ಪ್ರತೀ ಮನೆಯಲ್ಲಿ ಅಡುಗೆಗೆ ಬಳಸುವ ಇದೊಂದು ಪದಾರ್ಥ ಭಾರತಕ್ಕೆ ಆಮದು ಆಗುವುದು ಪಾಕಿಸ್ತಾನದಿಂದ...! ಬೇಡವೆಂದು ದೂರ ಮಾಡಲೂ ಸಾಧ್ಯವಾಗದ ವಸ್ತುವದು

india import from pakistan 2024: ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಭಾರತದಿಂದ ರಫ್ತಾಗುವ ಮತ್ತು ಪಾಕ್‌ನಿಂದ ಭಾರತಕ್ಕೆ ಆಮದು ಆಗುವ ಪ್ರಮುಖ ವಸ್ತುಗಳು ಯಾವುವು? ಸುಂಕದ ವಿವರ ಎಷ್ಟು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.  

Written by - Bhavishya Shetty | Last Updated : Apr 26, 2025, 03:15 PM IST
    • ಪಾಕಿಸ್ತಾನದ ವಿರುದ್ಧ ಪ್ರಮುಖ ಕ್ರಮ ಕೈಗೊಂಡ ಭಾರತ
    • ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟು ವ್ಯಾಪಾರ ನಡೆಯುತ್ತದೆ?
    • ಪಾಕಿಸ್ತಾನಕ್ಕೆ ಭಾರತದಿಂದ ರಫ್ತಾಗುವ ವಸ್ತುಗಳು ಯಾವುವು?
ಪ್ರತೀ ಮನೆಯಲ್ಲಿ ಅಡುಗೆಗೆ ಬಳಸುವ ಇದೊಂದು ಪದಾರ್ಥ ಭಾರತಕ್ಕೆ ಆಮದು ಆಗುವುದು ಪಾಕಿಸ್ತಾನದಿಂದ...! ಬೇಡವೆಂದು ದೂರ ಮಾಡಲೂ ಸಾಧ್ಯವಾಗದ ವಸ್ತುವದು
India Pakistan import export list

india import from pakistan 2024: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತ ಬುಧವಾರ ಪಾಕಿಸ್ತಾನದ ವಿರುದ್ಧ ಪ್ರಮುಖ ಕ್ರಮ ಕೈಗೊಂಡು ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿತು. ಇದರಲ್ಲಿ ಸಿಂಧೂ ನದಿ ನೀರು ಒಪ್ಪಂದದ ಮೇಲಿನ ನಿಷೇಧ, ಪಾಕಿಸ್ತಾನಿ ನಾಗರಿಕರಿಗೆ ವೀಸಾ ನೀಡುವುದನ್ನು ನಿಷೇಧಿಸುವುದು, ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚುವುದು ಮುಂತಾದ ನಿರ್ಧಾರಗಳು ಸೇರಿವೆ. ಇದಾದ ನಂತರ, ಗುರುವಾರ, ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು. ಇದಲ್ಲದೆ, ಪಾಕಿಸ್ತಾನ ಇದೀಗ ಭಾರತದ ಜೊತೆಗಿನ ವ್ಯಾಪಾರವನ್ನು ಸಹ ನಿಲ್ಲಿಸಿದೆ.

Add Zee News as a Preferred Source

ಇದನ್ನೂ ಓದಿ: ಮೇ ತಿಂಗಳಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಿದ ಸರ್ಕಾರ : ಕೈ ಸೇರಲಿರುವ ಮೊತ್ತ ಎಷ್ಟು ಎನ್ನುವ ಲೆಕ್ಕಾಚಾರ ಇಲ್ಲಿದೆ

ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟು ವ್ಯಾಪಾರ ನಡೆಯುತ್ತದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಎರಡೂ ದೇಶಗಳ ನಡುವಿನ ವ್ಯಾಪಾರದಲ್ಲಿ ಭಾರತವು ಪಾಕಿಸ್ತಾನಕ್ಕೆ ಹೆಚ್ಚು ರಫ್ತು ಮಾಡುತ್ತದೆ. ಆದರೆ ಪಾಕಿಸ್ತಾನದಿಂದ ಬಹಳ ಕಡಿಮೆ ವಸ್ತುಗಳನ್ನು ಖರೀದಿ ಮಾಡಲಾಗುತ್ತದೆ. 2019 ರ ಪುಲ್ವಾಮಾ ದಾಳಿಯ ನಂತರ, ಭಾರತವು ಪಾಕಿಸ್ತಾನದಿಂದ ಸರಕುಗಳ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ರೀತಿಯಾಗಿ, ಪಾಕಿಸ್ತಾನದಿಂದ ಆಮದುಗಳು ನಗಣ್ಯ. ಮತ್ತೊಂದೆಡೆ, 2020 ಕ್ಕೆ ಹೋಲಿಸಿದರೆ 2024 ರ ವೇಳೆಗೆ ಪಾಕಿಸ್ತಾನಕ್ಕೆ ಭಾರತದ ರಫ್ತು ಶೇಕಡಾ 300 ರಷ್ಟು ಹೆಚ್ಚಾಗಿದೆ.

2018ರಲ್ಲಿ ವ್ಯವಹಾರ:
2024 ರಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರವು 5 ವರ್ಷಗಳಲ್ಲಿ ಅತ್ಯಧಿಕವಾಗಿತ್ತು. 2024 ರಲ್ಲಿ, ಎರಡೂ ದೇಶಗಳ ನಡುವಿನ ವ್ಯಾಪಾರವು $1.21 ಶತಕೋಟಿ ಅಂದರೆ 10 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚಿತ್ತು. ಆದರೆ, ಇತರ ದೇಶಗಳೊಂದಿಗಿನ ನಮ್ಮ ವ್ಯಾಪಾರಕ್ಕೆ ಹೋಲಿಸಿದರೆ ಇದು ಏನೂ ಅಲ್ಲ. ಪುಲ್ವಾಮಾ ದಾಳಿಗೂ ಮುನ್ನ, 2018 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರವು ದಾಖಲೆಯ 2.35 ಬಿಲಿಯನ್ ಡಾಲರ್‌ಗಳನ್ನು ತಲುಪಿತ್ತು. 2019 ರಲ್ಲಿ ಪುಲ್ವಾಮಾ ದಾಳಿಯ ನಂತರ, ಭಾರತವು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವುದನ್ನು ಬಹುತೇಕ ನಿಲ್ಲಿಸಿತ್ತು.

ಪಾಕಿಸ್ತಾನಿ ಉತ್ಪನ್ನಗಳ ಮೇಲೆ 200% ಸುಂಕ:
ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಶೇ.200 ರಷ್ಟು ಸುಂಕ ವಿಧಿಸಿದೆ. ಭಾರತವು ಪಾಕಿಸ್ತಾನದ ಅತ್ಯಂತ ಆಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಂಡಿತು. ಇದರಿಂದಾಗಿ, ಪಾಕಿಸ್ತಾನದಿಂದ ಭಾರತಕ್ಕೆ ರಫ್ತು 2019 ರಲ್ಲಿ $547 ಮಿಲಿಯನ್‌ನಿಂದ 2024 ರಲ್ಲಿ $48 ಮಿಲಿಯನ್‌ಗೆ ಇಳಿದಿದೆ. 2019 ರಲ್ಲಿ, ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದಾಗ, ಪಾಕಿಸ್ತಾನವು ಭಾರತದೊಂದಿಗಿನ ಎಲ್ಲಾ ದ್ವಿಪಕ್ಷೀಯ ವ್ಯಾಪಾರವನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. ಆದರೆ, ಪಾಕಿಸ್ತಾನದಲ್ಲಿ ಹಣದುಬ್ಬರ ಹೆಚ್ಚಾದಾಗ, ಅದು ಈ ನಿರ್ಧಾರವನ್ನು ಹಿಂತೆಗೆದುಕೊಂಡಿತು.

ಇದನ್ನೂ ಓದಿ: ಮಧುಮೇಹಿಗಳಿಗೆ ಔಷಧಕ್ಕಿಂತಲೂ ಹೆಚ್ಚು ಈ ಸೊಪ್ಪು! ಊಟದಲ್ಲಿ ಸೇರಿಸಿಕೊಂಡ್ರೆ ಹೆಚ್ಚಾಗಲ್ಲ ಬ್ಲಡ್‌ ಶುಗರ್..

ಪಾಕಿಸ್ತಾನಕ್ಕೆ ರಫ್ತಾಗುವುದೇನು?
ಭಾರತ ಪಾಕಿಸ್ತಾನಕ್ಕೆ ರಫ್ತು ಮಾಡುವ ಸರಕುಗಳಲ್ಲಿ ಸಾವಯವ ರಾಸಾಯನಿಕಗಳು, ಔಷಧೀಯ ಉತ್ಪನ್ನಗಳು, ಖನಿಜಗಳು, ಸಕ್ಕರೆ ಮತ್ತು ಸಿಹಿತಿಂಡಿಗಳು ಸೇರಿವೆ. ಅದೇ ಸಮಯದಲ್ಲಿ, ಪಾಕಿಸ್ತಾನವು ಭಾರತಕ್ಕೆ ಉಪ್ಪು, ಗಂಧಕ, ಸುಣ್ಣ, ಬಟ್ಟೆ ಮತ್ತು ಸಿಮೆಂಟ್ ಅನ್ನು ರಫ್ತು ಮಾಡುತ್ತದೆ. ಭಾರತದಲ್ಲಿ ಪಾಕಿಸ್ತಾನಿ ಉತ್ಪನ್ನಗಳ ಮೇಲೆ ಇನ್ನೂ ಶೇ. 200 ರಷ್ಟು ಸುಂಕವಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News