ಇಪಿಎಫ್ ಆನ್‌ಲೈನ್ ನಾಮಿನೇಷನ್: 7 ಲಕ್ಷ ರೂ. ವಿಮೆ ಲಾಭಕ್ಕಾಗಿ ಕುಟುಂಬ ಸದಸ್ಯರನ್ನು ನೋಂದಾಯಿಸುವುದು ಹೇಗೆ?
ಇಪಿಎಫ್ ಆನ್‌ಲೈನ್ ನಾಮನಿರ್ದೇಶನ: ಇಪಿಎಫ್ ಚಂದಾದಾರರು ಆನ್‌ಲೈನ್ ನಾಮಿನೇಷನ್ ಮಾಡುವುದು ಹೇಗೆ? 7 ಲಕ್ಷ ರೂ. ವಿಮೆ ಲಾಭಕ್ಕಾಗಿ ಕುಟುಂಬ ಸದಸ್ಯರನ್ನು ನೋಂದಾಯಿಸುವುದು ಹೇಗೆ ಎಂದು ತಿಳಿಯಿರಿ.
ಇಪಿಎಫ್ ಆನ್‌ಲೈನ್ ನಾಮಿನೇಷನ್: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇತ್ತೀಚೆಗೆ ಭವಿಷ್ಯ ನಿಧಿ (ಪಿಎಫ್) ಖಾತೆಗೆ ಇ-ನಾಮನಿರ್ದೇಶನ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಪ್ರಕಟಣೆಯ ಪ್ರಕಾರ, ಇಪಿಎಫ್ಒನಲ್ಲಿ ಇ-ನಾಮನಿರ್ದೇಶನವನ್ನು ಸಲ್ಲಿಸದಿದ್ದಲ್ಲಿ, ಬಳಕೆದಾರರು ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಸಾಧ್ಯವಾಗುವುದಿಲ್ಲ.
ಉದ್ಯೋಗಿಗಳ ಭವಿಷ್ಯ ನಿಧಿ ಸದಸ್ಯರು ಈಗ ತಮ್ಮ ಕುಟುಂಬದ ಸದಸ್ಯರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಬಹುದು. ಆದರೆ, ಪ್ರಯೋಜನಗಳನ್ನು ಪಡೆಯಲು, ಪಿಎಫ್ ಖಾತೆದಾರರು ಇ-ನಾಮನಿರ್ದೇಶನವನ್ನು ಸಲ್ಲಿಸಬೇಕು. ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ, ಬದಲಿಗೆ ನೀವು ಕುಳಿತಲ್ಲಿಯೇ ಈ ಕೆಲಸವನ್ನು ಪೂರ್ಣಗೊಳಿಸಬಹುದು.
ಇಪಿಎಫ್ ಆನ್‌ಲೈನ್ ನಾಮಿನೇಷನ್ ಪಿಎಫ್, ಪಿಂಚಣಿ ಮತ್ತು ಉದ್ಯೋಗಿ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್ (ಇಡಿಎಲ್‌ಐ) ಅರ್ಹ ಕುಟುಂಬ ಸದಸ್ಯರಿಗೆ 7 ಲಕ್ಷ ರೂ.ವರೆಗೆ ವಿಮೆ ಸೌಲಭ್ಯವನ್ನು ಒದಗಿಸುತ್ತದೆ.
ಇದನ್ನೂ ಓದಿ- New Wage Code ಹೊಸ ಅಪ್‌ಡೇಟ್ ಜೊತೆಗೆ ಯಾವಾಗ ಜಾರಿ? ಇಲ್ಲಿದೆ ಮಾಹಿತಿ
ಇ-ನಾಮನಿರ್ದೇಶನವನ್ನು ಈಗ ಇಪಿಎಫ್ಒನಲ್ಲಿ ನೋಂದಾಯಿಸಲಾಗಿದೆ. ಇ-ನೋಂದಣಿ ನಂತರ, ಹೆಚ್ಚಿನ ಭೌತಿಕ ದಾಖಲೆಗಳ ಅಗತ್ಯವಿಲ್ಲ.
ಇಪಿಎಫ್ ಆನ್‌ಲೈನ್ ನಾಮಿನೇಷನ್ ಪ್ರಕ್ರಿಯೆ:
>> ನೀವು ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಸೇವೆಗಳ ವಿಭಾಗಕ್ಕೆ ಹೋಗಿ ಮತ್ತು ನಂತರ 'ಉದ್ಯೋಗಿಗಳಿಗಾಗಿ' ವರ್ಗಕ್ಕೆ ಹೋಗಿ.
>> ನೀವು 'ಸದಸ್ಯ ಯುಎಎನ್/ಆನ್‌ಲೈನ್ ಸೇವೆ' ಮೇಲೆ ಕ್ಲಿಕ್ ಮಾಡಬೇಕು.
>> ಯುನಿವರ್ಸಲ್ ಖಾತೆ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.
>> 'ಮ್ಯಾನೇಜ್ ಟ್ಯಾಬ್' ಅಡಿಯಲ್ಲಿ 'ಇ-ನಾಮನಿರ್ದೇಶನ' ಆಯ್ಕೆಮಾಡಿ.
>> ಪರದೆಯ ಮೇಲೆ 'ವಿವರಗಳನ್ನು ಒದಗಿಸಿ' ಎಂಬ ಟ್ಯಾಬ್ ಕಾಣಿಸುತ್ತದೆ. ಅದರಲ್ಲಿ ಅಗಯ್ತ ದಾಖಲೆ ಭರ್ತಿ ಮಾಡಿ 'ಸೇವ್' ಬಟನ್ ಕ್ಲಿಕ್ ಮಾಡಿ.
>> ಕುಟುಂಬದ ಘೋಷಣೆಯನ್ನು ನವೀಕರಿಸಲು 'ಹೌದು' ಎಂದು ಕ್ಲಿಕ್ ಮಾಡಿ.
>> 'ಕುಟುಂಬ ವಿವರಗಳನ್ನು ಸೇರಿಸಿ' ಕ್ಲಿಕ್ ಮಾಡಿ. (ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಸೇರಿಸಬಹುದು).
>> ನಂತರ ಕುಟುಂಬದ ಯಾವ ಸದಸ್ಯರಿಗೆ ಎಷ್ಟು ಷೇರು ನೀಡಬೇಕು ಎಂಬುದನ್ನು ನೀವೇ ನಿರ್ಧರಿಸಿ. ಆದರೆ ಒಟ್ಟು ಮೊತ್ತವು ಶೇ.100ಕ್ಕೆ ಸಮವಾಗಿ ಹೊಂದಿಕೆಯಾಗಬೇಕು ಎಂಬುದನ್ನು ನೆನಪಿನಲ್ಲಿಡಿ.
>> ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ನಂತರ 'ಸೇವ್ ಇಪಿಎಫ್ ದಾಖಲಾತಿ' ಮೇಲೆ ಕ್ಲಿಕ್ ಮಾಡಿ.
>> ಒಟಿಪಿ ರಚಿಸಲು 'e-Sign' ಮೇಲೆ ಕ್ಲಿಕ್ ಮಾಡಿ. ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ 'ಒಟಿಪಿ' ಅನ್ನು ಸಲ್ಲಿಸಿ.
ಇದನ್ನೂ ಓದಿ- Life insurance policy : ಜೀವ ವಿಮಾ ಪಾಲಿಸಿ ಖರೀದಿಸುವ ನೆನಪಿರಲಿ 5 ವಿಷಯಗಳು
ಇಪಿಎಫ್ ಇ-ನಾಮಿನೇಷನ್ ಪ್ರಯೋಜನಗಳು:
ಇಪಿಎಫ್ ಇ-ನಾಮನಿರ್ದೇಶನವು ಪಿಎಫ್, ಪಿಂಚಣಿ, ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮಾ ಯೋಜನೆ 7 ಲಕ್ಷದವರೆಗೆ ಅರ್ಹ ಕುಟುಂಬ ಸದಸ್ಯರಿಗೆ ಆನ್‌ಲೈನ್ ಪಾವತಿಗೆ ಸಹಾಯ ಮಾಡುತ್ತದೆ. ನಾಮನಿರ್ದೇಶನಗಳನ್ನು ಯಾವಾಗ ಬೇಕಾದರೂ ನವೀಕರಿಸಬಹುದು. ಮದುವೆಯ ನಂತರ ಕಡ್ಡಾಯವಾಗಿ ನವೀಕರಣದ ಅಗತ್ಯವಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.