಣಿಗೆಗೆ ಹಾನಿ ಮಾಡುತ್ತದೆ. ಹಣಕಾಸು ನೀತಿಯ ಪರಿಣಾಮ ವಿಳಂಬವಾಗುವುದರಿಂದ, ದರಗಳನ್ನು ಕಡಿಮೆ ಮಾಡುವಲ್ಲಿ ಆರ್ಬಿಐ ವಿಳಂಬ ಮಾಡಿದರೆ, ಹೂಡಿಕೆ ಮತ್ತು ಬಳಕೆ ಎರಡಕ್ಕೂ ಹಾನಿಯಾಗಬಹುದು. ಈಗ ಕಾಯುವುದರಿಂದ ಯಾವುದೇ ವಿಶೇಷ ಪ್ರಯೋಜನವಿಲ್ಲ ಎನ್ನುವುದು ಎಸ್ಬಿಐ ಅಭಿಪ್ರಾಯ. ಆರ್ಬಿಐ ದರಗಳನ್ನು ಕಡಿಮೆ ಮಾಡಿದರೆ ಅದು ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುತ್ತದೆ ಮತ್ತು ಹೂಡಿಕೆ ವಾತಾವರಣವು ಸುಧಾರಿಸುತ್ತದೆ.