)
ITR Deadline Extension: 2024-25ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಇಂದೇ (ಸೆಪ್ಟೆಂಬರ್ 15) ಕೊನೆಯ ದಿನವಾಗಿದೆ. ಆದಾಗ್ಯೂ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ ಅನೇಕ ತೆರಿಗೆದಾರರು ಕೊನೆಯ ಕ್ಷಣದ ವಿಸ್ತರಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ಐಟಿಆರ್ ಗಡುವು ವಿಸ್ತರಣೆಯ ವದಂತಿ ಹರಿದಾಡುತ್ತಿದೆ.
ತೆರಿಗೆದಾರರಿಗೆ ಎಚ್ಚರಿಕೆ ನೀಡುವ ಅಧಿಸೂಚನೆಯನ್ನು ಹೊರಡಿಸಿರುವ ಆದಾಯ ತೆರಿಗೆ ಇಲಾಖೆ, ಐಟಿಆರ್ ಗಡುವನ್ನು ಐಟಿ ಇಲಾಖೆ ವಿಸ್ತರಿಸುವುದಿಲ್ಲ. 2024-25ನೇ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಧಿಕೃತ ಕೊನೆಯ ದಿನಾಂಕ ಸೆಪ್ಟೆಂಬರ್ 15, 2025 ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಐಟಿಆರ್ ಸಲ್ಲಿಕೆ ಗಡುವು ವಿಸ್ತರಣೆ ಕುರಿತು ವ್ಯಾಪಕವಾಗಿ ಹರಡುತ್ತಿರುವ ನಕಲಿ ಸಂದೇಶದ ಬಗ್ಗೆ ತೆರಿಗೆದಾರರಿಗೆ ಎಚ್ಚರಿಕೆ ನೀಡುವ ಅಧಿಸೂಚನೆ ಇದಾಗಿದ್ದು, ಇದರಲ್ಲಿ ಐಟಿಆರ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 30, 2025 ರವರೆಗೆ ವಿಸ್ತರಿಸಲಾಗಿದೆ ಎಂದು ಹರಿದಾಡುತ್ತಿರುವ ಸಂದೇಶ ಸುಳ್ಳು ವದಂತಿ ಎಂದಿರುವ ಆದಾಯ ತೆರಿಗೆ ಇಲಾಖೆ, ಈ ನಕಲಿ ಸಂದೇಶವನ್ನು ದೃಢವಾಗಿ ತಿರಸ್ಕರಿಸಿದೆ.
ಈ ವಿಷಯಗಳ ಬಗ್ಗೆ ಎಚ್ಚರಿಕೆಯಿಂದಿರುವಂತೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ:
ಈ ಕುರಿತಂತೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಆದಾಯ ತೆರಿಗೆ ಇಲಾಖೆ, ಐಟಿಆರ್ಗಳನ್ನು ಸಲ್ಲಿಸುವ ಕೊನೆಯ ದಿನಾಂಕ (ಮೂಲತಃ 31.07.2025 ರಂದು ಬಾಕಿ ಇದ್ದು, 15.09.2025 ರವರೆಗೆ ವಿಸ್ತರಿಸಲಾಗಿತ್ತು) 30.09.2025 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳುವ ನಕಲಿ ಸುದ್ದಿಯು ಹರಿದಾಡುತ್ತಿದೆ.ಆನ್ಲೈನ್ನಲ್ಲಿ ಹರಿದಾಡುತ್ತಿರುವ ಈ ಸಂದೇಶ ನಕಲಿ ಎಂದಿರುವ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರು ಇಂತಹ ನಕಲಿ ಸಂದೇಶಗಳನ್ನು ನಿರ್ಲಕ್ಷಿಸುವಂತೆ ಕೇಳಿಕೊಂಡಿದೆ.
A fake news is in circulation stating that the due of filing ITRs (originally due on 31.07.2025, and extended to 15.09.2025) has been further extended to 30.09.2025.
✅ The due date for filing ITRs remains 15.09.2025.
Taxpayers are advised to rely only on official… pic.twitter.com/F7fPEOAztZ
— Income Tax India (@IncomeTaxIndia) September 14, 2025
ಇದಲ್ಲದೆ, ಐಟಿಆರ್ಗಳನ್ನು ಸಲ್ಲಿಸಲು ಕೊನೆಯ ದಿನಾಂಕ 15.09.2025 ಆಗಿರುತ್ತದೆ ಎಂಬುದನ್ನು ಕೂಡ ಆದಾಯ ತೆರಿಗೆ ಇಲಾಖೆ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ಐಟಿಆರ್ ಫೈಲಿಂಗ್, ತೆರಿಗೆ ಪಾವತಿ ಮತ್ತು ಇತರ ಸಂಬಂಧಿತ ಸೇವೆಗಳಿಗಾಗಿ ತೆರಿಗೆದಾರರಿಗೆ ಸಹಾಯ ಮಾಡಲು, ನಮ್ಮ ಸಹಾಯವಾಣಿ 24x7 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ನಾವು ಕರೆಗಳು, ಲೈವ್ ಚಾಟ್ಗಳು, ವೆಬ್ಎಕ್ಸ್ ಸೆಷನ್ಗಳು ಮತ್ತು ಟ್ವಿಟರ್/ಎಕ್ಸ್ ಮೂಲಕ ಬೆಂಬಲವನ್ನು ಒದಗಿಸುತ್ತಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.