iPhone 16 price: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವಾರು ದೇಶಗಳ ಮೇಲೆ ವಿವಿಧ ಹೊಸ ಸುಂಕಗಳನ್ನು ಘೋಷಿಸಿದ್ದಾರೆ. ಟ್ರಂಪ್ ಸುಂಕದ ಪರಿಣಾಮ ಜಾಗತಿಕವಾಗಿ ವ್ಯಾಪಾರ-ವಹಿವಾಟಿನ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಐಫೋನ್ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ನೀವು ಏನಾದರೂ ಹೊಸ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಲಿದೆ. ಏಕೆಂದರೆ ಟ್ರಂಪ್ ಅವರ ಹೊಸ ಸುಂಕ ನೀತಿಯಿಂದ ಐಫೋನ್‌ಗಳ ಬೆಲೆಗಳು ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಚೀನಾ ಆಪಲ್‌ನ ಅತಿದೊಡ್ಡ ಉತ್ಪಾದನಾ ರಾಷ್ಟ್ರಗಳಲ್ಲಿ ಒಂದಾಗಿದೆ. ಅಮೆರಿಕ ಈಗಾಗಲೇ ಚೀನಾದ ಮೇಲೆ 20% ಸುಂಕವನ್ನು ವಿಧಿಸಿದೆ. ಈಗ ಟ್ರಂಪ್ ಸರ್ಕಾರ ಚೀನಾದ ಮೇಲೆ 34% ಹೆಚ್ಚುವರಿ ಸುಂಕವನ್ನು ವಿಧಿಸಿದೆ. ಟ್ರಂಪ್ ಆಡಳಿತವು ಈ ಸುಂಕವನ್ನು ಜಾರಿಗೆ ತಂದರೆ ಐಫೋನ್‌ಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆ ಇದೆ. ಹೊಸ ಸುಂಕ ನೀತಿಯಿಂದ ಮುಂಬರುವ ದಿನಗಳಲ್ಲಿ ಐಫೋನ್‌ಗಳ ಬೆಲೆ $2000 ಮೀರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಿಮ್ಮ ಖಾಸಗಿತನಕ್ಕೆ ಖನ್ನಾ ಇಟ್ಟ Ghibli Art? ಇದನ್ನ ಬಳಸುವ ಮುನ್ನ ನೂರು ಬಾರಿ ಯೋಚಿಸಿ!
ಬೆಲೆಯಲ್ಲಿ ಭಾರೀ ಏರಿಕೆ!
ರಾಯಿಟರ್ಸ್ ಪ್ರಕಾರ, ಐಫೋನ್ 16ರ ಮೂಲ ರೂಪಾಂತರದ ಬೆಲೆ ಪ್ರಸ್ತುತ USನಲ್ಲಿ $799 ಆಗಿದೆ. ಇದರ ಬೆಲೆ 43%ವರೆಗೆ ಹೆಚ್ಚಾಗುವ ಸಾಧ್ಯತೆ ಇದ್ದು, ಇದರ ನಂತರ $1142ಗೆ ಲಭ್ಯವಾಗಬಹುದು. ಅದೇ ಸಮಯದಲ್ಲಿ US ಮಾರುಕಟ್ಟೆಯಲ್ಲಿ iPhone 16 Pro Maxನ ಬೆಲೆ ಪ್ರಸ್ತುತ $1599 ಆಗಿದೆ, ಆದರೆ ಭವಿಷ್ಯದಲ್ಲಿ ಅದರ ಬೆಲೆ $2300ಕ್ಕೆ ಹೆಚ್ಚಾಗಬಹುದು.
ಡೊನಾಲ್ಡ್ ಟ್ರಂಪ್ ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿಯೂ ಚೀನಾದ ಮೇಲೆ ಸುಂಕ ವಿಧಿಸಿದ್ದರು, ಆದರೆ ಆ ಸಮಯದಲ್ಲಿ ಅವರು ಆಪಲ್‌ಗೆ ಪರಿಹಾರ ನೀಡಿದ್ದರು. ಆದರೆ ಈ ಬಾರಿ ಟ್ರಂಪ್ ಸುಂಕ ದೊಡ್ಡ ಮಟ್ಟದ ಹೊಡೆತ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಸುಂಕಗಳು ಜಾರಿಯಾದರೆ ಆಪಲ್ ಐಫೋನ್‌ಗಳ ಬೆಲೆಗಳನ್ನು ಹೆಚ್ಚಿಸಬಹುದು. ಐಫೋನ್‌ಗಳ ಬೆಲೆಯನ್ನು ಹೆಚ್ಚಿಸದಿದ್ದರೆ ಹೊಸ ವೆಚ್ಚವನ್ನು ತಾನೇ ಭರಿಸಬೇಕಾಗುತ್ತದೆ. ಸುಂಕ ಜಾರಿಗೆ ಬಂದ ನಂತರ ಐಫೋನ್ ಉತ್ಪಾದನೆಯ ಒಟ್ಟು ವೆಚ್ಚವು ಶೇ.43ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜಿಯೋದಿಂದ ಅಗ್ಗದ ಬೆಲೆಯ ದೀರ್ಘಾವಧಿ ಪ್ಲಾನ್ ರಿಲೀಸ್: ಕರೆ, SMS, ಡೇಟಾ ಎಲ್ಲವೂ ಲಭ್ಯ
ಚೀನಾ ಮತ್ತು ಭಾರತದಿಂದ ಐಫೋನ್‌ಗಳ ಆರ್ಡರ್
ಆಪಲ್ ಕಂಪನಿಯು ಭಾರತ ಮತ್ತು ಚೀನಾದಲ್ಲಿ ಐಫೋನ್‌ಗಳನ್ನು ತಯಾರಿಸುತ್ತದೆ. ಹೊಸ ಸುಂಕಗಳು ಜಾರಿಯಾಗಿರುವುದರಿಂದ ಅಮೆರಿಕ ತನ್ನ ದೇಶೀಯ ಮಾರುಕಟ್ಟೆಯಲ್ಲೂ ಐಫೋನ್ ಬೆಲೆಗಳನ್ನು ಹೆಚ್ಚಿಸಬೇಕಾಗಬಹುದು. ಹೊಸ ಸುಂಕಗಳನ್ನು ಪರಿಚಯಿಸುವ ಮೊದಲು, ಮಾರ್ಚ್ ತಿಂಗಳಲ್ಲಿ ಚೀನಾ ಮತ್ತು ಭಾರತ ಸೇರಿದಂತೆ ಹಲವಾರು ದೇಶಗಳಿಂದ ಬೃಹತ್ ಪ್ರಮಾಣದ ಐಫೋನ್‌ಗಳನ್ನು ಆಮದು ಮಾಡಿಕೊಳ್ಳುವ ಮೂಲಕ ತಂತ್ರಜ್ಞಾನ ದೈತ್ಯ ಐಫೋನ್ ಸ್ಟಾಕ್ ಅನ್ನು ಹೆಚ್ಚಿಸಿಕೊಂಡಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಐಫೋನ್‌ಗಳ ಬೆಲೆಯನ್ನು ಈಗ ಹೆಚ್ಚಿಸಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









