How to check PF Balance Online?: ಪ್ರತಿ ತಿಂಗಳು ಸಂಬಳ ಪಡೆಯುವ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹೊಂದಿರುತ್ತಾರೆ. ತಮ್ಮ ಕಂಪನಿ ಪಿಎಫ್‌ನಲ್ಲಿ ಹಣವನ್ನು ಠೇವಣಿ ಮಾಡುತ್ತಿದೆಯೇ ಅಥವಾ ಇಲ್ಲವೇ? ಎಷ್ಟು ಬಡ್ಡಿ ಸಿಗುತ್ತಿದೆ? ಪಿಎಫ್ ಖಾತೆಯಲ್ಲಿನ ಬ್ಯಾಲೆನ್ಸ್ ಎಷ್ಟು? ಹಳೆಯ ಪಿಎಫ್ ಏನಾಯಿತು..? ಇಂತಹ ಹಲವು ಪ್ರಶ್ನೆಗಳು ಜನರ ಮನಸ್ಸಿನಲ್ಲಿರುತ್ತವೆ. ನಿಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನ ನಿಯಮಿತವಾಗಿ ಪರಿಶೀಲಿಸುತ್ತಿದ್ದರೆ, ಈ ಹಲವು ಪ್ರಶ್ನೆಗಳಿಗೆ ನಿಮಗೆ ಉತ್ತರ ಸಿಗುತ್ತವೆ. ಪಿಎಫ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು ತುಂಬಾ ಸುಲಭ. ನೀವು ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ನಿಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನ ಪರಿಶೀಲಿಸಬಹುದು. ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ ನೋಡಿ...
ಒಂದೇ ಒಂದು ಮಿಸ್ಡ್ ಕಾಲ್ ಮಾಡಿ
ನಿಮ್ಮ ಮೊಬೈಲ್ ಸಂಖ್ಯೆಯನ್ನ UANನಲ್ಲಿ ನೋಂದಾಯಿಸಿದ್ದರೆ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನೀವು ಮಾಹಿತಿ ಪಡೆಯಬಹುದು. ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡಿದ ನಂತರ ನೀವು EPFOನಿಂದ ಕೆಲವು ಸಂದೇಶಗಳನ್ನು ಸ್ವೀಕರಿಸುತ್ತೀರಿ. ಇದರಲ್ಲಿ ನೀವು ನಿಮ್ಮ PF ಖಾತೆಗಳ ಬ್ಯಾಲೆನ್ಸ್ ಅನ್ನ ನೋಡುತ್ತೀರಿ.
ಇದನ್ನೂ ಓದಿ: ತಮಿಳು Vs ಹಿಂದಿ.. ರಾಷ್ಟ್ರೀಯ ರೂಪಾಯಿ ಚಿಹ್ನೆಯನ್ನೇ ಬದಲಾಯಿಸಿದ ತಮಿಳುನಾಡು..!
SMS ಮೂಲಕವೂ ಸಿಗುತ್ತೆ ಮಾಹಿತಿ
7738299899ಗೆ SMS ಕಳುಹಿಸುವ ಮೂಲಕ ನಿಮ್ಮ EPF ಖಾತೆಯ ಬ್ಯಾಲೆನ್ಸ್ ಮತ್ತು ನಿಮ್ಮ ಖಾತೆಯಲ್ಲಿ ಅಪ್‌ಡೇಟ್ ಆದ ಮೊತ್ತವನ್ನು ಸಹ ನೀವು ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ನೋಂದಾಯಿತ ಸಂಖ್ಯೆಯಿಂದ AN EPFOHO ENG ಎಂದು ಟೈಪ್ ಮಾಡಿ ಸಂದೇಶವನ್ನು ಕಳುಹಿಸಬೇಕು. ಇಲ್ಲಿ ENG ಎಂದರೆ ಇಂಗ್ಲಿಷ್. ನೀವು ಬೇರೆ ಭಾಷೆಯಲ್ಲಿ ತಿಳಿದುಕೊಳ್ಳಲು ಬಯಸಿದರೆ, ಆ ಭಾಷೆಯ ಮೊದಲ ಮೂರು ಅಕ್ಷರಗಳನ್ನು ಬರೆದು SMS ಮಾಡಬೇಕು.
ಇಪಿಎಫ್‌ಒ ಪೋರ್ಟಲ್
ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ʼEmployees sectionʼಅನ್ನು ಕ್ಲಿಕ್ ಮಾಡಿ. ನಂತರ ಸದಸ್ಯರ ಪಾಸ್‌ಬುಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ನೀವು PF ಪಾಸ್‌ಬುಕ್‌ಗೆ ಎಂಟ್ರಿಯಾಗಬಹುದು. ಇದು opening ಮತ್ತು closing ಬ್ಯಾಲೆನ್ಸ್ ಹಾಗೂ ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆ (contributions) ಗಳನ್ನು ತೋರಿಸುತ್ತದೆ. ಪಿಎಫ್ ವರ್ಗಾವಣೆಯ ಒಟ್ಟು ಮೊತ್ತ ಮತ್ತು ಸಂಗ್ರಹವಾದ ಪಿಎಫ್ ಬಡ್ಡಿಯ ಮೊತ್ತವೂ ಗೋಚರಿಸುತ್ತದೆ. ಇಪಿಎಫ್ ಬ್ಯಾಲೆನ್ಸ್ ಅನ್ನು ಪಾಸ್‌ಬುಕ್‌ನಲ್ಲಿಯೂ ನೀವು ನೋಡಬಹುದು.
ಇದನ್ನೂ ಓದಿ: ಅಂಚೆ ಕಚೇರಿಯ ಈ ವಿಶೇಷ ಯೋಜನೆಯಲ್ಲಿ 5ಲಕ್ಷ ಹೂಡಿಕೆ ಮಾಡಿ 15 ಲಕ್ಷ ಗಳಿಸಬಹುದು, ಹೇಗ್ ಗೊತ್ತಾ...!
ಉಮಾಂಗ್ ಅಪ್ಲಿಕೇಶನ್
ನೀವು ಉಮಾಂಗ್ ಅಪ್ಲಿಕೇಶನ್‌ನಿಂದಲೂ ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ನಾಗರಿಕರಿಗೆ ಒಂದೇ ಸ್ಥಳದಲ್ಲಿ ವಿವಿಧ ಸರ್ಕಾರಿ ಸೇವೆಗಳನ್ನು ಪಡೆಯಲು ಸರ್ಕಾರ ಉಮಾಂಗ್ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಉಮಾಂಗ್ ಅಪ್ಲಿಕೇಶನ್ ಬಳಸಿ ನೀವು ಕ್ಲೈಮ್‌ಗಳನ್ನು ಸಲ್ಲಿಸಬಹುದು. ನಿಮ್ಮ ಇಪಿಎಫ್ ಪಾಸ್‌ಬುಕ್ ವೀಕ್ಷಿಸಬಹುದು ಮತ್ತು ನಿಮ್ಮ ಕ್ಲೈಮ್‌ಗಳನ್ನು ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ ನೀವು ಅಪ್ಲಿಕೇಶನ್‌ನಲ್ಲಿ ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









