Income Tax New Rules: ಇನ್ಮುಂದೆ ನಿಮ್ಮ ಇಮೇಲ್, ಸಾಮಾಜಿಕ ಜಾಲತಾಣವನ್ನೂ ಪರಿಶೀಲಿಸಲಿದೆ ಐ‌ಟಿ ಇಲಾಖೆ

New Income Tax Rules: 2025-26ರ ಬಜೆಟ್ ನಲ್ಲಿ ಮೋದಿ ಸರ್ಕಾರ ತೆರಿಗೆದಾರರಿಗೆ ಬಂಪರ್ ಗುಡ್ ನ್ಯೂಸ್ ನೀಡಿತ್ತು. ದಾಖಲೆಯ ಬಜೆಟ್ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, 12ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿಯನ್ನು ಘೋಷಿಸಿದ್ದರು. ಇದೀಗ ಮುಂದಿನ ಹಣಕಾಸು ವರ್ಷದಿಂದ ಹೊಸ ನಿಯಮ ಜಾರಿಗೆ ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ. 

Written by - Yashaswini V | Last Updated : Mar 28, 2025, 09:39 AM IST
  • ಮೊದಲೇ ತಿಳಿಸಿದಂತೆ ಪ್ರತಿಯೊಬ್ಬ ನಾಗರೀಕರು ಸಹ ತಮ್ಮ ಆದಾಯಕ್ಕೆ ಅನುಗುಣವಾಗಿ ಆದಾಯ ತೆರಿಗೆ ಇಲಾಖೆಗೆ ವಾರ್ಷಿಕ ತೆರಿಗೆ ಪಾವತಿಸಬೇಕು.
  • ಆದಾಗ್ಯೂ, ಕೆಲವರು ತೆರಿಗೆ ವಂಚಿಸುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.
  • ರಹಸ್ಯ ಆಸ್ತಿಗಳು, ಆಘೋಷಿತ ಆದಾಯ, ಚಿನ್ನಾಭರಣಗಳು, ಬೆಲೆಬಾಳುವ ವಸ್ತುಗಳ ರೂಪದಲ್ಲಿ ತೆರಿಗೆ ವಂಚನೆ ಮಾಡಲಾಗುತ್ತದೆ.
Income Tax New Rules: ಇನ್ಮುಂದೆ ನಿಮ್ಮ ಇಮೇಲ್, ಸಾಮಾಜಿಕ ಜಾಲತಾಣವನ್ನೂ ಪರಿಶೀಲಿಸಲಿದೆ  ಐ‌ಟಿ ಇಲಾಖೆ

New Income Tax Rules: ಪ್ರತಿ ಆರ್ಥಿಕ ವರ್ಷದಲ್ಲಿ ತಮ್ಮ ತಮ್ಮ ಆದಾಯಕ್ಕೆ ತಕ್ಕಂತೆ ತೆರಿಗೆ ಪಾವತಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯವಾಗಿದೆ. ತೆರಿಗೆ ವಂಚನೆಯನ್ನು ತಪ್ಪಿಸಲು ಹಲವು ಕಾನೂನುಗಳನ್ನು ರೂಪಿಸಿರುವ ಆದಾಯ ತೆರಿಗೆ ಇಲಾಖೆ ಇದೀಗ ಹೊಸ ಹಣಕಾಸು ವರ್ಷ ಏಪ್ರಿಲ್ 01, 2026ರಿಂದ ಹೊಸ ಕಾನೂನನ್ನು ಜಾರಿಮಾಡಲು ಸಜ್ಜಾಗಿದೆ. ಇನ್ಮುಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇವಲ ಖಾತೆ ಮಾತ್ರವಲ್ಲದೆ ಇ-ಮೇಲ್, ಸಾಮಾಜಿಕ ಜಾಲತಾಣಗಳನ್ನು ಕೂಡ ಪರಿಶೀಲಿಸಬಹುದಾಗಿದೆ. ಇದು ಮಾತ್ರವಲ್ಲದೆ, ಐ‌ಟಿ ಅಧಿಕಾರಿಗಳು ಆನ್‌ಲೈನ್ ಹೂಡಿಕೆಗಳು, ಬಿಸಿನೆಸ್ ಖಾತೆಗಳನ್ನು ಕೂಡ ಪರಿಶೀಲಿಸಬಹುದಾಗಿದೆ. 

Add Zee News as a Preferred Source

ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 132 ರ ಅಡಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಗೆ ಈ ಮೇಲ್ಕಂಡ ಹಕ್ಕುಗಳನ್ನು ನೀಡಲಾಗುತ್ತದೆ. ಇದು ಯಾವುದೇ ಅನುಮಾನಾಸ್ಪದ ವ್ಯಕ್ತಿಯ ಆಸ್ತಿಗಳು, ದಾಖಲೆಗಳು ಮತ್ತು ಖಾತೆಗಳನ್ನು ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಐ‌ಟಿ ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ನೂತನ ಆರ್ಥಿಕ ವರ್ಷದಿಂದ ಜಾರಿಯಾಗಲಿರುವ ಈ ಮಸೂದೆಯು ಆದಾಯ ತೆರಿಗೆ ಅಧಿಕಾರಿಗಳಿಗೆ ತೆರಿಗೆದಾರರ ಡಿಜಿಟಲ್ ಸ್ವತ್ತುಗಳಿಗೆ ಪ್ರವೇಶವನ್ನು ಕೋರುವ ಹಕ್ಕನ್ನು ನೀಡುತ್ತದೆ. 

ಇದನ್ನೂ ಓದಿ- ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ಆಘಾತ: ಯುಗಾದಿ ಹಬ್ಬಕ್ಕೆ ಆಟೋ ಪ್ರಯಾಣ ದರವೂ ಏರಿಕೆ...!

ಏನಿದು ಡಿಜಿಟಲ್ ಸ್ವತ್ತುಗಳ ಪ್ರವೇಶ? 
ಮೊದಲೇ ತಿಳಿಸಿದಂತೆ ಪ್ರತಿಯೊಬ್ಬ ನಾಗರೀಕರು ಸಹ ತಮ್ಮ ಆದಾಯಕ್ಕೆ ಅನುಗುಣವಾಗಿ ಆದಾಯ ತೆರಿಗೆ ಇಲಾಖೆಗೆ ವಾರ್ಷಿಕ ತೆರಿಗೆ ಪಾವತಿಸಬೇಕು. ಆದಾಗ್ಯೂ, ಕೆಲವರು ತೆರಿಗೆ ವಂಚಿಸುವ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ರಹಸ್ಯ ಆಸ್ತಿಗಳು, ಆಘೋಷಿತ ಆದಾಯ, ಚಿನ್ನಾಭರಣಗಳು, ಬೆಲೆಬಾಳುವ ವಸ್ತುಗಳ ರೂಪದಲ್ಲಿ ತೆರಿಗೆ ವಂಚನೆ ಮಾಡಲಾಗುತ್ತದೆ. ಇದನ್ನು ತಪ್ಪಿಸಲು ಇದೀಗ ಹಲವು ಡಿಜಿಟಲ್ ವಿಧಾನಗಳ ಮೂಲಕ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಹೊಸ ಆದಾಯ ತೆರಿಗೆ ನಿಯಮವು ಆದಾಯ ತೆರಿಗೆ ಅಧಿಕಾರಿಗಳಿಗೆ ಇಮೇಲ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು, ಆನ್‌ಲೈನ್ ಹೂಡಿಕೆಗಳು ಮತ್ತು ಇತರ ಡಿಜಿಟಲ್ ಹಣಕಾಸು ವೇದಿಕೆಗಳನ್ನು (ಡಿಜಿಟಲ್ ಸ್ವತ್ತುಗಳು) ಪ್ರವೇಶಿಸಲು ಅಧಿಕಾರವನ್ನು ನೀಡುತ್ತದೆ.   ಇತ್ತೀಚಿನ ದಿನಗಳಲ್ಲಿ ತೆರಿಗೆ ವಂಚನೆಯು "ಡಿಜಿಟಲ್ ಸ್ಪೇಸ್ ಬ್ರೇಕ್-ಇನ್" ಅನ್ನು ಸಹ ಒಳಗೊಂಡಿರುತ್ತವೆ. ಹಾಗಾಗಿ, ನೂತನ ನಿಯಮವು ಐ‌ಟಿ ಅಧಿಕಾರಿಗಳಿಗೆ ಡಿಜಿಟಲ್ ಡೆತಾವನ್ನು ಹುಡುಕಲು ಅಗತ್ಯವಿದ್ದರೆ ಅವನ್ನು ವಶಪಡಿಸಿಕೊಳ್ಳಲು ಅಧಿಕಾರವನ್ನು ನೀಡುತ್ತದೆ. 

ಆದಾಯ ತೆರಿಗೆ ಇಲಾಖೆಯ ಹೊಸ ನಿಯಮ ಯಾರಿಗೆಲ್ಲಾ ಅನ್ವಯವಾಗುತ್ತದೆ? 
ಆದಾಯ ತೆರಿಗೆ ಇಲಾಖೆ ಜಾರಿಗೊಳಿಸಲು ಹೊರಟಿರುವ ಈ ಹೊಸ ನಿಯಮಾವು ಎಲ್ಲಾ ತೆರಿಗೆದಾರರಿಗೂ ಅನ್ವಯಿಸುವುದಿಲ್ಲ. ಆದರೆ, ಆಘೋಷಿತ ಆಸ್ತಿ, ತೆರಿಗೆ ವಂಚನೆ ಬಗ್ಗೆ ಅನುಮಾನವಿರುವ ತೆರಿಗೆದಾರರಿಗೆ ಮಾತ್ರ ಅನ್ವಯವಾಗುತ್ತದೆ. 

ಇದನ್ನೂ ಓದಿ- ಏಪ್ರಿಲ್ 1ರಿಂದ ಈ ಮೊಬೈಲ್ ಸಂಖ್ಯೆಗಳಲ್ಲಿ UPI ಕೆಲಸ ಮಾಡಲ್ಲ; ತಕ್ಷಣವೇ ಈ ಕೆಲಸ ಮಾಡಿ!!

ಗಮನಾರ್ಹ ಸಂಗತಿಯೆಂದರೆ, ಈ ಹೊಸ ಆದಾಯ ತೆರಿಗೆ ಮಸೂದೆಯ ಸೆಕ್ಷನ್ 247ರ ಅಡಿಯಲ್ಲಿ ಡಿಜಿಟಲ್ ಡೇಟಾವನ್ನು ಪ್ರವೇಶಿಸಲು ಅನುಮತಿಸಲಾದ ಕೆಲವೇ ಕೆಲವು ಅಧಿಕಾರಿಗಳು ಮಾತ್ರ ಈ ಇಮೇಲ್‌ಗಳು, ಸಾಮಾಜಿಕ ಮಾಧ್ಯಮ ಖಾತೆಗಳು, ಬ್ಯಾಂಕ್ ವಿವರಗಳು ಮತ್ತು ಹೂಡಿಕೆ ಖಾತೆಗಳನ್ನು ಪರಿಶೀಲಿಸುವ ಹಕ್ಕನ್ನು ಹೊಂದಿರುತ್ತಾರೆ. 

ಏಪ್ರಿಲ್ 1, 2025 ರಂದು ಪ್ರಾರಂಭವಾಗುವ ಹೊಸ ಹಣಕಾಸು ವರ್ಷದೊಂದಿಗೆ, ಆದಾಯ ತೆರಿಗೆ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಆಗಲಿದೆ. 2025 ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಈ ನವೀಕರಣಗಳು ಆದಾಯ  ತೆರಿಗೆದಾರರ ಮೇಲೆ ಗಮನಾರ್ಹ ಪರಿಣಾಮವನ್ನು ಉಂಟುಮಾಡುತ್ತದೆ. ಅದರಲ್ಲೂ ಮುಖ್ಯವಾಗಿ 2025-26ನೇ ಹಣಕಾಸು ವರ್ಷಕ್ಕೆ ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಸರ್ಕಾರ ಹೊಸ ತೆರಿಗೆ ಶ್ರೇಣಿಗಳನ್ನು ಪರಿಚಯಿಸಿದೆ:

ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್‌ಗಳು ಕೆಳಕಂಡಂತಿವೆ: 
>> 4 ಲಕ್ಷ ರೂ.ಗಳವರೆಗಿನ ಆದಾಯದ ಮೇಲೆ  "ಶೂನ್ಯ" ತೆರಿಗೆ 
>> 4 ಲಕ್ಷ ರೂ. ನಿಂದ 8 ಲಕ್ಷ ರೂ. ಆದಾಯದ ಮೇಲೆ 5% ತೆರಿಗೆ 
>> ರೂ. 8,00,001 ರಿಂದ ರೂ. 12,00,000 ಆದಾಯದ ಮೇಲೆ 10%  ತೆರಿಗೆ 
>>  ರೂ. 12,00,001 ರಿಂದ ರೂ. 16,00,000 ಆದಾಯದ ಮೇಲೆ 15% ತೆರಿಗೆ
>> ರೂ. 16,00,001 ರಿಂದ ರೂ. 20,00,000 ಆದಾಯದ ಮೇಲೆ 20% ತೆರಿಗೆ
>> ರೂ. 20,00,001 ರಿಂದ ರೂ. 24,00,000 ಆದಾಯದ ಮೇಲೆ 25% ತೆರಿಗೆ
>> ರೂ. 24,00,000 ಕ್ಕಿಂತ ಹೆಚ್ಚು ಆದಾಯದ ಮೇಲೆ 30% ತೆರಿಗೆ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News