)
Bank of india FD: ಮಾರುಕಟ್ಟೆಯ ಏರಿಳಿತ ಮತ್ತು ಅನಿಶ್ಚಿತತೆಯ ಸಮಯದಲ್ಲಿ ಇಂದಿಗೂ ಸ್ಥಿರ ಠೇವಣಿಗಳನ್ನ (FD ಗಳು) ಸುರಕ್ಷಿತ ಹೂಡಿಕೆಗೆ ಬಲವಾದ ಆಯ್ಕೆಯೆಂದು ಪರಿಗಣಿಸಲಾಗುತ್ತದೆ. ನೀವು ಅಪಾಯ ಮುಕ್ತ ಮತ್ತು ಖಾತರಿಯ ಆದಾಯ ಬಯಸಿದರೆ, ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾದ 3 ವರ್ಷಗಳ FD ಯೋಜನೆಯು ಪ್ರಯೋಜನಕಾರಿ. ನೀವು ಇಲ್ಲಿ ಮೂರು ವರ್ಷಗಳವರೆಗೆ ₹2 ಲಕ್ಷ ಠೇವಣಿ ಇಟ್ಟರೆ, ಮುಕ್ತಾಯದ ನಂತರ ನೀವು ಎಷ್ಟು ಹಣ ಪಡೆಯುತ್ತೀರಿ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
FD ಅವಧಿ
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷಗಳ ಅವಧಿಗೆ ಎಫ್ಡಿ ಖಾತೆಗಳನ್ನ ತೆರೆಯಬಹುದು. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಅವಧಿ ಮತ್ತು ಹೂಡಿಕೆದಾರರ ವರ್ಗವನ್ನ ಅವಲಂಬಿಸಿ 3ರಿಂದ 7.35%ವರೆಗೆ ಬಡ್ಡಿದರಗಳನ್ನ ನೀಡುತ್ತದೆ.
3 ವರ್ಷಗಳ FD ಮೇಲೆ ಎಷ್ಟು ಬಡ್ಡಿ ಇದೆ?
ಬ್ಯಾಂಕ್ 3 ವರ್ಷಗಳ ಎಫ್ಡಿ ಮೇಲೆ ವಿವಿಧ ವರ್ಗಗಳಿಗೆ ವಿಭಿನ್ನ ಬಡ್ಡಿದರಗಳನ್ನ ನೀಡುತ್ತಿದೆ.
* ಸಾಮಾನ್ಯ ನಾಗರಿಕರಿಗೆ 6.25% ವಾರ್ಷಿಕ ಬಡ್ಡಿ
* ಹಿರಿಯ ನಾಗರಿಕರಿಗೆ 6.75% ವಾರ್ಷಿಕ ಬಡ್ಡಿ
* ಹಿರಿಯ ನಾಗರಿಕರಿಗೆ 6.90% ವಾರ್ಷಿಕ ಬಡ್ಡಿ
ಈ ಬಡ್ಡಿದರಗಳು ನಿಮ್ಮ ಹೂಡಿಕೆಯ ಅಂತಿಮ ಲಾಭವನ್ನ ನಿರ್ಧರಿಸುತ್ತವೆ.
2 ಲಕ್ಷ ಠೇವಣಿ ಇಟ್ಟರೆ ಎಷ್ಟು ಸಿಗುತ್ತದೆ?
ಸಾಮಾನ್ಯ ನಾಗರಿಕರಿಗೆ: ಯಾವುದೇ ಒಬ್ಬ ಹೂಡಿಕೆದಾರ ₹200,000ವ್ನ ಮೂರು ವರ್ಷಗಳ ಕಾಲ 6.25% ಬಡ್ಡಿದರದಲ್ಲಿ ಠೇವಣಿ ಇಟ್ಟರೆ, ಮುಕ್ತಾಯದ ನಂತರ ಒಟ್ಟು ₹240,897 ಅವರು ಪಡೆಯುತ್ತಾರೆ. ಇದರಲ್ಲಿ ಸರಿಸುಮಾರು ₹40,897 ಬಡ್ಡಿ ಲಾಭ ದೊರೆಯುತ್ತದೆ.
ಹಿರಿಯ ನಾಗರಿಕರು: 6.75% ಬಡ್ಡಿದರದಲ್ಲಿ ಅದೇ ಮೊತ್ತವು ಮೂರು ವರ್ಷಗಳಲ್ಲಿ ₹244,479ಕ್ಕೆ ಬೆಳೆಯುತ್ತದೆ, ಅಂದರೆ ಸರಿಸುಮಾರು ₹44,479 ಬಡ್ಡಿ ಪ್ರಯೋಜನ ಸಿಗುತ್ತದೆ.
ಅತಿ ಹಿರಿಯ ನಾಗರಿಕರು: 6.90% ದರದಲ್ಲಿ ಹೂಡಿಕೆ ಮಾಡುವುದರಿಂದ ₹2,45,563 ಮೊತ್ತದ ಮೆಚ್ಯೂರಿಟಿ ಮೊತ್ತ ಸಿಗುತ್ತದೆ. ಅಂದರೆ ₹45,563ವರೆಗಿನ ಬಡ್ಡಿ ಲಾಭ ದೊರೆಯುತ್ತದೆ.
ಯಾರಿಗೆ ಇದು ಉತ್ತಮ ಆಯ್ಕೆ?
ಸುರಕ್ಷಿತ ಮತ್ತು ಸ್ಥಿರ ಆದಾಯ ಬಯಸುವ ಹೂಡಿಕೆದಾರರಿಗೆ ಈ FD ಯೋಜನೆ ಉತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಹಿರಿಯ ಮತ್ತು ಅತಿ ಹಿರಿಯ ನಾಗರಿಕರು ಹೆಚ್ಚುವರಿ ಬಡ್ಡಿದರದಿಂದ ಪ್ರಯೋಜನ ಪಡೆಯುತ್ತಾರೆ, ಇದು ಅವರ ಆದಾಯವನ್ನ ಮತ್ತಷ್ಟು ಸುಧಾರಿಸುತ್ತದೆ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)