ಪತ್ನಿಯ ಹೆಸರಲ್ಲಿ SBIನಲ್ಲಿ ₹2,00,000 FD ಮಾಡಿದ್ರೆ 2 ವರ್ಷಗಳ ನಂತರ ಎಷ್ಟು ಹಣ ಸಿಗುತ್ತದೆ?

ಎಸ್‌ಬಿಐ ವಿವಿಧ ಅವಧಿಗಳ ಎಫ್‌ಡಿ ಯೋಜನೆಗಳ ಮೇಲೆ ಶೇ.3.50ರಿಂದ ಶೇ.7ರವರೆಗೆ ಬಡ್ಡಿಯನ್ನು ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ವರ್ಷಗಳಿಗಿಂತ ಹೆಚ್ಚು ಮತ್ತು 3 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಅತ್ಯಧಿಕ ಬಡ್ಡಿಯನ್ನು ನೀಡುತ್ತಿದೆ.

Written by - Puttaraj K Alur | Last Updated : Apr 11, 2025, 04:05 PM IST
  • SBI ತನ್ನ ಗ್ರಾಹಕರಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ
  • SBI ವಿವಿಧ ಅವಧಿಗಳ FD ಯೋಜನೆಗಳ ಮೇಲೆ ಶೇ.3.50ರಿಂದ ಶೇ.7ರವರೆಗೆ ಬಡ್ಡಿ ನೀಡುತ್ತಿದೆ
  • SBIನಲ್ಲಿ 2 ವರ್ಷಗಳ FDಯಲ್ಲಿ 2 ಲಕ್ಷ ರೂ. ಠೇವಣಿ ಮಾಡಿದ್ರೆ ಎಷ್ಟು ಹಣ ಸಿಗುತ್ತದೆ?
ಪತ್ನಿಯ ಹೆಸರಲ್ಲಿ SBIನಲ್ಲಿ ₹2,00,000 FD ಮಾಡಿದ್ರೆ 2 ವರ್ಷಗಳ ನಂತರ ಎಷ್ಟು ಹಣ ಸಿಗುತ್ತದೆ?

SBI FD Calculator: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ SBI ತನ್ನ ಗ್ರಾಹಕರಿಗಾಗಿ ವಿವಿಧ ರೀತಿಯ ಉಳಿತಾಯ ಯೋಜನೆಗಳನ್ನು ನಡೆಸುತ್ತಿದೆ. ಸಾಮಾನ್ಯ ಉಳಿತಾಯ ಖಾತೆಯ ಜೊತೆಗೆ ಎಫ್‌ಡಿ, ಆರ್‌ಡಿ, ಪಿಪಿಎಫ್ ಸೇರಿದಂತೆ ಹಲವು ರೀತಿಯ ಖಾತೆಗಳನ್ನು ಎಸ್‌ಬಿಐನಲ್ಲಿ ತೆರೆಯಬಹುದು. ಅಷ್ಟೇ ಅಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಉಳಿತಾಯ ಯೋಜನೆಗಳ ಮೇಲೆ ಗ್ರಾಹಕರಿಗೆ ಭಾರೀ ಬಡ್ಡಿಯನ್ನು ನೀಡುತ್ತಿದೆ. ಹೆಂಡತಿಯ ಹೆಸರಿನಲ್ಲಿ 2 ಲಕ್ಷ ರೂಪಾಯಿಗಳನ್ನು 2 ವರ್ಷಗಳ ಎಫ್‌ಡಿಯಲ್ಲಿ ಠೇವಣಿ ಇಟ್ಟರೆ, ಮೆಚ್ಯೂರಿಟಿ ಸಮಯದಲ್ಲಿ ನಿಮಗೆ ಎಷ್ಟು ಹಣ ಸಿಗುತ್ತದೆ ಎಂದು ತಿಳಿಯಿರಿ...

Add Zee News as a Preferred Source

2 ವರ್ಷಗಳ FD

ನಮ್ಮ ದೇಶದ ಸಾಮಾನ್ಯ ಕುಟುಂಬಗಳಲ್ಲಿ, ಪ್ರಾಚೀನ ಕಾಲದಿಂದಲೂ ಮನೆಯ ಆರ್ಥಿಕ ನಿಯಂತ್ರಣ ಮಹಿಳೆಯರ ಕೈಯಲ್ಲಿದೆ. ಇಂದಿಗೂ ಹೆಚ್ಚಿನ ಜನರು ತಮ್ಮ ಹೆಂಡತಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸುತ್ತಾರೆ ಮತ್ತು ಹೆಚ್ಚಿನ ಹಣವನ್ನು ತಮ್ಮ ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ನಲ್ಲಿ ಪತ್ನಿಯ ಹೆಸರಿನಲ್ಲಿ 2 ವರ್ಷಗಳ FDಯಲ್ಲಿ 2 ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟರೆ, ಮುಕ್ತಾಯದ ಸಮಯದಲ್ಲಿ ಎಷ್ಟು ಹಣ ಸಿಗುತ್ತದೆ ಎಂದು ತಿಳಿಯಿರಿ...

ಇದನ್ನೂ ಓದಿಕೊನೆಗೂ ಬಂದಾಯ್ತು ರತನ್ ಟಾಟಾ ಬದುಕು ಸವೆಸಿದ ಈ ಬಂಗಲೆಯ ವಾರಸುದಾರ !ಈ ಬಂಗಲೆಯ ಬೆಲೆ ಎಷ್ಟು ಗೊತ್ತಾ ?

ಎಸ್‌ಬಿಐನಿಂದ FD ಮೇಲೆ 7%ವರೆಗೆ ಬಡ್ಡಿ  

ಎಸ್‌ಬಿಐ ವಿವಿಧ ಅವಧಿಗಳ ಎಫ್‌ಡಿ ಯೋಜನೆಗಳ ಮೇಲೆ ಶೇ.3.50ರಿಂದ ಶೇ.7ರವರೆಗೆ ಬಡ್ಡಿಯನ್ನು ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2 ವರ್ಷಗಳಿಗಿಂತ ಹೆಚ್ಚು ಮತ್ತು 3 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಅತ್ಯಧಿಕ ಬಡ್ಡಿಯನ್ನು ನೀಡುತ್ತಿದೆ. ಈ ಸರ್ಕಾರಿ ಬ್ಯಾಂಕ್ ಈ ಅವಧಿಯ FD ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.7ರಷ್ಟು ಬಡ್ಡಿಯನ್ನು ಮತ್ತು ಹಿರಿಯ ನಾಗರಿಕರಿಗೆ ಶೇ.7.50ರಷ್ಟು ಬಡ್ಡಿಯನ್ನು ನೀಡುತ್ತಿದೆ. FD ಮೇಲೆ ಪುರುಷರು ಮತ್ತು ಮಹಿಳೆಯರು ಸಮಾನ ಬಡ್ಡಿ ಪಡೆಯುತ್ತಾರೆ. ಆದರೆ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ ಶೇ.0.50ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ.

2 ಲಕ್ಷ ಠೇವಣಿಗೆ ಎಷ್ಟು ಹಣ ಸಿಗುತ್ತದೆ?

ನಿಮ್ಮ ಪತ್ನಿಯ ಹೆಸರಿನಲ್ಲಿ SBI ನಲ್ಲಿ 2 ವರ್ಷಗಳ FDಯಲ್ಲಿ ನೀವು 2 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ, ಮುಕ್ತಾಯದ ಸಮಯದಲ್ಲಿ ನಿಮಗೆ ಒಟ್ಟು 2,29,776 ರೂ.ಗಳು ಸಿಗುತ್ತದೆ. ಇದರಲ್ಲಿ 29,776 ರೂ.ಗಳ ಸ್ಥಿರ ಬಡ್ಡಿ ಸೇರಿದೆ. FD ಮೇಲೆ ನೀವು ನಿಗದಿತ ಅವಧಿಯಲ್ಲಿ ಸ್ಥಿರ ಮತ್ತು ಖಾತರಿಯ ಬಡ್ಡಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ: ಬ್ಯಾಂಕ್‌ನಿಂದ ಸಾಲ ಪಡೆದಿದ್ದ ವ್ಯಕ್ತಿ ದಿಢೀರ್ ಸಾವನ್ನಪ್ಪಿದರೆ ಮುಂದೆ ಸಾಲ ಕಟ್ಟೋದು ಯಾರು? ಇದರ ನಿಯಮ ಏನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News