Old Note Viral : ನಿಮ್ಮ ಬಳಿ ಹಳೆಯ ನೋಟುಗಳು ಅಥವಾ ನಾಣ್ಯಗಳಿದ್ದರೆ, ಈ ನಾಣ್ಯಗಳೇ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಅದರಲ್ಲಿಯೂ ವಿಶೇಷವಾಗಿ ನಿಮ್ಮಲ್ಲಿರುವ ನೋಟು ಅಥವಾ ನಾಣ್ಯದ ಮೇಲೆ ಈ ಒಂದು ವಿಶೇಷ ನಂಬರ್ ಮುದ್ರಣವಾಗಿದ್ದರೆ ಈ ನೋಟ್ ಅನ್ನು ಆನ್‌ಲೈನ್ ನಲ್ಲಿ ಮಾರಾಟ ಮಾಡಬಹುದು. ಈ ನಂಬರ್ ಇಸ್ಲಾಂನಲ್ಲಿ ಶುಭವೆಂದು ಪರಿಗಣಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ, ಈ ನಂಬರ್ ಹೊಂದಿರುವ ನೋಟ್ ಗೆ ಬೇಡಿಕೆ ಹೆಚ್ಚಾಗಿದೆ. ವರದಿಯ ಪ್ರಕಾರ, 786 ಸಂಖ್ಯೆಯನ್ನು ಹೊಂದಿರುವ 1, 5, 10, 20, 50, 100 ಅಥವಾ 2000 ರೂ.ಗಳ ನೋಟುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಈ ಒಂದು ನೋಟಿನ ಬದಲಿಗೆ ಲಕ್ಷ ಲಕ್ಷ ರೂಪಾಯಿಗಳನ್ನು ಗಳಿಸಬಹುದು. OLX, Quikr, eBay ನಂತಹ ವೆಬ್‌ಸೈಟ್‌ಗಳಲ್ಲಿ ಜನರು ಈ ನೋಟುಗಳನ್ನು ಖರೀದಿಸಲು ಸಿದ್ಧರಿದ್ದಾರೆ.
ಇದನ್ನೂ ಓದಿ : ಏರುತ್ತಿರುವ ಬಂಗಾರದ ಬೆಲೆ ಕಡಿವಾಣಕ್ಕೆ ಕ್ರಮ ! ಭರ್ಜರಿಯಾಗಿಯೇ ಕುಸಿಯುವುದು ಚಿನ್ನದ ಬೆಲೆ
ಆನ್‌ಲೈನ್‌ನಲ್ಲಿ ನೋಟುಗಳನ್ನು ಮಾರಾಟ ಮಾಡುವುದು ಹೇಗೆ? :
ನಿಮ್ಮ ಬಳಿ ಕೂಡಾ ನೋಟು ಅಥವಾ ನಾಣ್ಯವಿದ್ದರೆ, ಅದನ್ನು ಮಾರಾಟ ಮಾಡುವುದು ತುಂಬಾ ಸುಲಭ. ಮೊದಲನೆಯದಾಗಿ ಯಾವುದೇ ಆನ್‌ಲೈನ್ ಮಾರಾಟ ವೇದಿಕೆಯಲ್ಲಿ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ನಂತರ ನಿಮ್ಮ ನೋಟು ಅಥವಾ ನಾಣ್ಯದ ಸ್ಪಷ್ಟ ಚಿತ್ರವನ್ನು ತೆಗೆದುಕೊಂಡು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ. ಇದಾದ ನಂತರ ನಿಮ್ಮ ಜಾಹೀರಾತು ಖರೀದಿದಾರರಿಗೆ ಗೋಚರಿಸುತ್ತದೆ. ಅದನ್ನು ಖರೀದಿಸಲು ಬಯಸುವವರು ವೆಬ್‌ಸೈಟ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ.
786 ಸಂಖ್ಯೆ ಏಕೆ ವಿಶೇಷವಾಗಿದೆ? :
ಇಸ್ಲಾಂನಲ್ಲಿ 786 ಸಂಖ್ಯೆಯನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಇದು ಕುರಾನ್‌ನ ಆರಂಭಿಕ ವಾಕ್ಯವಾದ "ಬಿಸ್ಮಿಲ್ಲಾ ಅಲ್-ರಹಮಾನ್ ಅಲ್-ರಹೀಮ್" ನ ಸಂಖ್ಯಾತ್ಮಕ ಮೌಲ್ಯವಾಗಿದೆ. ಆದರೆ ಹಿಂದೂ ಧರ್ಮದಲ್ಲಿ ಇದು ತ್ರಿಮೂರ್ತಿಗಳ ಸಂಕೇತವಾಗಿದ್ದು, ಇದು ಮೂರು ಪ್ರಮುಖ ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತದೆ. ಇದರಿಂದಾಗಿ, ಎರಡೂ ಧರ್ಮಗಳ ಜನರು ಇದನ್ನು ಶುಭವೆಂದು ಪರಿಗಣಿಸುತ್ತಾರೆ. ಮಾತ್ರವಲ್ಲ ದೊಡ್ಡ ಮೊತ್ತದ ಹಣ ಕೊಟ್ಟು ಇದನ್ನು ಖರೀದಿಸುತ್ತಾರೆ.
ಇದನ್ನೂ ಓದಿ : ನಿವೃತ್ತಿ ಸಮಯದಿಂದಲೇ ಹೆಚ್ಚುವರಿ ಪಿಂಚಣಿ ಬಗ್ಗೆ ಸರ್ಕಾರದ ಅಧಿಕೃತ ಹೇಳಿಕೆ ! ಸಂಸತ್ತಿನಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟ
ಹಳೆಯ ನೋಟುಗಳಿಂದ ಗಳಿಸುವ ಅವಕಾಶ :
ನಿಮ್ಮ ಬಳಿ ಹಳೆಯ ನೋಟುಗಳು ಅಥವಾ ನಾಣ್ಯಗಳು ಇದ್ದರೆ ಅವುಗಳನ್ನು ಎಸೆಯುವ ಬದಲು ಪರಿಶೀಲಿಸಿ. ಒಂದು ವೇಳೆ ಆ ನಾಣ್ಯಗಳು 786 ಸಂಖ್ಯೆಯನ್ನು ಹೊಂದಿದ್ದು, ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಜನರು ಈ ನೋಟುಗಳನ್ನು ಆನ್‌ಲೈನ್ ಹರಾಜಿನಲ್ಲಿ ಸುಲಭವಾಗಿ ಖರೀದಿಸುತ್ತಿದ್ದಾರೆ. ಈ ಮೂಲಕ ಮನೆಯಲ್ಲಿ ಕುಳಿತು ಲಕ್ಷಾಂತರ ರೂಪಾಯಿ ಗಳಿಸಲು ಇದು ಸುಲಭವಾದ ಮಾರ್ಗವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









