Gold Price 29th November : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಾಖಲೆ ಮಟ್ಟ ತಲುಪಿದ ನಂತರ ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಾಣುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಏಳು ತಿಂಗಳ ದಾಖಲೆಯ ಮಟ್ಟ ತಲುಪಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನ 62,775 ರೂ. ಆಗಿದೆ. ಅಮೆರಿಕದ ಡಾಲರ್ ಮತ್ತು ಬಾಂಡ್  ಈಲ್ಡ್ ಕುಸಿತದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಿದೆ.  


COMMERCIAL BREAK
SCROLL TO CONTINUE READING

MCX ನಲ್ಲಿ  77000 ದಾಟಿದ ಬೆಳ್ಳಿ : 
ಬುಧವಾರ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. MCX ನಲ್ಲಿ, ಚಿನ್ನವು 36 ರೂಪಾಯಿಗಳ ಕುಸಿತದೊಂದಿಗೆ 10 ಗ್ರಾಂಗೆ 62,686 ರೂಪಾಯಿಗಳಲ್ಲಿ ಮತ್ತು ಬೆಳ್ಳಿಯು 26 ರೂಪಾಯಿಗಳ ಹೆಚ್ಚಳದೊಂದಿಗೆ ಕೆಜಿಗೆ 77,019 ರೂಪಾಯಿಗಳಿಗೆ ಟ್ರೆಂಡಿಂಗ್ ಆಗಿದೆ. ಇದಕ್ಕೂ ಮೊದಲು ಎಂಸಿಎಕ್ಸ್‌ನಲ್ಲಿ ಚಿನ್ನ 62722 ರೂ ಮತ್ತು ಬೆಳ್ಳಿ ಕೆಜಿಗೆ 76,993 ರೂ. ಯಲ್ಲಿ ವಹಿವಾಟು ನಡೆಸಿತ್ತು. ಮೇ 5 ರಿಂದ ಗರಿಷ್ಠ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕಂಡು ಬಂದ ಗರಿಷ್ಟ ಮಟ್ಟ ಇದು ಎನ್ನಲಾಗಿದೆ.  


ಇದನ್ನೂ ಓದಿ : ಪೋಸ್ಟ್ ಆಫೀಸ್ ಉಳಿತಾಯ ಖಾತೆ: ನಿಮ್ಮ ಹಣ ಉಳಿಸಲು ಸುರಕ್ಷಿತ ಮಾರ್ಗವಾಗಿದೆಯಾ?


ಚಿನ್ನದ ಬೆಲೆಯಲ್ಲಿ 800 ರೂ. ಹೆಚ್ಚಳ : 
ಬುಲಿಯನ್ ಮಾರುಕಟ್ಟೆಯ ಬೆಲೆಗಳನ್ನು IBJA ನ ಅಧಿಕೃತ ವೆಬ್‌ಸೈಟ್ https://ibjarates.com ನಲ್ಲಿ ಪ್ರತಿದಿನ ಬಿಡುಗಡೆ ಮಾಡಲಾಗುತ್ತದೆ . ಬುಧವಾರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆ ಕಂಡುಬಂದಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 862 ರೂ.ಗಿಂತ ಹೆಚ್ಚು ಏರಿಕೆ ಕಂಡು ಬಂದಿದ್ದು ದರ  62775 ರೂ.ಗೆ ತಲುಪಿದೆ. ಇದಲ್ಲದೇ ಬೆಳ್ಳಿ ಕೆಜಿಗೆ 891 ರೂಪಾಯಿ ಏರಿಕೆಯಾಗಿ 75750 ರೂಪಾಯಿಗಳಿಗೆ ತಲುಪಿದೆ. ಈ ಹಿಂದೆ ಪ್ರತಿ 10 ಗ್ರಾಂ ಚಿನ್ನ 61913 ರೂ.ಗೆ ಮತ್ತು ಬೆಳ್ಳಿ ಕೆಜಿಗೆ 74889 ರೂ. ಆಗಿತ್ತು. 


ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚುತ್ತಿದೆ. ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್ ಕುಸಿತವನ್ನು ಮುಂದುವರೆದಿದೆ. ಪ್ರಸ್ತುತ ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. 


ಇದನ್ನೂ ಓದಿ : ಡಿ. ಒಂದರಿಂದ ಬದಲಾಗುವುದು ಎಲ್ ಪಿಜಿ ದರ ! ಈ ಬಾರಿ ಎಷ್ಟಾಗುವುದು ಗ್ಯಾಸ್ ಬೆಲೆ ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ