ಮಿಲಿಯನೇರ್ ಮಗು!​: ಇನ್ಫಿ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ 3.3 ಕೋಟಿ ರೂ.!!

ನಾರಾಯಣ ಮೂರ್ತಿಯವರು ತಮ್ಮ ಮೊಮ್ಮಗನಿಗೆ ಆಫ್-ಮಾರ್ಕೆಟ್ ವಹಿವಾಟಿನಲ್ಲಿ ಷೇರುಗಳನ್ನ ಗಿಫ್ಟ್‌ ನೀಡಿದ್ದರು. ಇದರಿಂದ ಕಂಪನಿಯಲ್ಲಿ ಅವರ ಷೇರಿನ ಪಾಲು ಶೇ.0.40 ಅಥವಾ 1.51 ಕೋಟಿ ಷೇರುಗಳಿಗೆ ಇಳಿಕೆಯಾಗಿತ್ತು.

Written by - Puttaraj K Alur | Last Updated : Apr 19, 2025, 11:23 PM IST
  • ಇನ್ಫಿ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ ಕೋಟಿ ಕೋಟಿ
  • ರೋಹನ್ ಮೂರ್ತಿ ಮಗನ ಆದಾಯ ಬರೋಬ್ಬರಿ 3.3 ಕೋಟಿ ರೂಪಾಯಿ
  • ಇನ್ಫೋಸಿಸ್ ಡಿವಿಡೆಂಟ್‌ ಮೂಲಕವೇ ಕೋಟ್ಯಂತರ ರೂಪಾಯಿ ಆದಾಯ
ಮಿಲಿಯನೇರ್ ಮಗು!​: ಇನ್ಫಿ ಮೂರ್ತಿಯ 17 ತಿಂಗಳ ಮೊಮ್ಮಗನ ಈ ವರ್ಷದ ಆದಾಯ 3.3 ಕೋಟಿ ರೂ.!!

Millionaire child: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗ ಏಕಗ್ರಹ ಮೂರ್ತಿಗೆ 240 ಕೋಟಿ ರೂಪಾಯಿ ಮೌಲ್ಯದ 15 ಲಕ್ಷ ಇನ್ಫೊಸಿಸ್ ಷೇರು (ಶೇ.0.04ರಷ್ಟು)ಗಳನ್ನು ಉಡುಗೊರೆಯಾಗಿ ನೀಡಿದ್ದರು. ಹೀಗಾಗಿ ಅವರ 17 ತಿಂಗಳ ಮೊಮ್ಮಗ ಇದೀಗ ವರ್ಷಕ್ಕೆ ಕೋಟಿ ಕೋಟಿ ಆದಾಯ ಗಳಿಸುತ್ತಿದೆ. ಇನ್ನು ಪುಟ್ಟು ಪುಟ್ಟ ಹೆಜ್ಜೆ ಹಾಕಿ ಜಗತ್ತು ನೋಡುವ ತವಕದಲ್ಲಿರುವ ಈ ಮಗು 2025ರ ಆರ್ಥಿಕ ಸಾಲಿನಲ್ಲಿ ಬರೋಬ್ಬರಿ 3.3 ಕೋಟಿ ರೂ. ಆದಾಯ ಗಳಿಸಿದೆ.. 

ರೋಹನ್ ಮೂರ್ತಿ ಮಗನ ಆದಾಯ 3.3 ಕೋಟಿ ರೂಪಾಯಿ!

ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಪುತ್ರ ರೋಹನ್ ಮೂರ್ತಿ ಇನ್ಫೋಸಿಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಲು ಹೊಂದಿದ್ದಾರೆ. ರೋಹನ್ ಮೂರ್ತಿ ಹಾಗೂ ಅಪರ್ಣಾ ಮೂರ್ತಿ ದಂಪತಿ 17 ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ರೋಹನ್ ಮೂರ್ತಿ ದಂಪತಿ ʼಏಕಾಗ್ರಹʼ ಎಂದು ಹೆಸರಿಟ್ಟಿಟ್ಟಿದ್ದರು. 1 ವರ್ಷ ನಾಲ್ಕು ತಿಂಗಳ ವಯಸ್ಸಿನ ಈ ಮಗು ಈಗ ಪುಟ್ಟ ಹೆಜ್ಜೆ ಇಡುತ್ತಿದೆ. ಆದರೆ ಈ ಪುಟಾಣಿಯ ಪುಟ್ಟ ಹೆಜ್ಜೆಯ ಆದಾಯವು ಹಲವಾರು ಸಿಇಒಗಳ ಸ್ಯಾಲರಿಯನ್ನೇ ಮೀರಿಸಿದೆ. 2025ರ ಆರ್ಥಿಕ ವರ್ಷದಲ್ಲಿ 17 ತಿಂಗಳ ಈ ಮಗು ಬರೋಬ್ಬರಿ 3.3 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಇದನ್ನೂ ಓದಿ: Best BIKE: 65 ಕಿ.ಮೀ ಮೈಲೇಜ್ ನೀಡುವ ಈ ಬೈಕಿನ ಬೆಲೆ ಕೇವಲ 76 ಸಾವಿರ ರೂಪಾಯಿ!!

ಇನ್ಫೋಸಿಸ್ ಡಿವಿಡೆಂಟ್‌ನಿಂದ ಆದಾಯ

ಶೀಘ್ರವೇ ಏಕಾಗ್ರಹ ರೋಹನ್ ಮೂರ್ತಿ ಅಂದರೆ ನಾರಾಯಣ ಮೂರ್ತಿ ಅವರ 17 ತಿಂಗಳ ಮೊಮ್ಮಗ 3.3 ಕೋಟಿ ರೂ. ಆದಾಯ ಪಡೆಯಲಿದೆ. ಇನ್ಫೋಸಿಸ್ ಡಿವಿಡೆಂಟ್ ಮೂಲಕ ಮಗು ಈ ಕೋಟಿ ಕೋಟಿ ರೂಪಾಯಿ ಆದಾಾಯ ಪಡೆಯಲಿದೆ. ಈ ವರ್ಷದ ಇನ್ಫೊಸಿಸ್ ಡಿವಿಡೆಂಟ್ ರೂಪದಲ್ಲಿ ಮಗು 3.3 ಕೋಟಿ ರೂಪಾಯಿ ಆದಾಯ ಪಡೆಯಲಿದೆ. 2025ರ ಆರ್ಥಿಕ ವರ್ಷದ ಅಂತಿಮ ಈಕ್ವಿಟಿ ಡಿವಿಟೆಂಡ್ ಪಾಲನ್ನು ಮೇ 30ರ ವಾರ್ಷಿಕ ಸಾಮಾನ್ಯ ಸಭೆ(AGM)ಯಲ್ಲಿ ಘೋಷಿಸಲಾಗುತ್ತದೆ.  

ನಾರಾಯಣ ಮೂರ್ತಿಯವರು ತಮ್ಮ ಮೊಮ್ಮಗನಿಗೆ ಆಫ್-ಮಾರ್ಕೆಟ್ ವಹಿವಾಟಿನಲ್ಲಿ ಷೇರುಗಳನ್ನ ಗಿಫ್ಟ್‌ ನೀಡಿದ್ದರು. ಇದರಿಂದ ಕಂಪನಿಯಲ್ಲಿ ಅವರ ಷೇರಿನ ಪಾಲು ಶೇ.0.40 ಅಥವಾ 1.51 ಕೋಟಿ ಷೇರುಗಳಿಗೆ ಇಳಿಕೆಯಾಗಿತ್ತು. ಇನ್ಫೋಸಿಸ್ ಮಾಲೀಕತ್ವದಲ್ಲಿ ರೋಹನ್ ಮೂರ್ತಿ 1.64%, ಅಕ್ಷತಾ ಮೂರ್ತಿ 1.05% ಮತ್ತು ಸುಧಾ ಮೂರ್ತಿ 0.93% ಪಾಲನ್ನು ಹೊಂದಿದ್ದಾರೆ.

ಇದನ್ನೂ ಓದಿ: 20,000 ರೂ. ಒಳಗಿನ ಭಾರತದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News