)
Post Office RD scheme: ಭಾರತೀಯ ಅಂಚೆ ಇಲಾಖೆಯು ಅಂಚೆ ಸೇವೆಗಳ ಜೊತೆಗೆ ವಿಮೆ ಮತ್ತು ಬ್ಯಾಂಕಿಂಗ್ ಸೇವೆಗಳನ್ನೂ ಒದಗಿಸುತ್ತದೆ. ಅಂಚೆ ಇಲಾಖೆಯ ಬ್ಯಾಂಕಿಂಗ್ ಸೇವೆಗಳಲ್ಲಿ ಸಾಮಾನ್ಯ ಉಳಿತಾಯ ಖಾತೆಗಳ ಜೊತೆಗೆ ವಿವಿಧ ರೀತಿಯ ಉಳಿತಾಯ ಯೋಜನೆಗಳಡಿ ಖಾತೆಗಳನ್ನ ಸಹ ತೆರೆಯಬಹುದು. ಇಂದು ನಾವು ಅಂಚೆ ಕಚೇರಿಯ ಆರ್ಡಿ ಯೋಜನೆಯ ಬಗ್ಗೆ ವಿವರವಾಗಿ ನಿಮಗೆ ತಿಳಿಸಲಿದ್ದೇವೆ. ಇದರೊಂದಿಗೆ ಅಂಚೆ ಕಚೇರಿಯ ಆರ್ಡಿ ಯೋಜನೆಯಲ್ಲಿ ಪ್ರತಿ ತಿಂಗಳು 2200 ರೂ. ಠೇವಣಿ ಇಟ್ಟರೆ, 60 ತಿಂಗಳಲ್ಲಿ ಎಷ್ಟು ನಿಧಿ ನಿಮ್ಮ ಕೈಸೇರುತ್ತದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಪ್ರತಿ ತಿಂಗಳು ನಿಗದಿತ ಮೊತ್ತವನ್ನ ಆರ್ಡಿ ಅಂದರೆ ಮರುಕಳಿಸುವ ಠೇವಣಿಯಲ್ಲಿ ಠೇವಣಿ ಇಡಲಾಗುತ್ತದೆ. ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಆರ್ಡಿ ಯೋಜನೆಯ ಮೇಲೆ ವಾರ್ಷಿಕ ಶೇ.6.7ರಷ್ಟು ಬಡ್ಡಿ ನೀಡುತ್ತಿದೆ. ಈ ಯೋಜನೆಯಲ್ಲಿ ನೀವು ಕನಿಷ್ಠ ಮಾಸಿಕ 100 ರೂ. ಹೂಡಿಕೆಯೊಂದಿಗೆ ಖಾತೆ ತೆರೆಯಬಹುದು. ಆದರೆ ಅದರಲ್ಲಿ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಅಂದರೆ ಈ ಖಾತೆಯಲ್ಲಿ ನೀವು ಎಷ್ಟು ಬೇಕಾದರೂ ಹಣ ಠೇವಣಿ ಇಡಬಹುದು. ಅಂಚೆ ಕಚೇರಿಯ ಆರ್ಡಿ ಖಾತೆಯನ್ನ 10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಗೆ ತೆರೆಯಬಹುದು. ಇದರಲ್ಲಿ ಒಂದೇ ಖಾತೆ ಮತ್ತು ಜಂಟಿ ಖಾತೆಯನ್ನೂ ತೆರೆಯಬಹುದು.
60 ತಿಂಗಳಲ್ಲಿ ಪಕ್ವವಾಗುತ್ತದೆ
ಅಂಚೆ ಕಚೇರಿಯ ಆರ್ಡಿ ಖಾತೆಯು 60 ತಿಂಗಳುಗಳಲ್ಲಿ ಅಂದರೆ 5 ವರ್ಷಗಳಲ್ಲಿ ಪಕ್ವವಾಗುತ್ತದೆ. ಆದರೆ ಖಾತೆ ತೆರೆದ ದಿನಾಂಕದಿಂದ 3 ವರ್ಷಗಳ ನಂತರವೂ ಅದನ್ನ ನೀವು ಕ್ಲೋಸ್ ಮಾಡಬಹುದು. ನೀವು ಪ್ರತಿತಿಂಗಳು ಅಂಚೆ ಕಚೇರಿಯ ಆರ್ಡಿ ಖಾತೆಯಲ್ಲಿ 2200 ರೂ. ಠೇವಣಿ ಮಾಡಿದರೆ, 60 ತಿಂಗಳ ನಂತರ ಅಂದರೆ ಮುಕ್ತಾಯದ ಸಮಯದಲ್ಲಿ ನಿಮಗೆ ಒಟ್ಟು 1,57,004 ರೂ. ಸಿಗುತ್ತವೆ. ಈ ಮೊತ್ತವು ನಿಮ್ಮಿಂದ ಠೇವಣಿ ಮಾಡಲಾದ 1,32,000 ರೂ.ಗಳು ಮತ್ತು 25,004 ರೂ.ಗಳ ಬಡ್ಡಿಯನ್ನೂ ಒಳಗೊಂಡಿರುತ್ತದೆ. ಅಂಚೆ ಕಚೇರಿ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತದೆ. ಆದ್ದರಿಂದ ನಿಮ್ಮ ಎಲ್ಲಾ ಹಣವು ಇದರಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)