ಈ ಮಿತಿಗಿಂತ ಹೆಚ್ಚು ಚಿನ್ನ ಮನೆಯಲ್ಲಿಟ್ಟರೆ 'ಐಟಿ ನೋಟಿಸ್' ಬರುತ್ತೆ ಹುಷಾರ್..!

Gold Price: ಬಂಗಾರದ ಬೆಲೆ ಇತ್ತೀಚಿನ ದಿನಗಳಲ್ಲಿ ಆಗಸದೇತ್ತರಕ್ಕೆ ಜಿಗಿದಿದೆ. ಇಂದು (ಜೂನ್ 10, 2025) ಬೆಂಗಳೂರಿನಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 24K ಚಿನ್ನಕ್ಕೆ ₹9,758, 22K ಚಿನ್ನಕ್ಕೆ₹8,945 ಮತ್ತು 18K ಚಿನ್ನಕ್ಕೆ ₹7,319 ತಲುಪಿದೆ.  ಆದರೂ, ಚಿನ್ನ ಖರೀದಿಸುವವರಿಗೇನೂ ಕಡಿಮೆ ಇಲ್ಲ. ಆದರೆ, ಮನೆಯಲ್ಲಿ ಮಿತಿಗಿಂತ ಹೆಚ್ಚು ಚಿನ್ನ ಇದ್ದರೆ ಆದಾಯ ತೆರಿಗೆ ನೋಟಿಸ್ ಬರಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Jun 10, 2025, 10:18 AM IST
  • ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ
  • ಚಿನ್ನದ ಬೆಲೆ 10 ಸಾವಿರದ ಗಡಿ ಮುಟ್ಟುತ್ತಿದ್ದರೂ ಕಡಿಮೆಯಾಗದ ಕೊಳ್ಳುವವರ ಸಂಖ್ಯೆ
  • ಆದರೆ, ಮನೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಚಿನ್ನವಿದ್ರೆ ಇರಲಿ ಎಚ್ಚರ
ಈ ಮಿತಿಗಿಂತ ಹೆಚ್ಚು ಚಿನ್ನ ಮನೆಯಲ್ಲಿಟ್ಟರೆ 'ಐಟಿ ನೋಟಿಸ್' ಬರುತ್ತೆ ಹುಷಾರ್..!

Gold Limit At Home: ಮಹಿಳೆಯರ ನೆಚ್ಚಿನ ಭೌತಿಕ ವಸ್ತುಗಳ ಬಗ್ಗೆ ಮಾತನಾಡುವುದಾದರೆ ಅದು ನಿಸ್ಸಂದೇಹವಾಗಿ 'ಬಂಗಾರವೇ' ಆಗಿರುತ್ತದೆ. ಹಾಗಂತ ಮನೆಯಲ್ಲಿ ಮಿತಿಗಿಂತ ಅಧಿಕ ಚಿನ್ನವಿಟ್ಟರೆ ಕಳ್ಳರು ಖದಿಯಬಹುದು ಎಂಬುದು ಒಂದೆಡೆಯಾದರೆ, ಆದಾಯ ತೆರಿಗೆ ಇಲಾಖೆ ನೋಟಿಸ್ ಸಹ ಕಳುಹಿಸಬಹುದು.

Add Zee News as a Preferred Source

ಹೌದು, ಹಣಕಾಸಿನ ವಹಿವಾಟಿನ ಬಗ್ಗೆ ನಿಗಾವಹಿಸುವ ಆದಾಯ ತೆರಿಗೆ ಇಲಾಖೆ ಮನೆಯಲ್ಲಿ ಇಡಬಹುದಾದ ಚಿನ್ನಾಭರಣಗಳ ಬಗ್ಗೆಯೂ ನಿಯಮಗಳನ್ನು ರೂಪಿಸಿದೆ. ಇದನ್ನು ಮೀರಿ ಮನೆಯಲ್ಲಿ ಮಿತಿಗಿಂತ ಹೆಚ್ಚು ಚಿನ್ನವಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಬಹುದು. ಹಾಗಾದರೆ, ಮನೆಯಲ್ಲಿ ಎಷ್ಟು ಚಿನ್ನ ಇಡಬಹುದು? ಎಷ್ಟು ಗ್ರಾಂಗಿಂತ ಅಧಿಕ ಚಿನ್ನ ಇದ್ದರೆ ಐ‌ಟಿ ನೋಟಿಸ್ ಬರಬಹುದು ಎಂಬ ಬಗ್ಗೆ ತಿಳಿಯಲು ಮುಂದೆ ಓದಿ... 

ಕೇಂದ್ರೀಯ ನೇರ ತೆರಿಗೆ ಮಂಡಳಿ ಎಂದರೆ ಸಿ‌ಬಿ‌ಡಿ‌ಟಿ ನಿಯಮಗಳಲ್ಲಿ ಮನೆಯಲ್ಲಿ ಎಷ್ಟು ಪ್ರಮಾಣದ ಚಿನ್ನಾಭರಣಗಳನ್ನು, ಗಟ್ಟಿ ಬಂಗಾರವನ್ನು ಇಡಬಹುದು ಎಂಬ ಬಗ್ಗೆ ಉಲ್ಲೇಖವಿದೆ. 

ಇದನ್ನೂ ಓದಿ- 8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಯಾವಾಗ ಸಿಗುತ್ತೆ 18ತಿಂಗಳ ಬಾಕಿ 'ಡಿಎ'! ಇಲ್ಲಿದೆ ಮಹತ್ವದ ಅಪ್ಡೇಟ್

ಸಿ‌ಬಿ‌ಡಿ‌ಟಿ ನಿಯಮಗಳಾನುಸಾರ, ಹಿಂದೂ ಅವಿಭಜಿತ ಕುಟುಂಬ ದಲ್ಲಿ ಮನೆಯ ಆದಾಯದ ಪ್ರಕಾರ, ಅವಿವಾಹಿತ ಯುವತಿ/ಮಹಿಳೆಯು ತನ್ನ ಬಳಿ 250ಗ್ರಾಂ.ವರೆಗೆ ಚಿನ್ನವನ್ನು ಇರಿಸಿಕೊಳ್ಳಬಹುದು. ಅಂತೆಯೇ ವಿವಾಹಿತ ಮಹಿಳೆ ತನ್ನ ಬಳಿ 5000ಗ್ರಾಂ.ವರೆಗೆ, ಪುರುಷರು ತಮ್ಮ ಬಳಿ 1000ಗ್ರಾಂ.ವರೆಗೆ ಚಿನ್ನವನ್ನು ಇಟ್ಟುಕೊಳ್ಳಬಹುದು. 

ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ನಿಗದಿತ ಮಿತಿಯವರೆಗಿನ ಚಿನ್ನಾಭರಣಗಳನ್ನು ಬೇರ್ಪಡಿಸಲಾಗುತ್ತದೆ. ಉಳಿದ ಆಭರಣಗಳ ಖರೀದಿಗೆ ಸಂಬಂಧಿಸಿದಂತೆ ಐ‌ಟಿ ಅಧಿಕಾರಿಗಳಿಗೆ ಸೂಕ್ತ ದಾಖಲೆಯನ್ನು ಒದಗಿಸುವುದು ಅಗತ್ಯವಾಗಿದೆ. ಇಲ್ಲವಾದರೆ, ಅಂತಹ ಆಭರಣಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದು. 

ಇದನ್ನೂ ಓದಿ- ಉಳಿತಾಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇದ್ರೆ ಟ್ಯಾಕ್ಸ್ ನೋಟೀಸ್ ಗ್ಯಾರಂಟಿ...

ಆದಾಗ್ಯೂ, ನಿಗದಿತ ಮಿತಿಯೊಳಗಿನ ಆಭರಣಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಶ್ನಿಸುವುದಿಲ್ಲ ಅಂತೆನಿಲ್ಲ. ನಿಯಮಾನುಸಾರ, ಐ‌ಟಿ ದಾಳಿ ವೇಳೆ ಪತ್ತೆಯಾದ ಆಭರಣಗಳನ್ನು ಖರೀದಿಸಲು ಹಣದ ಮೂಲದ ಬಗ್ಗೆ ಪ್ರಶ್ನಿಸಬಹುದು. ಜೊತೆಗೆ ಆ ಆಭರಣಗಳನ್ನು ಎಲ್ಲಿ, ಯಾವಾಗ ಪ್ರಶ್ನಿಸಲಾಯಿತು ಎಂಬ ಬಗ್ಗೆ ರಶೀದಿ, ದಾಖಲೆಗಳನ್ನು ಕೇಳಬಹುದು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News