ನವದೆಹಲಿ: ಐಡಿಬಿಐ (IDBI) ಬ್ಯಾಂಕ್ ತನ್ನ ಗ್ರಾಹಕರಿಗೆ ಲಾಭದಾಯಕ ಯೋಜನೆಗಳನ್ನು ಆಫರ್ ಮಾಡುತ್ತಿದೆ.  ಇದರಲ್ಲಿ, ಗ್ರಾಹಕರು ಸುಲಭವಾಗಿ ತಮ್ಮ ಮಾಸಿಕ ಗಳಿಕೆಯನ್ನು ಹೆಚ್ಚಿಸಿಕೊಳ್ಳಬಹುದು.  ಈ ಯೋಜನೆಯಿಂದ ಗ್ರಾಹಕರಿಗೆ ಸಾಕಷ್ಟು ಲಾಭ ಸಿಗುತ್ತದೆ. ಬ್ಯಾಂಕ್ (Bank) ಸ್ವತಃ ಟ್ವೀಟ್ ಮೂಲಕ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಐಡಿಬಿಐಯ ಆ ಯೋಜನೆ ಏನು ?
ಐಡಿಬಿಐ (IDBI) ಬ್ಯಾಂಕ್ ಸಿಸ್ಟಾಮ್ಯಾಟಿಕ್ ಸೇವಿಂಗ್ಸ್ ಪ್ಲಾನ್  (SSP) ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.  ನಿಮ್ಮ ಆದಾಯಕ್ಕೆ ಅನುಗುಣವಾಗಿ, ನೀವು ಪ್ರತಿ ತಿಂಗಳು ಯಾವುದೇ ಒಂದು ಮೊತ್ತವನ್ನು ಠೇವಣಿ ಇಡಬಹುದು.  ನೀವು ಸೂಚಿಸಿದ ಮೊತ್ತವನ್ನು  ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಯಿಂದ (SB account) ಕಡಿತಗೊಳಿಸಲಾಗುತ್ತದೆ. ಈ ವಿಶೇಷ ಯೋಜನೆಯಲ್ಲಿ ಗ್ರಾಹಕರು ನಿಯಮಿತ ಉಳಿತಾಯದ ಲಾಭ ಸಿಗುತ್ತದೆ.  ಜೊತೆಗೆ 5 ಲಕ್ಷ ರೂಪಾಯಿ ವಿಶೇಷ ಸೌಲಭ್ಯವೂ ಸಿಗುತ್ತದೆ. 


ಇದನ್ನೂ ಓದಿ : OLA Electric Scooter: ಭಾರತದಲ್ಲಿ ಶೀಘ್ರವೇ ಲಾಂಚ್ ಆಗಲಿದೆ OLA ಎಲೆಕ್ಟ್ರಿಕ್ ಸ್ಕೂಟರ್


ಐಡಿಬಿಐ ಬ್ಯಾಂಕ್ ಸಿಸ್ಟಾಮ್ಯಾಟಿಕ್ ಸೇವಿಂಗ್ಸ್ ಪ್ಲಾನ್  (ಎಸ್‌ಎಸ್‌ಪಿ) ಮುಖ್ಯಾಂಶಗಳು -
1. ಭವಿಷ್ಯದ ಗುರಿಗಳಿಗಾಗಿ ಪೂರ್ವಯೋಜನೆಯಂತೆ ಉಳಿತಾಯ ಮಾಡಬಹುದು. 
2. ಒಂದು ನಿಗದಿತ ಅವಧಿಗೆ ನಿಯಮಿತ ಉಳಿತಾಯ ಮಾಡಬಹುದು
3. 1 ವರ್ಷದಿಂದ 10 ವರ್ಷಗಳವರೆಗೆ ಠೇವಣಿ ಜಮೆ ಮಾಡುವ ಸೌಲಭ್ಯ
4. ನೀವು 100 ರೂಪಾಯಿ ಠೇವಣಿಯೊಂದಿಗೆ ಪ್ರಾರಂಭಿಸಬಹುದು.
5.  ಈ ಎಸ್‌ಎಸ್‌ಪಿ ಪ್ಲಸ್ ನಿಯಮಿತ ಉಳಿತಾಯ ಪ್ಲಾನ್ ನಿಮಗೆ  ಪೂರಕವಾಗಿ ವಿಮಾ ರಕ್ಷಣೆ ಒದಗಿಸುತ್ತದೆ. ಜೊತೆಗೆ ರಿವಾರ್ಡ್ ಪಾಯಿಂಟ್ (reward points)ಸಿಗುತ್ತವೆ. ಮತ್ತು  ಬಡ್ಡಿ ಸಿಗುತ್ತದೆ. 


ಇದರ ಜೊತೆರ 5 ಲಕ್ಷದ ವರೆಗಿನ ವಯುಕ್ತಿಕ  ಆಕ್ಸಿಡೆಂಟ್ ವಿಮೆ :
ಇದನ್ನು ಪಡೆಯಲು ಕೆಲವು ಷರತ್ತುಗಳು ಅನ್ವಯವಾಗುತ್ತದೆ.  ನಿಮ್ಮ ಠೇವಣಿ ಕನಿಷ್ಠ ಕಂತು ಮೊತ್ತ 5000 ಇರಬೇಕು. ಕನಿಷ್ಠ ಮೂರು ವರ್ಷದ ತನಕ ಠೇವಣಿ ಜಮೆ ಮಾಡುತ್ತಿರಬೇಕು.ಇದು  ಗರಿಷ್ಠ 10 ವರ್ಷಗಳ ತನಕ ಇರಬಹುದು. ಯಾವುದೇ ವ್ಯಕ್ತಿಗಳು ಅಥವಾ ಎಚ್‌ಯುಎಫ್‌ಗಳು ಈ ಖಾತೆಯನ್ನು ತೆರೆಯಬಹುದು. ಎಸ್ ಎಸ್ ಪಿಗೆ (SSP)  ಅರ್ಜಿ ಸಲ್ಲಿಸುವುದು ಸಂಪೂರ್ಣವಾಗಿ ಸುಲಭ. Net banking/ Go mobile + ಆ್ಯಪ್ ಮೂಲಕ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ನೀವು ಬ್ಯಾಂಕಿನ ಹತ್ತಿರದ ಶಾಖೆಗೆ ಭೇಟಿ ನೀಡಬಹುದು.


ಇದನ್ನೂ ಓದಿ : Corona ಚಿಕಿತ್ಸೆಗೆ ಹಣದ ಅಗತ್ಯವಿದೆಯೇ? ಈ ಆ್ಯಪ್ ಮೂಲಕ PF ಹಣ ತೆಗೆಯಬಹುದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.