ದಾಖಲೆಯ ಮಟ್ಟವನ್ನು ತಲುಪಿದ ನಂತರ ಚಿನ್ನದ ಬೆಲೆಯಲ್ಲಿ ಕುಸಿತ ! ಟ್ರಂಪ್ ನೀಡಿದ ಈ ಹೇಳಿಕೆ ಬಳಿಕ ಬದಲಾದ ಬಂಗಾರದ ಬೆಲೆ !

Gold Price Fall :ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ಔನ್ಸ್‌ಗೆ 3,500 ಡಾಲರ್ ದಾಟಿತ್ತು. ಆದರೆ ಇದಾದ ನಂತರ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಮತ್ತೊಂದೆಡೆ, ಏಷ್ಯಾದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಶೇ.1.9 ರಷ್ಟು ಕುಸಿದಿದೆ. 

Written by - Ranjitha R K | Last Updated : Apr 23, 2025, 10:47 AM IST
  • ದಾಖಲೆಯ ಮಟ್ಟವನ್ನು ತಲುಪಿದ ನಂತರ, ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿದೆ.
  • ಟ್ರಂಪ್ ಹೇಳಿಕೆಯು ಹೂಡಿಕೆದಾರರಲ್ಲಿನ ಭಯವನ್ನು ಕಡಿಮೆ ಮಾಡಿದೆ.
  • ಇದರಿಂದಾಗಿ ಚಿನ್ನದ ಬೆಲೆಗಳು ಕಡಿಮೆಯಾಗುತ್ತಿವೆ.
ದಾಖಲೆಯ ಮಟ್ಟವನ್ನು ತಲುಪಿದ ನಂತರ ಚಿನ್ನದ ಬೆಲೆಯಲ್ಲಿ ಕುಸಿತ ! ಟ್ರಂಪ್ ನೀಡಿದ ಈ ಹೇಳಿಕೆ ಬಳಿಕ ಬದಲಾದ ಬಂಗಾರದ ಬೆಲೆ !

Gold Price Fall : ದಾಖಲೆಯ ಮಟ್ಟವನ್ನು ತಲುಪಿದ ನಂತರ, ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳ ನಂತರ ಚಿನ್ನದ ಬೆಲೆಯಲ್ಲಿ ಈ ಮಟ್ಟದ ಕುಸಿತ ಕಂಡುಬರುತ್ತಿದೆ. ಟ್ರಂಪ್ ಹೇಳಿಕೆಯು ಹೂಡಿಕೆದಾರರಲ್ಲಿನ ಭಯವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಚಿನ್ನದ ಬೆಲೆಗಳು ಕಡಿಮೆಯಾಗುತ್ತಿವೆ. ಏಪ್ರಿಲ್ 23 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಚಿನ್ನದ ಬೆಲೆ ಕುಸಿಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೊದಲ ಬಾರಿಗೆ ಔನ್ಸ್‌ಗೆ 3,500 ಡಾಲರ್ ದಾಟಿತ್ತು. ಆದರೆ ಇದಾದ ನಂತರ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಮತ್ತೊಂದೆಡೆ, ಏಷ್ಯಾದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಶೇ.1.9 ರಷ್ಟು ಕುಸಿದಿದೆ. 

Add Zee News as a Preferred Source

ಚಿನ್ನದ ಬೆಲೆಯಲ್ಲಿ ಕುಸಿತ : 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನ ಔನ್ಸ್‌ಗೆ ದಾಖಲೆಯ 3500.10 ಡಾಲರ್ ತಲುಪಿತ್ತು. ಆದರೆ, ಇದಾದ ಸ್ವಲ್ಪ ಸಮಯದ ನಂತರ ಹೂಡಿಕೆದಾರರು ಲಾಭ ಗಳಿಸಲು ಪ್ರಾರಂಭಿಸಿದ್ದಾರೆ. ಚಿನ್ನದ ಬೇಡಿಕೆ ಕುಸಿದಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕಳೆದ 14 ದಿನಗಳ ಸಾಪೇಕ್ಷ ಸಾಮರ್ಥ್ಯ ಸೂಚ್ಯಂಕ (RSI) ಚಿನ್ನವನ್ನು 'ಅತಿಯಾಗಿ ಖರೀದಿಸಲಾಗಿದೆ'ಎಂದು ತೋರಿಸಿದೆ. ಅಂದರೆ, ಅದರ ಬೆಲೆ ಅಗತ್ಯಕ್ಕಿಂತ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಲೆ ಕಡಿಮೆಯಾಗುವುದು ಸಹಜ.

ಇದನ್ನೂ ಓದಿ :Arecanut Price Today: ಶಿವಮೊಗ್ಗದಲ್ಲಿ 60 ಸಾವಿರ ಗಡಿ ದಾಟಿದ ಅಡಿಕೆ ಧಾರಣೆ, ಇಂದಿನ ದರ ಇಲ್ಲಿದೆ

ಟ್ರಂಪ್ ಹೇಳಿಕೆಯಿಂದಾಗಿ ಬದಲಾದ ವಾತಾವರಣ :
ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣ ಟ್ರಂಪ್ ಅವರ ಕಠಿಣ ವ್ಯಾಪಾರ ನೀತಿಗಳು, ಭೌಗೋಳಿಕ-ರಾಜಕೀಯ ಉದ್ವಿಗ್ನತೆಗಳು ಮತ್ತು ಅಮೆರಿಕದ ಆರ್ಥಿಕತೆಯ ಬಗ್ಗೆ ಇರುವ ಕಳವಳಗಳು. ಆದರೆ ಟ್ರಂಪ್ ಮಂಗಳವಾರ ಕೆಲವು ಮೃದು ಹೇಳಿಕೆಗಳನ್ನು ನೀಡಿದ್ದಾರೆ. ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಬಡ್ಡಿದರಗಳನ್ನು ಕಡಿಮೆ ಮಾಡದ ಕಾರಣ ಅವರ ಮೇಲೆ ಕೋಪಗೊಂಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಇದರ ಜೊತೆಗೆ ಪೊವೆಲ್ ಅವರನ್ನು ವಜಾ ಮಾಡುವ ಯೋಜನೆ ಇಲ್ಲ ಎಂದೂ ಹೇಳಿದ್ದಾರೆ. ಇದು ಹೂಡಿಕೆದಾರರಲ್ಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಶೇ.145 ರಷ್ಟು ಸುಂಕವನ್ನು 'ಗಮನಾರ್ಹವಾಗಿ ಕಡಿಮೆ ಮಾಡಲಾಗುವುದು' ಎಂದು ಟ್ರಂಪ್ ಹೇಳಿದ್ದರು.  ಟ್ರಂಪ್ ಈ ಹೇಳಿಕೆಯು ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧದ ಭಯವನ್ನು ಕಡಿಮೆ ಮಾಡಿದ್ದು, ಚಿನ್ನದ ಬೇಡಿಕೆ ಕುಸಿಯಲು ಪ್ರಾರಂಭಿಸಿತು.

ಮುಗಿಲೆತ್ತರದಲ್ಲಿ ಚಿನ್ನದ ಬೆಲೆ : 
ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ. ಆದರೆ ಈ ವರ್ಷ ಇಲ್ಲಿಯವರೆಗೆ 25% ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ವ್ಯಾಪಾರ ಉದ್ವಿಗ್ನತೆಗಳು ಮತ್ತು ಜಾಗತಿಕ ಆರ್ಥಿಕತೆಯ ಕಳಪೆ ಸ್ಥಿತಿಯು ಚಿನ್ನವನ್ನು ಸುರಕ್ಷಿತ ಹೂಡಿಕೆಯನ್ನಾಗಿ ಮಾಡಿದೆ. ಕೇಂದ್ರ ಬ್ಯಾಂಕುಗಳು ಮತ್ತು ಚಿನ್ನ ಬೆಂಬಲಿತ ವಿನಿಮಯ-ವಹಿವಾಟು ನಿಧಿ (ಇಟಿಎಫ್) ಹೂಡಿಕೆದಾರರ ಬಲವಾದ ಖರೀದಿಯು ಚಿನ್ನದ ಬೆಲೆಗಳನ್ನು ಬೆಂಬಲಿಸಿತು.

ಇದನ್ನೂ ಓದಿ :ಸರ್ಕಾರಿ ನೌಕರರಿಗೆ ಶುಭ ಸುದ್ದಿ!HRA ಲೆಕ್ಕಾಚಾರದಲ್ಲಿ ದೊಡ್ಡ ಬದಲಾವಣೆ !ಮೂಲ ವೇತನದಲ್ಲಿಯೇ ಆಗುವುದು ಏರಿಕೆ

ಭವಿಷ್ಯದಲ್ಲಿ ಚಿನ್ನದ ಬೆಲೆ : 
ಚಿನ್ನದ ಬೆಲೆಯಲ್ಲಿನ ಈ ಕುಸಿತ ತಾತ್ಕಾಲಿಕವಾಗಿರಬಹುದು. ಟ್ರಂಪ್ ನೀತಿ ಮತ್ತೆ ಬದಲಾದರೆ ಅಥವಾ ಜಾಗತಿಕ ಉದ್ವಿಗ್ನತೆ ಹೆಚ್ಚಾದರೆ, ಚಿನ್ನದ ಬೇಡಿಕೆ ಮತ್ತೆ ಹೆಚ್ಚಾಗಬಹುದು ಎಂದು ತಜ್ಞರು ಹೇಳುತ್ತಾರೆ. ಕೇಂದ್ರ ಬ್ಯಾಂಕುಗಳ ಖರೀದಿ ಮತ್ತು ಹೂಡಿಕೆದಾರರ ವಿಶ್ವಾಸ ಇನ್ನೂ ಚಿನ್ನದ ಪರವಾಗಿದೆ. ಆದರೆ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಂಬಂಧಗಳು ಸುಧಾರಿಸಿದರೆ, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಗಳ ಮೇಲೆ ಒತ್ತಡ ಬೀರಬಹುದು.

ಹೂಡಿಕೆದಾರರಿಗೆ ಸಲಹೆ:
ಹೂಡಿಕೆದಾರರು ಮಾರುಕಟ್ಟೆಯ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಚಿನ್ನದ ಬೆಲೆಯಲ್ಲಿ ಏರಿಳಿತಗಳಿರಬಹುದು.ದೀರ್ಘಾವಧಿಗೆ ಹೂಡಿಕೆ ಮಾಡಲು ಬಯವುದಾದರೆ ಚಿನ್ನದ ದರ ಕುಸಿತವು ಬಂಗಾರ ಖರೀದಿಸಲು ಒಂದು ಅವಕಾಶವಾಗಬಹುದು.ಆದರೆ ಅಲ್ಪಾವಧಿಗೆ ಹೂಡಿಕೆ ಮಾಡುವವರು ಜಾಗರೂಕರಾಗಿರಬೇಕು. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯಿಂದಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಬಹುದು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News