ಅಂಚೆ ಕಚೇರಿಯ ಈ ವಿಶೇಷ ಯೋಜನೆಯಲ್ಲಿ 5ಲಕ್ಷ ಹೂಡಿಕೆ ಮಾಡಿ 15 ಲಕ್ಷ ಗಳಿಸಬಹುದು, ಹೇಗ್ ಗೊತ್ತಾ...!

Post Office Scheme: ಪ್ರತಿಯೊಬ್ಬ ಪಾಲಕರು ತಮ್ಮ ಮಗುವಿಗೆ ಸಾಧ್ಯವಾದಷ್ಟು ಅನುಕೂಲಕರವಾದ, ನೆಮ್ಮದಿಯ ಜೀವನವನ್ನು ನೀಡಬೇಕೆಂದು ಇಚ್ಚಿಸುತ್ತಾರೆ. ಈ ಕಾರಣದಿಂದಾಗಿ, ಮಗು ಹುಟ್ಟಿದ ತಕ್ಷಣ ಅವರ ಭವಿಷ್ಯಕ್ಕಾಗಿ ಹೂಡಿಕೆಯನ್ನು ಸಹ ಆರಂಭಿಸುತ್ತಾರೆ. 

Written by - Yashaswini V | Last Updated : Mar 14, 2025, 01:07 PM IST
  • ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿದ್ದರೆ ಅಥವಾ ವೃದ್ಧಾಪ್ಯದಲ್ಲಿ ನೀವು ಆರ್ಥಿಕವಾಗಿ ಬಲಶಾಲಿಯಾಗಬೇಕೆಂದು ಹೂಡಿಕೆ ಬಗ್ಗೆ ಚಿಂತಿಸುತ್ತಿದ್ದರೆ ಇದಕ್ಕಾಗಿ ಅಂಚೆ ಕಚೇರಿಯ ಈ ಯೋಜನೆ ನಿಮಗೆ ಲಾಭದಾಯಕವಾಗಿದೆ.
  • ಅಂಚೆ ಕಚೇರಿಯ ಈ ಯೋಜನೆಯಲ್ಲಿ 5,00,000ರೂ. ಹೂಡಿಕೆ ಮಾಡಿದರೆ ನಿರ್ದಿಷ್ಟ ಅವಧಿಗೆ ಅದು ಪಕ್ವವಾದಾಗ 15,00,000 ರೂ. ಹಣ ಗಳಿಸಬಹುದು.
ಅಂಚೆ ಕಚೇರಿಯ ಈ ವಿಶೇಷ ಯೋಜನೆಯಲ್ಲಿ 5ಲಕ್ಷ ಹೂಡಿಕೆ ಮಾಡಿ 15 ಲಕ್ಷ ಗಳಿಸಬಹುದು, ಹೇಗ್ ಗೊತ್ತಾ...!

Post Office Special Scheme: ತಮ್ಮ ಮಗುವಿನ ಭವಿಷ್ಯ ಉಜ್ವಲವಾಗಿರಬೇಕು ಎಂದು ತಂದೆ-ತಾಯಿ ಮಗು ಹುಟ್ಟಿದಾಗಿನಿಂದ ಅವರ ಹೆಸರಿನಲ್ಲಿ ಪಿಪಿಎಫ್‌, ಸುಕ್ಯಾನ ಸಮೃದ್ಧಿಯಂತಹ  ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ.   ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿದ್ದರೆ ಅಥವಾ ವೃದ್ಧಾಪ್ಯದಲ್ಲಿ ನೀವು ಆರ್ಥಿಕವಾಗಿ ಬಲಶಾಲಿಯಾಗಬೇಕೆಂದು ಹೂಡಿಕೆ ಬಗ್ಗೆ ಚಿಂತಿಸುತ್ತಿದ್ದರೆ ಇದಕ್ಕಾಗಿ ಅಂಚೆ ಕಚೇರಿಯ ಈ ಯೋಜನೆ ನಿಮಗೆ ಲಾಭದಾಯಕವಾಗಿದೆ. 

Add Zee News as a Preferred Source

ಪೋಸ್ಟ್ ಆಫೀಸ್ ಟರ್ಮ್ ಠೇವಣಿ ಅಂದರೆ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ 5,00,000ರೂ. ಹೂಡಿಕೆ ಮಾಡಿದರೆ ನಿರ್ದಿಷ್ಟ ಅವಧಿಗೆ ಅದು ಪಕ್ವವಾದಾಗ 15,00,000 ರೂ. ಹಣ ಗಳಿಸಬಹುದು. ಅಷ್ಟು ದೊಡ್ಡ ಮೊತ್ತವನ್ನು ಕಲೆ ಹಾಕುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಮುಂದೆ ಓದಿ... 

ವಾಸ್ತವವಾಗಿ, ಪೋಸ್ಟ್ ಆಫೀಸ್‌ನಲ್ಲಿ 5 ವರ್ಷಗಳ ಎಫ್‌ಡಿ ಮೇಲೆ ಬ್ಯಾಂಕ್‌ಗಳಿಗಿಂತ ಉತ್ತಮ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯ ಮೂಲಕ, ನೀವು ಇಚ್ಚಿಸಿದರೆ, ಮೂರು ಪಟ್ಟು ಹೆಚ್ಚು ಮೊತ್ತವನ್ನು ಗಳಿಸಬಹುದು, ಅಂದರೆ ನೀವು ₹5 ಲಕ್ಷ ಹೂಡಿಕೆ ಮಾಡಿದರೆ  ₹15 ಲಕ್ಷಕ್ಕಿಂತ ಹೆಚ್ಚು ಗಳಿಸಬಹುದು. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಿರಿ.

ಇದನ್ನೂ ಓದಿ- ಮೀನು ಪ್ರೀಯರಿಗೆ ಶಾಕ್: ಮೀನಿನ ಬೆಲೆ 30% ಏರಿಕೆ

ಉತ್ತಮ ರಿಟರ್ನ್ ಗಾಗಿ ನಿಮ್ಮ ಹಣವನ್ನು ಈ ರೀತಿ ಹೂಡಿಕೆ ಮಾಡಬಹುದು!
₹5,00,000 ದಿಂದ  ₹15,00,000 ವನ್ನಾಗಿ ಮಾಡಲು, ಅಂಚೆ ಕಚೇರಿಯ ಎಫ್‌ಡಿ ಯೋಜನೆಯಲ್ಲಿ 5 ವರ್ಷಗಳವರಿಗೆ ಹೂಡಿಕೆ ಮಾಡಬೇಕು. ಅಂಚೆ ಕಚೇರಿಯು 5 ವರ್ಷಗಳ ಎಫ್‌ಡಿ ಮೇಲೆ ಪ್ರಸ್ತುತ ಶೇ. 7.5 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಅಂತಹ ಸಂರ್ಧಭದಲ್ಲಿ, ಪ್ರಸ್ತುತ ಬಡ್ಡಿದರದೊಂದಿಗೆ ಲೆಕ್ಕ ಹಾಕಿದರೆ, 5 ವರ್ಷಗಳ ನಂತರ ನಿಮ್ಮ ಎಫ್‌ಡಿ ಹೂಡಿಕೆಯ ಹಣ ಪಕ್ವವಾದಾಗ ಎಫ್‌ಡಿ ಮೆಚ್ಯೂರಿಟಿ ಮೊತ್ತ ₹7,24,974 ಆಗಿರುತ್ತದೆ. ನೀವು ಈ ಮೊತ್ತವನ್ನು ಹಿಂಪಡೆಯಬೇಕಾಗಿಲ್ಲ, ಬದಲಿಗೆ ಮತ್ತೆ ಮುಂದಿನ 5 ವರ್ಷಗಳವರೆಗೆ ಅದನ್ನು ಮತ್ತೆ ಎಫ್‌ಡಿಯಲ್ಲಿಯೇ ಹೂಡಿಕೆ ಮಾಡಿ. ಈ ರೀತಿಯಾಗಿ, ನಿಮ್ಮ 5 ಲಕ್ಷ ರೂ. ಮೊತ್ತಕ್ಕೆ 10 ವರ್ಷಗಳಲ್ಲಿ ನೀವು  ₹5,51,175 ಬಡ್ಡಿಯನ್ನು ಗಳಿಸುವಿರಿ . ಹತ್ತು ವಶಕ್ಕೆ ನಿಮ್ಮ ಹಣದ ಒಟ್ಟು ಮೊತ್ತವು  ₹10,51,175 ಆಗುತ್ತದೆ. ಈ ಮೊತ್ತವು ಎರಡು ಪಟ್ಟು ಹೆಚ್ಚು. ಆದರೆ ನೀವು ಈ ಮೊತ್ತವನ್ನು ಇನ್ನೊಮ್ಮೆ 5 ವರ್ಷಗಳವರೆಗೆ ಎಫ್‌ಡಿ ಇಟ್ಟರೆ 
ಮೆಚ್ಯೂರಿಟಿ ಸಮಯದಲ್ಲಿ ಒಟ್ಟು ₹15,24,149 ಹಣ ನಿಮ್ಮ ಕೈ ಸೇರುತ್ತದೆ. 

ಇದನ್ನೂ ಓದಿ- ಆರ್‌ಬಿ‌ಐನಿಂದ ಶೀಘ್ರದಲ್ಲೇ ₹100, ₹200 ಮುಖಬೆಲೆಯ ನೋಟುಗಳು ಬಿಡುಗಡೆ... ಹಳೆಯ ನೋಟುಗಳ ಬಗ್ಗೆ ಬಿಗ್ ಅಪ್ಡೇಟ್!

ಸರಳ ಭಾಷೆಯಲ್ಲಿ ಹೇಳುವುದಾದರೆ, ನಿಮ್ಮ ₹5,00,000 ಹಣವನ್ನು ತಲಾ 5ಗಳ ಲೆಕ್ಕಾಚಾರದಲ್ಲಿ ಒಟ್ಟು 15 ವರ್ಷಗಳವರೆಗೆ ಎಫ್‌ಡಿ ಇಟ್ಟರೆ ಒಟ್ಟು ₹15,24,149 ಹಣ ನಿಮ್ಮ ಕೈ ಸೇರುತ್ತದೆ.  
ಬ್ಯಾಂಕಿನಂತೆ ಅಂಚೆ ಕಚೇರಿಗಳಲ್ಲಿಯೂ ಸಹ ನೀವು ಹಲವು ಅವಧಿಗಳ ಎಫ್‌ಡಿ ಗಳ ಆಯ್ಕೆಯನ್ನು ಪಡೆಯುತ್ತೀರಿ. ಪ್ರತಿ ಅವಧಿಗೆ ವಿಭಿನ್ನ ರೀತಿಯ ಬಡ್ಡಿದರಗಳನ್ನು ನೀಡಲಾಗುವುದು. ಪ್ರಸ್ತುತ, ಪೋಸ್ಟ್ ಆಫೀಸ್ ಎಫ್‌ಡಿ ಬಡ್ಡಿದರಗಳನ್ನು ನೋಡುವುದಾದರೆ... 
1 ವರ್ಷದ ಎಫ್‌ಡಿ  -  ಶೇ. 6.9 ವಾರ್ಷಿಕ ಬಡ್ಡಿ
2 ವರ್ಷದ ಎಫ್‌ಡಿ -  ಶೇ. 7.0 ವಾರ್ಷಿಕ ಬಡ್ಡಿ
3 ವರ್ಷಗಳ ಎಫ್‌ಡಿ -  ಶೇ. 7.1 ವಾರ್ಷಿಕ ಬಡ್ಡಿ
5 ವರ್ಷಗಳ ಎಫ್‌ಡಿ-  ಶೇ. 7.5 ವಾರ್ಷಿಕ ಬಡ್ಡಿ

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News