IRCTC New Rules: ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಆರಾಮದಾಯಕ ಸಂಚಾರಕ್ಕೆ ಹೆಸರುವಾಸಿ ಆಗಿರುವ ರೈಲ್ವೆ ಸಂಚಾರವನ್ನು ಉತ್ತಮಗೊಳಿಸಲು ಹಾಗೂ ಪ್ರಯಾಣಿಕರಿಗೆ ಸುಲಭವಾಗಿ ರೈಲ್ವೆ ಸೌಲಭ್ಯಗಳು ಎಟುಕುವಂತೆ ಮಾಡಲು ಭಾರತೀಯ ರೈಲ್ವೆ ಆಗಾಗ್ಗೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಐಆರ್ಸಿಟಿಸಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕಿಂಗ್ ಮಾಡುವವರಿಗಾಗಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ.
ರೈಲ್ವೆ ಟಿಕೆಟ್ ಬುಕಿಂಗ್ ನಿಯಮ ಬದಲಾವಣೆ:
ಅಕ್ಟೋಬರ್ 28, 2025ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಟಿಕೆಟ್ ಬುಕಿಂಗ್ ನಿಯಮದಲ್ಲಿ ಗಮನಾರ್ಹ ಬದಲಾವಣೆಯನ್ನು ಜಾರಿಗೆ ತಂದಿದ್ದು ಇದು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವವರ ಮೇಲೆ ನೆರೆ ಪರಿಣಾಮ ಬೀರುತ್ತದೆ.
ಭಾರತೀಯ ರೈಲ್ವೆ ಹೊರಡಿಸಿರುವ ಹೊಸ ಮಾರ್ಗಸೂಚಿಯಾ ಪ್ರಕಾರ, ಇನ್ಮುಂದೆ ಆಧಾರ್ ಪರಿಶೀಲಿಸಿದ ಬಳಕೆದಾರರು ಮಾತ್ರವೇ ಬೆಳಿಗ್ಗೆ 8ಗಂಟೆಯಿಂದ 10ಗಂಟೆವರೆಗೆ ಟ್ರೈನ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಒಂದೊಮ್ಮೆ ನೀವು ನಿಮ್ಮ ಐಆರ್ಸಿಟಿಸಿ ಖಾತೆಯಲ್ಲಿ ಆಧಾರ್ ಮಾಹಿತಿಯನ್ನು ನೋಂದಾಯಿಸದಿದ್ದರೆ ಈ ಸಮಯದಲ್ಲಿ ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡುವಲ್ಲಿ ತೊಂದರೆ ಎದುರಿಸಬೇಕಾಗಬಹುದು.
ಇದನ್ನೂ ಓದಿ- Special Pension Scheme: ಕೇವಲ 7ರೂ. ಹೂಡಿಕೆ ಮಾಡಿ ಪ್ರತಿ ತಿಂಗಳು ಪಕ್ಕಾ ಸಿಗುತ್ತೆ 5,000ರೂ. ಪಿಂಚಣಿ
ಏನಿದು ರೈಲ್ವೆ ಹೊಸ ನಿಯಮ:
ಭಾರತೀಯ ರೈಲ್ವೆಯ ಹೊಸ ನಿಯಮಾನುಸಾರ, ಆಧಾರ್ ಪರಿಶೀಲಿಸಿದ ಬಳಕೆದಾರರು ಮಾತ್ರ ಬೆಳಿಗ್ಗೆ 8ಗಂಟೆಯಿಂದ 10ಗಂಟೆವರೆಗೆ ಟ್ರೈನ್ ಟಿಕೆಟ್ ಬುಕ್ ಮಾಡಬಹುದಾಗಿದೆ. ಉಳಿದ ಬಳಕೆದಾರರಿಗೆ ಬೆಳಿಗ್ಗೆ 10ಗಂಟೆಯ ಬಳಿಕವಷ್ಟೇ ಐಆರ್ಸಿಟಿಸಿ ಟಿಕೆಟ್ ಬುಕಿಂಗ್ ಸಾಧ್ಯವಾಗುತ್ತದೆ.
ಭಾರತೀಯ ರೈಲ್ವೆ ನೀಡಿರುವ ಮಾಹಿತಿಯ ಪ್ರಕಾರ, 'ಇದು ಹೆಚ್ಚಿನ ಬೇಡಿಕೆ ಇರುವ ಸ್ಲಾಟ್' ಆಗಿದ್ದು, ಈ ವೇಳೆ ಜನರು ಟಿಕೆಟ್‌ಗಳನ್ನು ಬುಕ್ ಮಾಡಲು ಒಲವು ತೋರುತ್ತಾರೆ. ಈ ಹಿಂದೆ, ಏಜೆಂಟ್‌ಗಳ ಮುಖಾಂತರ ಏಕಕಾಲದಲ್ಲಿ ಅನೇಕ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದರು. ಹಾಗಾಗಿಯೇ, ಜನಸಾಮಾನ್ಯರಿಗೆ ಕನ್ಫರ್ಮ್ ಟಿಕೆಟ್ ಪಡೆಯುವುದು ಕಷ್ಟವಾಗುತ್ತಿತ್ತು. ಇದೀಗ ಆಧಾರ್ ಪರಿಶೀಲನೆ ಮೂಲಕ ಪ್ರತಿಯೊಬ್ಬ ಪ್ರಯಾಣಿಕರ ಗುರುತನ್ನು ಕಾನೂನುಬದ್ದಗೊಳಿಸಲು ಸಾಧ್ಯವಾಗುತ್ತದೆ. ಜೊತೆಗೆ ನಿಜವಾಗಿಯೂ ಅಗತ್ಯವಿದ್ದವಿರುವ ಪ್ರಯಾಣಿಕರ ಹೆಸರಿನಲ್ಲಿ ಮಾತ್ರ ಟಿಕೆಟ್ ಬುಕ್ ಮಾಡಲಾಗುತ್ತದೆ.
ಕನ್ಫರ್ಮ್ ಟಿಕೆಟ್:
ಐಆರ್ಸಿಟಿಸಿ ಪ್ರಕಾರ, ಇತ್ತೀಚಿನ ದಿನಗಳಲ್ಲಿ ವಂಚನೆ ಹಾಗೂ ಬಹು ಬುಕ್ಕಿಂಗ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬುಕಿಂಗ್ ಏಜೆಂಟ್‌ಗಳು ಸೆಕೆಂಡುಗಳಲ್ಲಿ ನೂರಾರು ಟಿಕೆಟ್‌ಗಳನ್ನು ಬುಕ್ ಮಾಡಲು ಸಾಫ್ಟ್‌ವೇರ್'ಗಳನ್ನೂ ಸಹ ಬಳಸುತ್ತಿದ್ದಾರೆ. ಇದರಿಂದಾಗಿ, ಸಾಮಾನ್ಯ ಪ್ರಯಾಣಿಕರಿಗೆ ರೈಲಿನಲ್ಲಿ ದೃಢೀಕೃತ ಟಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಪ್ರಕರಣಗಳನ್ನು ಮನಗಂಡು, ರೈಲ್ವೆ ಇಲಾಖೆ ಇದೀಗ ಆಧಾರ್ ಆಧಾರಿತ ಪರಿಶೀಲನಾ ವ್ಯವಸ್ಥೆಯ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಇದರಿಂದ ಟಿಕೆಟ್ ಬುಕಿಂಗ್ ಹೆಚ್ಚು ಪಾರದರ್ಶಕವಾಗುವುದರ ಜೊತೆಗೆ ಅಗತ್ಯ ಇದ್ದವರಿಗೆ ಕನ್ಫರ್ಮ್ ಟಿಕೆಟ್ ಪಡೆಯಲು ಅನುವಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ- ಈಗ ಸುಲಭವಾಗಿ ಸಿಗುತ್ತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್, ಪಿಂಚಣಿದಾರರಿಗೆ ಜಾಕ್‌ಪಾಟ್
ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ:
ಗಮನಾರ್ಹವಾಗಿ ಈ ಮೊದಲು ಜುಲೈ 01, 2025ರಿಂದ ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಆಧಾರ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿತ್ತು. ಬಳಿಕ ಜುಲೈ 15, 2025ರಿಂದ ಒಟಿಪಿ ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಕೂಡ ಸೇರ್ಪಣೆಗೊಳಿಸಿತ್ತು.









