ಏಕಾಏಕಿ ಟಿಕೆಟ್ ದರ ಏರಿಸಿದ ಭಾರತೀಯ ರೈಲ್ವೆ!ಇನ್ನು ಅಗ್ಗವಲ್ಲ ರೈಲು ಪ್ರಯಾಣ

Indian Railway Ticket Price Hike:  ರೈಲು ಟಿಕೆಟ್ ದರವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಹೊಸ ದರ ಜುಲೈ 1, 2025 ರಿಂದ ಜಾರಿಗೆ ಬರಲಿದೆ.   

Written by - Ranjitha R K | Last Updated : Jun 24, 2025, 03:26 PM IST
  • ದುಬಾರಿಯಗಾಲಿದೆ ರೈಲು ಟಿಕೆಟ್ ದರ
  • ಜುಲೈ 1, 2025 ರಿಂದ ಟಿಕೆಟ್ ದರ ಜಾರಿಗೆ
  • ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ದರ ಹೆಚ್ಚಳ
ಏಕಾಏಕಿ ಟಿಕೆಟ್ ದರ ಏರಿಸಿದ ಭಾರತೀಯ ರೈಲ್ವೆ!ಇನ್ನು ಅಗ್ಗವಲ್ಲ ರೈಲು ಪ್ರಯಾಣ

Indian Railway Ticket Price Hike : ವರ್ಷಗಳ ನಂತರ, ಭಾರತೀಯ ರೈಲ್ವೆ ರೈಲು ಟಿಕೆಟ್ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಹೌದು, ಜುಲೈ 1, 2025 ರಿಂದ ಟಿಕೆಟ್ ದರವನ್ನು ಹೆಚ್ಚಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ವರದಿಯ ಪ್ರಕಾರ, ಜುಲೈ 1 ರಿಂದ ಎಸಿ ಮತ್ತು ನಾನ್ ಎಸಿ ರೈಲುಗಳಲ್ಲಿ ಪ್ರಯಾಣಿಸುವುದು ದುಬಾರಿಯಾಗಲಿದೆ. ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ದರವನ್ನು ಹೆಚ್ಚಿಸಲು ರೈಲ್ವೆ ಸಿದ್ಧತೆ  ಮಾಡಿಕೊಂಡಿವೆ. ಮೂಲಗಳ ಪ್ರಕಾರ ನಾನ್ ಎಸಿ ಕೋಚ್‌ಗಳ ದರವನ್ನು ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಿಸಿದೆ. ಎಸಿ ಕೋಚ್‌ಗಳ ದರವನ್ನು ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಿಸಲಾಗಿದೆ. ರೈಲ್ವೆ ಮಂಡಳಿಯು ಈ ಪ್ರಸ್ತಾವನೆಯನ್ನು ಈಗಾಗಲೇ ರೈಲ್ವೆ ಸಚಿವಾಲಯಕ್ಕೆ ಕಳುಹಿಸಿದೆ. ಇಲ್ಲಿ ಅನುಮೋದನೆ ಪಡೆದ ಬಳಿಕ ಜುಲೈ 1 ರಿಂದ ಹೊಸ ಅದರ ಜಾರಿಗೆ ಬರಲಿದೆ. 

Add Zee News as a Preferred Source

ಯಾವ ರೈಲುಗಳ ಟಿಕೆಟ್‌ಗಳು ದುಬಾರಿಯಾಗುತ್ತವೆ  :  
ಮಾಹಿತಿಯ ಪ್ರಕಾರ, ನಾನ್ ಎಸಿ ಜನರಲ್ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದ್ದು, ಎಸಿ  ದರವು ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಾಗುತ್ತದೆ. ರೈಲ್ವೆ ಮಂಡಳಿಯು 500 ಕಿಮೀಗಿಂತ ಹೆಚ್ಚಿನ ಪ್ರಯಾಣದಲ್ಲಿ ಇದನ್ನು ಜಾರಿಗೆ ತರಲು ನಿರ್ಧರಿಸಿದೆ.ಇದರರ್ಥ ಇದು ದೈನಂದಿನ ಮತ್ತು ಕಡಿಮೆ ದೂರ  ಪ್ರಯಾಣ ಮಾಡುವ ಪ್ರಯಾಣಿಕರ ಮೇಲೆ ಪರಿಣಾಮ ಬೀರುವುದಿಲ್ಲ. 500 ಕಿಮೀ ವರೆಗಿನ ಪ್ರಯಾಣದ ಟಿಕೆಟ್ ದರವು ಮೊದಲಿನಂತೆಯೇ ಇರುತ್ತದೆ.  ಆದರೆ 500 ಕಿಮೀಗಿಂತ ಹೆಚ್ಚಿನ ದೂರ ಪ್ರಯಾಣ ಮಾಡುವುದಾದರೆ  ದರ  ಹೆಚ್ಚಳದ ಬಿಸಿ ತಟ್ಟುತ್ತದೆ. 

ಇದನ್ನೂ ಓದಿ :   ಏರಿಕೆಯ ಆತಂಕದ ಮಧ್ಯವೇ ಮತ್ತಷ್ಟು ಕುಸಿದ ಚಿನ್ನದ ಬೆಲೆ! ಆಭರಣ ಪ್ರಿಯರಲ್ಲಿ ಮೂಡಿತು ಸಂತಸ.

ಕಡಿಮೆ ದೂರದ ಪ್ರಯಾಣಿಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ :  
ರೈಲ್ವೆಯ ಈ ನಿರ್ಧಾರವು ಕಡಿಮೆ ದೂರ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಪರಿಣಾಮ ಬೀರುವುದಿಲ್ಲ. 500 ಕಿ.ಮೀ ಒಳಗಿನ ಪ್ರಯಾಣದ ಟಿಕೆಟ್‌ಗಳು ಹಳೆಯ ಬೆಲೆಗೆಯೇ ಲಭ್ಯವಿರುತ್ತವೆ. ಮಂಡಳಿಯು  ಹೊಸ ದರ ಪ್ರಸ್ತಾವನೆಯನ್ನು ರೈಲ್ವೆ ಸಚಿವಾಲಯಕ್ಕೆ ಕಳುಹಿಸಿದ್ದು, ಅನುಮೋದನೆಗಾಗಿ ಕಾಯುತ್ತಿದೆ. ಈ ಪ್ರಸ್ತಾವನೆ ಅನುಮೋದನೆ ಪಡೆದರೆ, ಜುಲೈ 1 ರಿಂದ ನಿಮ್ಮ ರೈಲು ಪ್ರಯಾಣ ದುಬಾರಿಯಾಗುತ್ತದೆ.  

ಇದನ್ನೂ ಓದಿ :   Credit Card: ಕ್ರೆಡಿಟ್ ಕಾರ್ಡ್ ಬಳಕೆದಾರರು ಸಾವನ್ನಪ್ಪಿದರೆ ಬಾಕಿ ಹಣ ಯಾರು ಪಾವತಿಸುತ್ತಾರೆ? ನಿಯಮಗಳೇನು?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News