Indian Railways: ರೈಲು ಪ್ರಯಾಣಿಕರೇ ಗಮನಿಸಿ, ಈ ವಸ್ತುಗಳನ್ನು ಎಂದಿಗೂ ರೈಲಿನಲ್ಲಿ ಕೊಂಡೊಯ್ಯಬೇಡಿ

Indian Railways: ದೂರದ ಪ್ರಯಾಣಗಳಿಗೆ ಆರ್ಥಿಕವಾಗಿ ಹಾಗೂ ಆರಾಮದಾಯಕ ಪ್ರಯಾಣದ ದೃಷ್ಟಿಯಿಂದ ರೈಲು ಪ್ರಯಾಣಕ್ಕೆ ಜನರು ಹೆಚ್ಚು ಮಹತ್ವವನ್ನು ನೀಡುತ್ತಾರೆ. ಬಸ್, ವಿಮಾನ ಪ್ರಯಾಣಗಳಿಗಿಂತ ರೈಲು ಪ್ರಯಾಣದಲ್ಲಿ ಹೆಚ್ಚಿನ ವಸ್ತುಗಳನ್ನು ಕೊಂಡೊಯ್ಯಬಹುದು ಎಂಬುದು ಕೆಲವರ ಲೆಕ್ಕಾಚಾರ. ಅದೇನೇ ಇರಲಿ, ರೈಲು ಪ್ರಯಾಣದಲ್ಲಿ ಅಧಿಕ ವಸ್ತುಗಳನ್ನು ಸಾಗಿಸಬಹುದಾದರೂ, ಕೆಲವು ವಸ್ತುಗಳ ಸಾಗಾಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನೀವು ಪ್ರಯಾಣಿಸುವಾಗ ನಿಮ್ಮೊಂದಿಗೆ ಈ ವಸ್ತುಗಳನ್ನು ಸಾಗಿಸುವಾಗ ಸಿಕ್ಕಿಬಿದ್ದರೆ ಇದರಿಂದ ಜೈಲು ಸೇರಬಹುದು ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Dec 21, 2022, 07:01 AM IST
  • ರೈಲು ಪ್ರಯಾಣ ಆರಾಮದಾಯಕ ಮಾತ್ರವಲ್ಲ, ಆರ್ಥಿಕ ದೃಷ್ಟಿಯಿಂದಲೂ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲ.
  • ಅಷ್ಟೇ ಅಲ್ಲ, ಬಸ್ಸುಗಳು ಮತ್ತು ವಿಮಾನಗಳಿಗಿಂತ ರೈಲಿನಲ್ಲಿ ಹೆಚ್ಚಿನ ಲಗೇಜ್ ಹೊತ್ತೊಯ್ಯಬಹುದು.
  • ಆದರೆ, ರೈಲಿನಲ್ಲಿ ಕೆಲವು ವಸ್ತುಗಳ ಸಾಗಾಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Indian Railways: ರೈಲು ಪ್ರಯಾಣಿಕರೇ ಗಮನಿಸಿ, ಈ ವಸ್ತುಗಳನ್ನು ಎಂದಿಗೂ ರೈಲಿನಲ್ಲಿ ಕೊಂಡೊಯ್ಯಬೇಡಿ  title=
Railway Rules For Luggage

Indian Railways: ನಮ್ಮಲ್ಲಿ ಕೆಲವರಿಗೆ ಚಿಕ್ಕ ವಯಸ್ಸಿನಿಂದಲೂ ರೈಲಿನಲ್ಲಿ ಪ್ರಯಾಣಿಸುವುದು ಎಂದರೆ ಏನೋ ಒಂದು ರೀತಿಯ ಖುಷಿ. ರೈಲಿನಲ್ಲಿ ಪ್ರಯಾಣಿಸುವುದರ ಇನ್ನೊಂದು ಪ್ರಮುಖ ಉಪಯೋಗವೆಂದರೆ ಇದು ಆರ್ಥಿಕ ದೃಷ್ಟಿಯಿಂದಲೂ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಅಷ್ಟೇ ಅಲ್ಲ, ಬಸ್ಸುಗಳು ಮತ್ತು ವಿಮಾನಗಳಿಗಿಂತ ರೈಲಿನಲ್ಲಿ ಹೆಚ್ಚಿನ ಲಗೇಜ್ ಹೊತ್ತೊಯ್ಯಬಹುದು. ಅದಾಗ್ಯೂ, ಪ್ರಯಾಣಿಕರ ಬಳಿ ಅತ್ಯಧಿಕ ಲಗೇಜ್ ಕಂಡು ಬಂದಲ್ಲಿ ಟಿಟಿಇ ದಂಡ ವಿಧಿಸಬಹುದು. ಇದಲ್ಲದೆ, ರೈಲಿನಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯುವುದನ್ನು/ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಪ್ರಯಾಣಿಕರು ರೈಲಿನಲ್ಲಿ ಇಂತಹ ನಿಷೇಧಿತ ವಸ್ತುಗಳನ್ನು ಸಾಗಿಸುವುದು ಕಂಡು ಬಂದಲ್ಲಿ ಅವರಿಗೆ ದಂಡ ವಿಧಿಸುವುದರ ಜೊತೆಗೆ ಜೈಲು ಶಿಕ್ಷೆಗೂ ಗುರಿಯಾಗಿಸಬಹುದು ಎಂದು ನಿಮಗೆ ತಿಳಿದಿದೆಯೇ?

ರೈಲಿನಲ್ಲಿ ಯಾವ ವಸ್ತುಗಳನ್ನು ಸಾಗಾಣೆ ಮಾಡುವುದು ಶಿಕ್ಷಾರ್ಹ ಅಪರಾಧ. ಎಂತಹ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಯಿರಿ.

ರೈಲಿನಲ್ಲಿ ಈ ವಸ್ತುಗಳ ಸಾಗಾಣೆ ನಿಮ್ಮನ್ನು ಜೈಲು ಸೇರಿಸಬಹುದು, ಎಚ್ಚರ!
ಗ್ಯಾಸ್ ಸ್ಟವ್ ಅಥವಾ ಗ್ಯಾಸ್ ಸಿಲಿಂಡರ್:

ಸಾಮಾನ್ಯವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವರ್ಗಾವಣೆ ಆದಾಗ ಜನರು ಕೆಲವು ಅಗತ್ಯ ವಸ್ತುಗಳನ್ನು ಮಾತ್ರ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಆದರೆ, ಹಾಗಂತ ನೀವು ರೈಲಿನಲ್ಲಿ ಗ್ಯಾಸ್ ಸ್ಟವ್ ಅಥವಾ ಗ್ಯಾಸ್ ಸಿಲಿಂಡರ್ ಅನ್ನು ಸಾಗಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ರೈಲ್ವೇ ಕಾಯಿದೆಯಡಿ ಇದು ಶಿಕ್ಷಾರ್ಹ ಅಪರಾಧ. ಒಂದೊಮ್ಮೆ ನೀವು ದೂರದ ಊರಿಗೆ ನಿಮ್ಮ ಗ್ಯಾಸ್ ಸ್ಟವ್ ಅಥವಾ ಸಿಲಿಂಡರ್ ಸಾಗಿಸಬೇಕೆಂದಿದ್ದಲ್ಲಿ , ರೈಲ್ವೆಯಿಂದ ಪೂರ್ವಾನುಮತಿ ಪಡೆದು ಖಾಲಿ ಸಿಲಿಂಡರ್‌ಗಳನ್ನು ಮಾತ್ರ ಸಾಗಿಸಬಹುದು. ಯಾರಾದರೂ ತುಂಬಿದ ಸಿಲಿಂಡರ್ ಅನ್ನು ರೈಲಿನಲ್ಲಿ ಕೊಂಡೊಯ್ಯುವುದು ಕಂಡು ಬಂದಲ್ಲಿ ದಂಡದ ಜೊತೆಗೆ ಕಠಿಣ ಶಿಕ್ಷೆಯನ್ನೂ ವಿಧಿಸಬಹುದು. 

ಇದನ್ನೂ ಓದಿ- SUV ಖರೀದಿಸಲು ಬಯಸುವವರಿಗೊಂದು ಬಂಬಾಟ್ ಸುದ್ದಿ... ಈ ಅವಕಾಶ ಮಿಸ್ ಮಾಡ್ಕೋಬೇಡಿ

ಆಸಿಡ್:
ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ರೈಲಿನಲ್ಲಿ ಆಸಿಡ್ ಬಾಟಲ್, ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಆಸಿಡ್ ಬಾಟಲ್ ಒಯ್ಯುವುದು ಕಂಡು ಬಂದರೆ ರೈಲ್ವೆ ಕಾಯಿದೆಯ ಸೆಕ್ಷನ್ 164 ರ ಅಡಿಯಲ್ಲಿ ಅವರನ್ನು ತಕ್ಷಣವೇ ಅರೆಸ್ಟ್ ಮಾಡಬಹುದು. ಇದಲ್ಲದೆ, 1,000 ರೂಪಾಯಿಗಳ ದಂಡದ ಜೊತೆಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಬಹುದು.

ಆಯುಧಗಳು:
ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರು ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ಹೊರತುಪಡಿಸಿ ಕತ್ತಿ, ಚಾಕು, ಈಟಿ, ಕಠಾರಿ, ರೈಫಲ್ ಅಥವಾ ಇತರ ಯಾವುದೇ ಮಾರಕ ಆಯುಧವನ್ನು ಸಾಗಿಸುವಂತಿಲ್ಲ. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಪರವಾನಗಿ ಇಲ್ಲದ ಆಯುಧಗಳು ನಿಮ್ಮ ಬಳಿ ಪತ್ತೆ ಆದರೆ ನಿಮ್ಮ ವಿರುದ್ಧ ರೈಲ್ವೇ ಕಾಯಿದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸುವ ಮೂಲಕ ತಕ್ಷಣವೇ ಕ್ರಮ ಕೈಗೊಳ್ಳಬಹುದು.

ಇದನ್ನೂ ಓದಿ- PPF Scheme : ಕೇಂದ್ರ ಬಜೆಟ್‌ಗೂ ಮುನ್ನ ಪಿಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್!

ಪಟಾಕಿ:
ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ರೈಲಿನಲ್ಲಿ  ಪಟಾಕಿಗಳನ್ನು ಸಾಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಪಟಾಕಿ ಸಾಗಿಸುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.  ಅವರಿಗೆ ಭಾರೀ ಮೊತ್ತದ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ಸಹ ವಿಧಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News