ಪ್ಯಾರಸಿಟಮಾಲ್ ಸೇರಿದಂತೆ 800 ಔಷಧಗಳ ಬೆಲೆ ಹೆಚ್ಚಳ ; ಇನ್ನು ತೆರಬೇಕಾಗುತ್ತದೆ 10% ಹೆಚ್ಚಿನ ದರ
ಹಣದುಬ್ಬರದ ಋತುವಿನಲ್ಲಿ ಔಷಧಿಗಳ ಬೆಲೆಯೂ ಹೆಚ್ಚಾಗಲಿದೆ. ಮುಂದಿನ ತಿಂಗಳು ಅಂದರೆ ಏಪ್ರಿಲ್ ಆರಂಭದಿಂದ 800ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಲಿದೆ. ಈ ಔಷಧಿಗಳಲ್ಲಿ ಪ್ಯಾರೆಸಿಟಮಾಲ್ ಕೂಡ ಸೇರಿದೆ.
ನವದೆಹಲಿ: ಪೆಟ್ರೋಲ್-ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ನಂತರ ಇದೀಗ ಔಷಧಿಗಳೂ ದುಬಾರಿಯಾಗಲಿವೆ (Medicine price hike). ಏಪ್ರಿಲ್‌ನಿಂದ 800ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಲಿದೆ. ಇವುಗಳಲ್ಲಿ ಜ್ವರ, ಹೃದ್ರೋಗ, ಅಧಿಕ ರಕ್ತದೊತ್ತಡ, ಚರ್ಮ ರೋಗಗಳು ಮತ್ತು ರಕ್ತಹೀನತೆಯ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳೂ ಸೇರಿವೆ.
ಆಹಾರ ಪದಾರ್ಥಗಳ ಬೆಲೆ ಏರಿಕೆ!
ಪೆಟ್ರೋಲ್, ಡೀಸೆಲ್ ಬೆಲೆ (Petrol deisel price) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ನಿರಂತರ ಬೆಲೆ ಏರಿಕೆಯಿಂದ ಜನ ಸಾಮಾನ್ಯರೂ ತತ್ತರಿಸಿದ್ದಾರೆ. ಡೀಸೆಲ್ ದುಬಾರಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗುವ ಸಾಧ್ಯತೆಯೂ ಇದೆ (Food price hike). ಈ ಮಧ್ಯೆ, ಬೆಲೆ ಏರಿಕೆ ಬಿಸಿ ಔಷಧಿಗಳ ಮೇಲೂ ಪರಿಣಾಮ ಬೀರಿದೆ. ನಿಗದಿತ ಔಷಧಗಳ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಕಾರಣದಿಂದಾಗಿ, ಏಪ್ರಿಲ್‌ನಿಂದ 800 ಕ್ಕೂ ಹೆಚ್ಚು ಅಗತ್ಯ ಔಷಧಗಳು ಶೇಕಡಾ 10 ಕ್ಕಿಂತ ಹೆಚ್ಚು ದುಬಾರಿಯಾಗಿ ವೆ (Medicine price hike).
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ಮುಂದಿನ ತಿಂಗಳು ಸಂಬಳದಲ್ಲಿ ₹4500 ಹೆಚ್ಚಳ : ಅದಕ್ಕೆ ಈ ಕೆಲಸ ಮಾಡಿ ಸಾಕು!
ಪ್ಯಾರಸಿಟಮಾಲ್‌ಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ :
ಮುಂದಿನ ತಿಂಗಳಿನಿಂದ, ಪೈನ್ ಕಿಲ್ಲರ್ ಮತ್ತು ಆ್ಯಂಟಿ ಬಯೋಟಿಕ್ ನಂತಹ
ಅಗತ್ಯ ಔಷಧಿಗಳು ಮತ್ತು ಪ್ಯಾರೆಸಿಟಮಾಲ್ (Paracetamol), ಫೆನಿಟೋಯಿನ್ ಸೋಡಿಯಂ, ಮೆಟ್ರೋನಿಡಾಜೋಲ್‌ನಂತಹ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಫಾರ್ಮಾ ಪ್ರೈಸಿಂಗ್ ಅಥಾರಿಟಿ (NPPA) ಪ್ರಕಾರ, ಸಗಟು ಬೆಲೆ ಸೂಚ್ಯಂಕ (WPI)ಏರಿಕೆಯಿಂದಾಗಿ ಔಷಧಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಏಪ್ರಿಲ್ 1, 2022 ರಿಂದ ಔಷಧಿಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ.
ಬಹಳ ದಿನಗಳಿಂದ ಬೇಡಿಕೆ ಇಡಲಾಗಿತ್ತು :
ಕರೋನಾ ಸಾಂಕ್ರಾಮಿಕದ (Coronavirus) ನಂತರ, ಔಷಧಿಗಳ ಬೆಲೆಯನ್ನು ಹೆಚ್ಚಿಸುವಂತೆ ಫಾರ್ಮಾ ಉದ್ಯಮವು ನಿರಂತರವಾಗಿ ಒತ್ತಾಯಿಸುತ್ತಿದೆ. ಇದಾದ ಬಳಿಕ ನಿಗದಿತ ಔಷಧಗಳ ಬೆಲೆಯಲ್ಲಿ ಶೇ.10.7ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಶೆಡ್ಯೂಲ್ ಔಷಧಗಳು ಅಗತ್ಯ ಔಷಧಿಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳ ಬೆಲೆಗಳನ್ನು ನಿಯಂತ್ರಿಸಲಾಗುತ್ತದೆ. ಅನುಮತಿಯಿಲ್ಲದೆ ಅವುಗಳ ಬೆಲೆಯನ್ನು ಹೆಚ್ಚಿಸುವಂತಿಲ್ಲ
ಇದನ್ನೂ ಓದಿ : Aadhaarಗೆ ಸಂಬಂಧಿಸಿದ ಈ ಕೆಲಸ ಮುಗಿಸದೇ ಹೋದರೆ ಬೀಳಲಿದೆ ಭಾರೀ ದಂಡ ..!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.