ಮನೆ ಖರೀದಿಸುವುದು ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯ ದೊಡ್ಡ ಕನಸು. ಆದರೆ ಈ ಕನಸು ಎಲ್ಲರಿಗೂ ನನಸಾಗುವುದಿಲ್ಲ. ಡೌನ್ ಪೇಮೆಂಟ್‌ನಿಂದ ಹಿಡಿದು EMIವರೆಗೆ ಎಲ್ಲದರಲ್ಲೂ ಯೋಜನೆ ಬಹಳ ಮುಖ್ಯ. ಗೃಹ ಸಾಲದ ಮೇಲೆ ನಾವು ಪಾವತಿಸುವ ಬಡ್ಡಿ ಕೆಲವೊಮ್ಮೆ ಸಾಲ ಪಡೆದ ಮೊತ್ತಕ್ಕಿಂತಲೂ ಹೆಚ್ಚಾಗಿರುತ್ತದೆ. ಆದರೆ ಈ ದೊಡ್ಡ ಬಡ್ಡಿ ಹೊರೆಯನ್ನೂ ಸಹ ಸ್ಮಾರ್ಟ್ ಹೂಡಿಕೆಯ ಮೂಲಕ ಕಡಿಮೆ ಮಾಡಬಹುದು. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ವ್ಯವಸ್ಥಿತ ಹೂಡಿಕೆ ಯೋಜನೆಯ ವಿವರ...
ಇದನ್ನು ವ್ಯವಸ್ಥಿತ ಹೂಡಿಕೆ ಯೋಜನೆ (SIP) ಎಂದು ಕರೆಯಲಾಗುತ್ತದೆ. ನಿಮ್ಮ EMIಯ ಕೇವಲ 10 ಪ್ರತಿಶತವನ್ನ ಹೂಡಿಕೆ ಮಾಡುವ ಮೂಲಕ, ನೀವು ನಿಮ್ಮ ಗೃಹ ಸಾಲದ ಮೇಲೆ ಹೆಚ್ಚಿನ ಬಡ್ಡಿ ಪಾವತಿಸಿದರೂ ಸಹ ನೀವು ಆ ಎಲ್ಲಾ ಹಣವನ್ನ ಮರಳಿ ಪಡೆಯಬಹುದು. ಉದಾಹರಣೆಗೆ ನೀವು 8.5 ಪ್ರತಿಶತದ ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ 50 ಲಕ್ಷ ರೂ. ಗೃಹ ಸಾಲ ಪಡೆದಿದ್ದೀರಿ ಎಂದು ತಿಳಿಯಿರಿ. ನಿಮ್ಮ ಮಾಸಿಕ EMI ಸುಮಾರು 43,400 ರೂ. ಆಗಿರುತ್ತದೆ. 20 ವರ್ಷಗಳಲ್ಲಿ ನೀವು ಬ್ಯಾಂಕಿಗೆ ಒಟ್ಟು 1.04 ಕೋಟಿ ರೂ.ಗಳನ್ನ ಮರುಪಾವತಿಸುತ್ತೀರಿ. ಇದರರ್ಥ ನೀವು 50 ಲಕ್ಷ ರೂ.ಗಳ ಸಾಲಕ್ಕೆ ಸುಮಾರು 54 ಲಕ್ಷ ರೂ. ಬಡ್ಡಿಯನ್ನ ಪಾವತಿಸುತ್ತೀರಿ.
ಇದನ್ನೂ ಓದಿ: ತೆರಿಗೆದಾರರಿಗೆ ದೊಡ್ಡ ಬದಲಾವಣೆ: ಐಟಿಆರ್ ರೀಫಂಡ್ ಬಗ್ಗೆ ಐಟಿ ಇಲಾಖೆಯ ಮಹತ್ವದ ನಿರ್ಧಾರ
ನೀವು ಅತ್ಯಂತ ಸುಲಭವಾಗಿ ಸಾಲದ ಬರ್ಡನ್ ಕಡಿಮೆ ಮಾಡಿಕೊಳ್ಳಬಹುದು. ನೀವು ನಿಮ್ಮ EMIಯ ಕೇವಲ 10 ಪ್ರತಿಶತ ಅಥವಾ ಪ್ರತಿ ತಿಂಗಳು 4,300 ರೂ.ಗಳನ್ನ ಮ್ಯೂಚುವಲ್ ಫಂಡ್ SIPನಲ್ಲಿ ಹೂಡಿಕೆ ಮಾಡುತ್ತೀರಿ ಎಂದು ತಿಳಿಯಿರಿ. ಈ ಹೂಡಿಕೆಯು ವಾರ್ಷಿಕ 12 ಪ್ರತಿಶತದಷ್ಟು ಲಾಭದೊಂದಿಗೆ ಬೆಳೆದರೆ, ಈ ಮೊತ್ತವು 20 ವರ್ಷಗಳಲ್ಲಿ ಸುಮಾರು 35 ಲಕ್ಷ ರೂ.ಗಳಾಗುತ್ತದೆ. ನೀವು ಪ್ರತಿವರ್ಷ ನಿಮ್ಮ SIPಯನ್ನ 10 ಪ್ರತಿಶತದಷ್ಟು ಹೆಚ್ಚಿಸಿದರೆ (ನಿಮ್ಮ ಆದಾಯ ಹೆಚ್ಚಾದಂತೆ), ಈ ಮೊತ್ತವು 65 ಲಕ್ಷ ರೂ.ಗಳನ್ನ ತಲುಪುತ್ತದೆ. ಇದರರ್ಥ SIP ಸಹಾಯದಿಂದ ನೀವು ನಿಮ್ಮ ಬಡ್ಡಿಯ ದೊಡ್ಡ ಭಾಗವನ್ನ ಮರುಪಡೆಯಬಹುದು ಮಾತ್ರವಲ್ಲದೆ, ನೀವು ಸಾಲ ಮರುಪಾವತಿಸುವ ಹೊತ್ತಿಗೆ ಕೋಟಿಗಟ್ಟಲೇ ಹಣ ಉಳಿಸಬಹುದು.
ಶಿಸ್ತುಬದ್ಧ ಹೂಡಿಕೆ ವಿಧಾನ
SIP ಒಂದು ಶಿಸ್ತುಬದ್ಧ ಹೂಡಿಕೆ ವಿಧಾನ. ಇದರಲ್ಲಿ ನೀವು ಪ್ರತಿ ತಿಂಗಳು ಸಣ್ಣ ಮೊತ್ತವನ್ನ ಹೂಡಿಕೆ ಮಾಡುತ್ತೀರಿ. ಇದು ದೀರ್ಘಾವಧಿಯಲ್ಲಿ ಸಂಯುಕ್ತದೊಂದಿಗೆ ಗಣನೀಯ ಆದಾಯವನ್ನ ನೀಡುತ್ತದೆ. ಬ್ಯಾಂಕ್ ನಿಮಗೆ ಮಾಸಿಕ EMIಗಳನ್ನ ವಿಧಿಸುವ ಮೂಲಕ ಬಡ್ಡಿಯನ್ನ ಗಳಿಸುತ್ತದೆ. ನೀವು SIP ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು ಮತ್ತು ಉತ್ತಮ ಲಾಭವನ್ನ ಪಡೆಯಬಹುದು.
ಇದನ್ನೂ ಓದಿ: ಡಿಮಾರ್ಟ್‌ನಲ್ಲಿ ಈ ಸಮಯದಲ್ಲಿ ಶಾಂಪಿಂಗ್ ಮಾಡಿದ್ರೆ ನೀವು ಬಹಳಷ್ಟು ಹಣ ಉಳಿಸಬಹುದು!!
ಬುದ್ಧಿವಂತಿಕೆಯಿಂದ ಸಾಲ ತೀರಿಸಿ
ಇಎಂಐ, ಎಸ್‌ಐಪಿ.. ನೀವು ಈ ಎರಡನ್ನೂ ಬುದ್ಧಿವಂತಿಕೆಯಿಂದ ಸಮತೋಲನಗೊಳಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಗೃಹ ಸಾಲವನ್ನ ಗಣನೀಯವಾಗಿ ಕಡಿಮೆ ಮಾಡಬಹುದು. ಈ ವಿಧಾನವು ಬಡ್ಡಿ ಹೊರೆಯನ್ನ ಕಡಿಮೆ ಮಾಡುವುದಲ್ಲದೆ, ನಿಮ್ಮ ನಿವೃತ್ತಿಗೆ ದೊಡ್ಡ ಮೊತ್ತವನ್ನ ಒದಗಿಸುತ್ತದೆ.









