ಭವಿಷ್ಯದ ಪೀಳಿಗೆಗೆ ಪ್ರಕೃತಿಯನ್ನು ಉಳಿಸಲು ಪತಂಜಲಿಯ ಹಸಿರು ಉಪಕ್ರಮಗಳು ಏನು ಮಾಡುತ್ತಿವೆ? ಎನ್ನುವುದು ಬಹಳ ಮುಖ್ಯ.

ಭಾರತದ ಅಗ್ರ FMCG ಬ್ರ್ಯಾಂಡ್ಗಳಲ್ಲಿ ಒಂದಾದ ಪತಂಜಲಿ, ತನ್ನ ಕಾರ್ಯಾವೈಖರಿಯಲ್ಲಿ ಪರಿಸರದ ಬಗ್ಗೆ ಕಾಳಜಿ ವಹಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಕಂಪನಿಯು ಹಸಿರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಪರಿಸರಕ್ಕೆ ಅನುಕೂಲಕರವಾದ ವಿಧಾನಗಳನ್ನು ಸಹ ಅಳವಡಿಸಿಕೊಳ್ಳುತ್ತಿದೆ. ಪ್ರಕೃತಿಯನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಭೂಮಿಯನ್ನು ಆರೋಗ್ಯಕರವಾಗಿಸುವುದು ಕಂಪನಿಯ ಮುಖ್ಯ ಉದ್ದೇಶವಾಗಿದೆ.
ಪತಂಜಲಿ ತನ್ನ ವ್ಯವಹಾರ ಮಾದರಿಯಲ್ಲಿ ಪರಿಸರ ಕಾಳಜಿಯನ್ನು ಸೇರಿಸಿಕೊಂಡಿದೆ. ಈ ಮೂಲಕ, ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಬೇಕೆನ್ನುವ ಪಾಠವನ್ನು ಕಲಿಸುತ್ತಿದೆ. ಅವರು ತಯಾರಿಸುವ ಸಾವಯವ ಉತ್ಪನ್ನಗಳು ಮತ್ತು ಪರಿಸರವನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ನೀತಿಗಳು ನಮ್ಮ ದೇಹಕ್ಕೆ ಮಾತ್ರವಲ್ಲದೆ ಇಡೀ ಭೂಮಿಯ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
ಪರಿಸರದ ಬಗ್ಗೆ ಪತಂಜಲಿಯ ಮನೋಭಾವ :
ಆಯುರ್ವೇದ ಮತ್ತು ಪರಿಸರ ಪರಸ್ಪರ ಪ್ರತ್ಯೇಕವಾಗಿಲ್ಲ ಎನ್ನುವುದು ಪತಂಜಲಿಯ ನಂಬಿಕೆ. ಆಯುರ್ವೇದಕ್ಕೆ ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಶುದ್ಧ ಪರಿಸರ ಅಗತ್ಯ. ಅದಕ್ಕಾಗಿಯೇ ಪತಂಜಲಿ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವುದಲ್ಲದೆ, ಪ್ರಕೃತಿಯ ಬಗ್ಗೆ ಸಹ ಕಾಳಜಿ ವಹಿಸುತ್ತದೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಿದಾಗ ಮಾತ್ರ ಉತ್ತಮ ಆರೋಗ್ಯ ಸಾಧ್ಯ ಎನ್ನುವುದು ಕಂಪನಿಯ ನಂಬಿಕೆ. ಏಕೆಂದರೆ ಪತಂಜಲಿ ಕೇವಲ ವ್ಯವಹಾರಕ್ಕಾಗಿ ಮಾತ್ರವಲ್ಲದೆ ಒಂದು ದೂರದೃಷ್ಟಿಯೊಂದಿಗೆ ಪರಿಸರವನ್ನು ಉಳಿಸುವ ಕೆಲಸ ಮಾಡುತ್ತಿದೆ. ಅವರ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ, ಹೆಚ್ಚಾಗಿ ಪರಿಸರವನ್ನು ರಕ್ಷಿಸುವ ಮತ್ತು ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುವ ಕೆಲಸವನ್ನು ಮಾಡಲಾಗುತ್ತಿದೆ.
ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವುದು :
ಪತಂಜಲಿ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಕಂಪನಿಯು ಮರಗಳನ್ನು ನೆಡಲು ಅಭಿಯಾನಗಳನ್ನು ನಡೆಸುತ್ತದೆ. ನೀರು ಉಳಿಸುವ ಕಾರ್ಯಕ್ರಮದಲ್ಲಿ ಕೆಲಸ ಮಾಡಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ನೀರನ್ನು ಸ್ವಚ್ಛವಾಗಿಡುವುದು, ಮಳೆನೀರು ಸಂಗ್ರಹಿಸುವುದು ಮತ್ತು ಸ್ವಚ್ಛಗೊಳಿಸುವಂತಹ ಚಟುವಟಿಕೆಗಳ ಮೂಲಕ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ.
ಪರಿಸರಕ್ಕೆ ಹಾನಿಯಾಗದಂತೆ ಉತ್ಪಾದನೆ :
ಪತಂಜಲಿ ತನ್ನ ಉತ್ಪಾದನೆ ಮತ್ತು ಪೂರೈಕೆ ಕೆಲಸದಲ್ಲಿ ಪರಿಸರಕ್ಕೆ ಹಾನಿಯಾಗದ ವಿಧಾನಗಳನ್ನು ಅನುಸರಿಸುತ್ತದೆ. ಕಂಪನಿಯು ಕಡಿಮೆ ಶಕ್ತಿಯನ್ನು ಬಳಸುವ, ಕಡಿಮೆ ತ್ಯಾಜ್ಯವನ್ನು ಉತ್ಪಾದಿಸುವ ಮತ್ತು ಸಾಧ್ಯವಾದಾಗಲೆಲ್ಲಾ ಮರುಬಳಕೆ ಮಾಡುವ ಸ್ಥಾವರಗಳನ್ನು ನಿರ್ವಹಿಸುತ್ತದೆ. ಇದಲ್ಲದೆ, ಪತಂಜಲಿ ನೀರನ್ನು ನಿರ್ವಹಿಸಲು ವಿಶೇಷ ಉಪಕ್ರಮಗಳನ್ನು ತೆಗೆದುಕೊಳ್ಳುತ್ತದೆ.ಆದ್ದರಿಂದ ನೀರು ಪೋಲಾಗುವುದನ್ನು ಕಡಿಮೆ ಮಾಡಬಹುದು.
ಪರಿಸರವನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳ ಪ್ಯಾಕೇಜಿಂಗ್ :
FMCG ವಲಯದಲ್ಲಿ ಪ್ಯಾಕೇಜಿಂಗ್ ಸಾಮಾನ್ಯವಾಗಿ ತ್ಯಾಜ್ಯದ ಪ್ರಮುಖ ಮೂಲವಾಗಿದೆ. ಪತಂಜಲಿ ಪ್ಯಾಕೇಜಿಂಗ್ ಅನ್ನು ಬದಲಾಯಿಸಲು ಪ್ರಯತ್ನಿಸಿದೆ. ಜೈವಿಕ ವಿಘಟನೀಯ ಪ್ಲಾಸ್ಟಿಕ್ ಮತ್ತು ಮರುಬಳಕೆ ಮಾಡಬಹುದಾದ ವಸ್ತುಗಳಂತಹ ಸುಲಭವಾಗಿ ಕೊಳೆಯಬಹುದಾದ ಅಥವಾ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಪ್ಯಾಕೆಜಿಂಗ್ ಗೆ ಬಳಸುತ್ತಿದೆ. ಕಂಪನಿಯು ಈಗ ಕ್ರಮೇಣ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಹಂತಹಂತವಾಗಿ ತೆಗೆದುಹಾಕುತ್ತಿದೆ. ಬದಲಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಪ್ರಚಾರ ಮಾಡುತ್ತಿದೆ. ಈ ರೀತಿಯಾಗಿ ಪತಂಜಲಿ ಇತರ ಕಂಪನಿಗಳಿಗೂ ಮಾದರಿಯಾಗಿದೆ. ಈ ಹಸಿರು ಪ್ಯಾಕೇಜಿಂಗ್ ತ್ಯಾಜ್ಯವನ್ನು ಕಡಿಮೆ ಮಾಡುವುದಲ್ಲದೆ, ಪರಿಸರ ಸ್ನೇಹಿ ವಸ್ತುಗಳತ್ತ ಸಾಗಬೇಕು ಎನ್ನುವುದನ್ನು ಜನರಿಗೆ ಅರ್ಥವಾಗುವಂತೆ ಮಾಡುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.