ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್‌ ಆಗುತ್ತೆ...

ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆಯು ಪ್ರಸ್ತುತ ವಾರ್ಷಿಕ ಶೇ.7.5ರಷ್ಟು ಬಡ್ಡಿದರವನ್ನ ನೀಡುತ್ತದೆ. ಈ ಯೋಜನೆಯಡಿ ಕನಿಷ್ಠ ಠೇವಣಿ ಮೊತ್ತ ₹1,000 ಆಗಿದ್ದು, ಗರಿಷ್ಠ ಠೇವಣಿ ಮಿತಿಯಿಲ್ಲ. 

Written by - Puttaraj K Alur | Last Updated : Oct 15, 2025, 02:08 PM IST
  • ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP) ಯೋಜನೆಯಲ್ಲಿ ಹೂಡಿಕೆ ಮಾಡಿ
  • ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್‌ ಆಗುತ್ತದೆ
  • KVP ಯೋಜನೆಯಲ್ಲಿ ಪ್ರಸ್ತುತ ವಾರ್ಷಿಕ ಶೇ.7.5ರಷ್ಟು ಬಡ್ಡಿದರವನ್ನ ನೀಡುತ್ತದೆ
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್‌ ಆಗುತ್ತೆ...

Post office KVP: ದೇಶದ ಸಾಮಾನ್ಯ ನಾಗರಿಕರ ಅಗತ್ಯಗಳಿಗೆ ಅನುಗುಣವಾಗಿ ಅಂಚೆ ಕಚೇರಿ ವಿವಿಧ ಉಳಿತಾಯ ಯೋಜನೆಗಳನ್ನ ನೀಡುತ್ತದೆ. ಕಿಸಾನ್ ವಿಕಾಸ್ ಪತ್ರ (KVP) ಅಂತಹ ಒಂದು ಯೋಜನೆಯಾಗಿದ್ದು, ಇದರಲ್ಲಿ ನಿಮ್ಮ ಹಣವು ಮುಕ್ತಾಯದ ನಂತರ ದ್ವಿಗುಣಗೊಳ್ಳುತ್ತದೆ ಅಂದರೆ ಡಬಲ್‌ ಆಗುತ್ತದೆ. ಹೌದು, ಈ ಅಂಚೆ ಕಚೇರಿ ಯೋಜನೆಯನ್ನ "ಹಣ ದ್ವಿಗುಣಗೊಳಿಸುವ ಯೋಜನೆ" ಎಂತಲೂ ಕರೆಯಲಾಗುತ್ತದೆ. ಇಲ್ಲಿ ಅಂಚೆ ಕಚೇರಿ ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನ ಇಂದು ನಾವು ನಿಮಗೆ ತಿಳಿಸಲಿದ್ದೇವೆ.

Add Zee News as a Preferred Source

ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆಯು ಪ್ರಸ್ತುತ ವಾರ್ಷಿಕ ಶೇ.7.5ರಷ್ಟು ಬಡ್ಡಿದರವನ್ನ ನೀಡುತ್ತದೆ. ಈ ಯೋಜನೆಯಡಿ ಕನಿಷ್ಠ ಠೇವಣಿ ಮೊತ್ತ ₹1,000 ಆಗಿದ್ದು, ಗರಿಷ್ಠ ಠೇವಣಿ ಮಿತಿಯಿಲ್ಲ. ಇದರರ್ಥ ನೀವು ಎಷ್ಟು ಬೇಕಾದರೂ ಹಣ ಠೇವಣಿ ಇಡಬಹುದು. ಕಿಸಾನ್ ವಿಕಾಸ್ ಪತ್ರ ಯೋಜನೆಯು 115 ತಿಂಗಳುಗಳಲ್ಲಿ ಅಥವಾ 9 ವರ್ಷ 7 ತಿಂಗಳುಗಳಲ್ಲಿ ಪಕ್ವವಾಗುತ್ತದೆ. 

ಇದನ್ನೂ ಓದಿToday Gold rate: ಆಭರಣ ಪ್ರಿಯರಿಗೆ ಪ್ರತಿನಿತ್ಯ ಶಾಕ್‌ ನೀಡುತ್ತಿರುವ ಚಿನ್ನದ ಬೆಲೆ..! ಖರೀದಿಗೂ ಮುನ್ನ ಇಂದಿನ ದರ ತಿಳಿದುಕೊಳ್ಳಿ

ಇದರರ್ಥ ನೀವು ಈ ಯೋಜನೆಯಲ್ಲಿ ಯಾವುದೇ ಮೊತ್ತವನ್ನ ಠೇವಣಿ ಇಟ್ಟರೂ, 115 ತಿಂಗಳ ನಂತರ ನಿಮಗೆ ದುಪ್ಪಟ್ಟು ಮೊತ್ತ ಸಿಗುತ್ತದೆ. ಈ ಯೋಜನೆಯು ಒಂದು ದೊಡ್ಡ ಮೊತ್ತದ ಹೂಡಿಕೆಯಾಗಿದೆ. ನೀವು ₹5 ಲಕ್ಷ ಠೇವಣಿ ಇಟ್ಟರೆ, ಅವಧಿ ಮುಗಿದ ನಂತರ ನಿಮಗೆ ₹10 ಲಕ್ಷ ಸಿಗುತ್ತದೆ. ಅದೇ ರೀತಿ ನೀವು ₹5 ಕೋಟಿ ಠೇವಣಿ ಇಟ್ಟರೆ, ಅವಧಿ ಮುಗಿದ ನಂತರ ನಿಮಗೆ ಒಟ್ಟು ₹10 ಕೋಟಿ ಸಿಗುತ್ತದೆ.

ಅಂಚೆ ಕಚೇರಿಯ KVP ಯೋಜನೆಯು ಏಕ ಮತ್ತು ಜಂಟಿ ಖಾತೆಗಳನ್ನ ತೆರೆಯಲು ಅನುವು ಮಾಡಿಕೊಡುತ್ತದೆ. ಜಂಟಿ ಖಾತೆಗೆ ಗರಿಷ್ಠ ಮೂರು ಜನರನ್ನ ಸೇರಿಸಬಹುದು. KVP ಖಾತೆಗಳನ್ನ ಒಂದು ಹೆಸರಿನಿಂದ ಇನ್ನೊಂದು ಹೆಸರಿನಿಂದ ವರ್ಗಾಯಿಸಬಹುದು. ಇದಲ್ಲದೆ ಅವುಗಳನ್ನ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಬಹುದು.

ಇದನ್ನೂ ಓದಿ: ರೆಡಿಮೇಡ್ V/S ಹ್ಯಾಂಡ್‌ಮೇಡ್.. ಯಾವ ಆಭರಣ ಉತ್ತಮ? ಚಿನ್ನ ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

About the Author

Puttaraj K Alur

ಪುಟ್ಟರಾಜ ಕೆ ಆಲೂರ ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser) ನ್ಯೂಸ್‌, ಒಪೊಯಿ‌ (Opoyi) ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. ...Read More

Trending News