)
UCO Bank 36 months FD
: ಕೇಂದ್ರ ಸರ್ಕಾರಿ ಬ್ಯಾಂಕ್ ಆಗಿರುವ ಯುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್ಡಿಗಳ ಮೇಲೆ ಅತ್ಯುತ್ತಮ ಬಡ್ಡಿಯನ್ನ ನೀಡುತ್ತಿದೆ. ಯುಕೋ ಬ್ಯಾಂಕಿನ ಎಫ್ಡಿ ಯೋಜನೆಯ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಇದರಲ್ಲಿ ನೀವು ಕೇವಲ 1 ಲಕ್ಷ ರೂ. ಠೇವಣಿ ಇಟ್ಟರೆ, ನೀವು ಮುಕ್ತಾಯದ ಸಮಯದಲ್ಲಿ 21,879 ರೂ.ಗಳ ಬಡ್ಡಿಯನ್ನ ಪಡೆಯಬಹುದು. ಎಫ್ಡಿಗಳ ವಿಶೇಷವೆಂದರೆ ಅವು ಖಾತರಿಯೊಂದಿಗೆ ಸಂಪೂರ್ಣವಾಗಿ ಸ್ಥಿರ ಬಡ್ಡಿಯನ್ನ ನೀಡುತ್ತವೆ. ನೀವು ಯುಕೋ ಬ್ಯಾಂಕಿನಲ್ಲಿ 7 ದಿನಗಳಿಂದ 10 ವರ್ಷಗಳ ಅವಧಿಗೆ ಎಫ್ಡಿ ಖಾತೆಯನ್ನ ತೆರೆಯಬಹುದು. ಯುಕೋ ಬ್ಯಾಂಕ್ ತನ್ನ ಗ್ರಾಹಕರಿಗೆ ಎಫ್ಡಿಗಳ ಮೇಲೆ ಶೇ.2.90ರಿಂದ ಶೇ.7.95ರವರೆಗೆ (ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ ಮಾತ್ರ) ಬಡ್ಡಿದರಗಳನ್ನ ನೀಡುತ್ತಿದೆ.
ಶೇ.7.95ರಷ್ಟು ಬಡ್ಡಿ ನೀಡುತ್ತಿದೆ
ಯುಕೋ ಬ್ಯಾಂಕ್ ತನ್ನ 444 ದಿನಗಳ ವಿಶೇಷ ಎಫ್ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗೆ ಶೇ.6.45 ಮತ್ತು ಹಿರಿಯ ನಾಗರಿಕರಿಗೆ ಶೇ.6.95ರಷ್ಟು ಅತ್ಯಧಿಕ ಬಡ್ಡಿದರವನ್ನ ನೀಡುತ್ತಿದೆ. ಯುಕೋ ಬ್ಯಾಂಕ್ ತನ್ನ ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ 444 ದಿನಗಳ ಎಫ್ಡಿ ಯೋಜನೆಯಲ್ಲಿ ಶೇ.7.95ರಷ್ಟು ಬಡ್ಡಿದರವನ್ನ ನೀಡುತ್ತಿದೆ. ಯುಕೋ ಬ್ಯಾಂಕ್ ತನ್ನ ನಿವೃತ್ತ ಹಿರಿಯ ನಾಗರಿಕ ಸಿಬ್ಬಂದಿಗೆ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ ಯೋಜನೆಗಳಲ್ಲಿ ಶೇ.1.25 ರಷ್ಟು ಹೆಚ್ಚಿನ ಬಡ್ಡಿದರವನ್ನ ಮತ್ತು 1 ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಫ್ಡಿ ಯೋಜನೆಗಳಲ್ಲಿ ಸಾಮಾನ್ಯಕ್ಕಿಂತ ಶೇ.1.50 ರಷ್ಟು ಹೆಚ್ಚಿನ ಬಡ್ಡಿದರವನ್ನ ನೀಡುತ್ತದೆ.
₹1,00,000 ಠೇವಣಿ ಇರಿಸಿದ್ರೆ ₹21,879 ಸ್ಥಿರ ಲಾಭ
ನೀವು ಸಾಮಾನ್ಯ ನಾಗರಿಕರಾಗಿದ್ದು, ಯುಕೋ ಬ್ಯಾಂಕಿನಲ್ಲಿ 3 ವರ್ಷಗಳ ಎಫ್ಡಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟರೆ, ನಿಮಗೆ ಒಟ್ಟು 1,20,093 ರೂ. ಮೊತ್ತದ ಮೆಚ್ಯೂರಿಟಿ ಸಿಗುತ್ತದೆ. ಇದರಲ್ಲಿ 20,093 ರೂ. ಸ್ಥಿರ ಬಡ್ಡಿಯೂ ಸೇರಿರುತ್ತದೆ. ನೀವು ಹಿರಿಯ ನಾಗರಿಕರಾಗಿದ್ದರೆ, ಯುಕೋ ಬ್ಯಾಂಕಿನಲ್ಲಿ 3 ವರ್ಷಗಳ ಎಫ್ಡಿಯಲ್ಲಿ 1 ಲಕ್ಷ ರೂ. ಠೇವಣಿ ಇಟ್ಟರೆ, ನಿಮಗೆ ಒಟ್ಟು 1,21,879 ರೂ. ಸಿಗುತ್ತದೆ. ಇದರಲ್ಲಿ 21,879 ಸ್ಥಿರ ಬಡ್ಡಿಯೂ ಸೇರಿರುತ್ತದೆ. ಎಫ್ಡಿ ಯೋಜನೆಯಡಿ ನಿಗದಿತ ಅವಧಿಯ ನಂತರ ನೀವು ನಿಗದಿತ ಬಡ್ಡಿಯನ್ನ ಪಡೆಯುತ್ತೀರಿ ಮತ್ತು ಇದರಲ್ಲಿ ಯಾವುದೇ "ಇಫ್ಸ್" ಮತ್ತು "ಬಟ್ಸ್" ಇರುವುದಿಲ್ಲ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)