PM kisan Yojana: ರೈತರಿಗೆ ಆರ್ಥಿಕ ನೆರವು ನೀಡುವುದು ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆʼಯ ಉದ್ದೇಶವಾಗಿದೆ. ಈ ಯೋಜನೆಯಡಿ ರೈತರಿಗೆ 6,000 ರೂ.ಗಳನ್ನು ನೀಡಲಾಗುತ್ತದೆ. ಅನ್ನದಾತರು ಈ ಹಣವನ್ನು ತಲಾ 2,000 ರೂ.ಗಳಂತೆ ಮೂರು ವಿಭಿನ್ನ ಕಂತುಗಳಲ್ಲಿ ಪಡೆಯುತ್ತಾರೆ.
ಈ ಯೋಜನೆಯಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲು ಬಯಸಿದರೆ, ಅದನ್ನು ಮನೆಯಲ್ಲಿಯೇ ಕುಳಿತು ಸುಲಭವಾಗಿ ಮಾಡಬಹುದು. ಇದಕ್ಕಾಗಿ ನಿಮ್ಮ KYCಯನ್ನು ಪೂರ್ಣಗೊಳಿಸಬೇಕು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡದಿದ್ದರೆ, ಈ ಯೋಜನೆಯ ಹಣ ಪಡೆಯಲು ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕು.
ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡುವುದು ಹೇಗೆ?
ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆʼಯಡಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಅಪ್‌ಡೇಟ್ ಮಾಡಬಹುದು. ಇದಕ್ಕಾಗಿ ನಿಮಗೆ ಆಧಾರ್ ಕಾರ್ಡ್ ಕೂಡ ಅಗತ್ಯವಿಲ್ಲ. ನೀವು ಸಂಖ್ಯೆಯನ್ನು ನವೀಕರಿಸಲು ಬಯಸಿದರೆ, ಇಲ್ಲಿ ನೀಡಿರುವ ಸುಲಭ ಹಂತಗಳನ್ನು ಫಾಲೋ ಮಾಡಿರಿ.
ಇದನ್ನೂ ಓದಿ: ಮತದಾರರ ಗಮನಕ್ಕೆ..! ಈ ಎರಡು ದಾಖಲೆಗಳ ಜೊತೆಗೆ VOTER ID ಲಿಂಕ್ ಕಡ್ಡಾಯ.. ಕೊನೆಯ ದಿನ..?
ಹಂತ 1- ಮೊದಲನೆಯದಾಗಿ ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
ಹಂತ 2- ಇದರ ನಂತರ ನೀಡಿರುವ ʼFarmers Cornerʼ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3- ನಂತರ ನೀವು ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವ ಆಯ್ಕೆಯನ್ನು ನೋಡುತ್ತೀರಿ.
ಹಂತ 4- ಇಲ್ಲಿ ನೀವು ನೋಂದಣಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಬಹುದು.
ಹಂತ 5- ನಿಮ್ಮ ಬಳಿ ಆಧಾರ್ ಸಂಖ್ಯೆ ಇಲ್ಲದಿದ್ದರೆ, ನೀವು ನೋಂದಣಿ ಸಂಖ್ಯೆಯನ್ನು ಬಳಸಬಹುದು.
ಹಂತ 6- ನಂತರ ಕ್ಯಾಪ್ಚಾವನ್ನು ನಮೂದಿಸಿ ಮತ್ತು edit optionನಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಪಿಎಂ ಕಿಸಾನ್ 20 ನೇ ಕಂತು
ನೀವು ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ದಿನಾಂಕವನ್ನು ಪರಿಶೀಲಿಸಲು ಬಯಸಿದರೆ ಈ ಹಂತಗಳನ್ನು ಫಾಲೋ ಮಾಡಿ
ಹಂತ 1- ಮೊದಲು ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
ಹಂತ 2- ಇದರ ನಂತರ ನೀವು ಮುಖಪುಟದಲ್ಲಿ PM Kisan Installment Dateನ ಆಯ್ಕೆಯನ್ನು ನೋಡುತ್ತೀರಿ.
ಹಂತ 3- ಅದರ ಮೇಲೆ ಕ್ಲಿಕ್ ಮಾಡುವುದರಿಂದ ಹೊಸ ಪುಟ ತೆರೆಯುತ್ತದೆ, ಇಲ್ಲಿ ನೀವು ಮಾಹಿತಿಯನ್ನು ನಮೂದಿಸಬೇಕು.
ಹಂತ 4- ನೀವು ಮಾಹಿತಿಯನ್ನು Submit ಮಾಡಬೇಕು. ನಂತರ ನೀವು 20ನೇ ಕಂತಿನ ದಿನಾಂಕವನ್ನು ಕಾಣಬಹುದು.
ಇದನ್ನೂ ಓದಿ: TAX ಇಲ್ಲದೇ ಭಾರತೀಯರು ದುಬೈನಿಂದ ಎಷ್ಟು Gold ತರಬಹುದು ಗೊತ್ತೆ..? 1 KG ಗೂ ಹೆಚ್ಚು.. ಆದರೆ...
ಮೊದಲ ಕಂತು ಯಾವಾಗ ಬಿಡುಗಡೆಯಾಯಿತು?
ಮಾಹಿತಿಯ ಪ್ರಕಾರ, 6 ವರ್ಷಗಳ ಹಿಂದೆ ಅಂದರೆ 2019ರಲ್ಲಿ ರೈತರು ಮೊದಲ ಬಾರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನ ಪಡೆದರು. ಈ ಯೋಜನೆಯ ಪ್ರಯೋಜನವನ್ನು ಮೊದಲು ಬಿಹಾರದ ಭಾಗಲ್ಪುರದ ರೈತರಿಗೆ ನೀಡಲಾಯಿತು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 9.08 ಕೋಟಿ ರೈತರ ಖಾತೆಗಳಿಗೆ 22 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜಮಾ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









