ಒಂದು ಲಕ್ಷ ಗಡಿ ದಾಟಿದ ಬಂಗಾರದ ಬೆಲೆ ! ನಿಮ್ಮಲ್ಲಿರುವ ಹಳೆಯ ಚಿನ್ನ ಮಾರಿದರೆ ಅಥವಾ ಎಕ್ಸ್ಚೇಂಜ್ ಮಾಡಿದರೆ ಸಿಗುವ ಹಣ ಎಷ್ಟು ? ಹೊಸ ನಿಯಮ ನಿಮಗೂ ತಿಳಿದಿರಲಿ !

Gold Silver Price latest : ಕಳೆದ ಒಂದೆರಡು ದಿನಗಳಲ್ಲಿ ಅಗ್ಗವಾದ ಚಿನ್ನ ಈಗ ಮತ್ತೆ ಮುಗಿಲು ಮುಟ್ಟಿದೆ. ಇಂದಿನ ಬೆಲೆಯ ಪ್ರಕಾರ ಬಂಗಾರದ ಬೆಲೆ ಲಕ್ಷ ಗಡಿ ದಾಟಿದೆ.   

Written by - Ranjitha R K | Last Updated : Apr 28, 2025, 04:32 PM IST
  • ಚಿನ್ನದ ಬೆಲೆಗಳು ನಿರಂತರವಾಗಿ ಹೊಸ ಶಿಖರವನ್ನು ತಲುಪಿವೆ.
  • 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂ.ಗಳ ಆಸುಪಾಸಿಗೆ ತಲುಪಿದೆ.
  • ಹೊಸ ಆಭರಣಗಳನ್ನು ಖರೀದಿಸುವ ಬದಲು ತಮ್ಮ ಹಳೆಯ ಆಭರಣಗಳನ್ನು ಮಾರಾಟ
ಒಂದು ಲಕ್ಷ ಗಡಿ ದಾಟಿದ ಬಂಗಾರದ ಬೆಲೆ ! ನಿಮ್ಮಲ್ಲಿರುವ ಹಳೆಯ ಚಿನ್ನ ಮಾರಿದರೆ ಅಥವಾ ಎಕ್ಸ್ಚೇಂಜ್ ಮಾಡಿದರೆ ಸಿಗುವ ಹಣ ಎಷ್ಟು ? ಹೊಸ ನಿಯಮ ನಿಮಗೂ ತಿಳಿದಿರಲಿ !

Gold Silver Price:  ಚೀನಾ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಟ್ರೇಡ್ ವಾರ್ ಮತ್ತು ಜಾಗತಿಕ ಅನಿಶ್ಚಿತತೆಯ ಮಧ್ಯೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳು ನಿರಂತರವಾಗಿ ಹೊಸ ಶಿಖರವನ್ನು ತಲುಪಿವೆ. 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂ.ಗಳ ಆಸುಪಾಸಿಗೆ ತಲುಪಿದೆ. ಹಾಗಿದ್ದರೆ ನಮ್ಮಲ್ಲಿರುವ ಹಳೆಯ ಚಿನ್ನವನ್ನು ಮಾರಿದರೆ ಅಥವಾ ಎಕ್ಸ್ಚೇಂಜ್ ಮಾಡಿದರೂ ನಮಗೆ ಇದೆ ಹಣ ಸಿಗುವುದೇ ಅಥವಾ ನಮ್ಮ ಕೈ ಸೇರುವ ಮೊತ್ತದಲ್ಲಿ ವ್ಯತ್ಯಾಸವಾಗುವುದೇ ಎನ್ನುವ ಪ್ರಶ್ನೆ ಏಳುತ್ತಿದೆ. 

Add Zee News as a Preferred Source

 ಬಂಗಾರದ ಬೆಲೆ ಗಗನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಅನೇಕ ಜನರು ಹೊಸ ಆಭರಣಗಳನ್ನು ಖರೀದಿಸುವ ಬದಲು ತಮ್ಮ ಹಳೆಯ ಆಭರಣಗಳನ್ನು ಮಾರಾಟ ಮಾಡುವ ಅಥವಾ ವಿನಿಮಯ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ವೇಳೆಯಲ್ಲಿ ಜನರ ಮನಸ್ಸಿನಲ್ಲಿ ಮೂಡುವ ಒಂದೇ ಒಂದು ಪ್ರಶ್ನೆ ಎಂದರೆ ಹಳೆಯ ಮತ್ತು ಹಾಲ್‌ಮಾರ್ಕ್ ಇಲ್ಲದ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆಯೇ? 

ಇದನ್ನೂ ಓದಿ : ಯಾವುದೇ ರೈಡ್‌ ಬುಕ್ ಮಾಡದ ವ್ಯಕ್ತಿಗೆ‌ ₹4,66,000 ಶುಲ್ಕ ವಿಧಿಸಿದ ಉಬರ್;‌ ಇದು ಹೊಸ ರೀತಿಯ ಹಗರಣ!!

ಚಿನ್ನದ ಖರೀದಿಯಲ್ಲಿ ಇಳಿಕೆ : 
ಸಾಮಾನ್ಯವಾಗಿ, ಮದುವೆ ಸೀಸನ್‌ನಲ್ಲಿ ಭಾರತದಲ್ಲಿ ಚಿನ್ನ ಖರೀದಿ ಹೆಚ್ಚು ಇರುತ್ತದೆ. ಆದರೆ ಈ ವರ್ಷ ಹೊಸ ಪ್ರವೃತ್ತಿ ಕಾಣುತ್ತಿದೆ. ಈ ವರ್ಷ ಮದುವೆ ಸೀಸನ್‌ನಲ್ಲಿ ಚಿನ್ನದ ಖರೀದಿಯಲ್ಲಿ ಇಳಿಕೆ ಕಂಡುಬಂದಿದೆ. ಜನರು ಹೊಸ ಆಭರಣಗಳನ್ನು ಖರೀದಿಸುವ ಬದಲು ಹಳೆಯ ಆಭರಣಗಳನ್ನು ಹೊಸ ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಹಣ ಉಳಿತಾಯವಾಗುವುದಲ್ಲದೆ, ಹೊಸ ಖರೀದಿಗಳ ಮೇಲೆ ಮೇಕಿಂಗ್ ಶುಲ್ಕ ಮತ್ತು ಜಿಎಸ್‌ಟಿ ಪಾವತಿಸುವ ಹೊರೆ ಕೂಡಾ ತಪ್ಪುತ್ತದೆ. 

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ ನವೆಂಬರ್‌ನಲ್ಲಿ ಚಿನ್ನದ ಬೆಲೆ ಕುಸಿದಾಗ, ಜನರು ಚಿನ್ನವನ್ನು ಖರೀದಿ ಮಾಡಿದ್ದರು. ಇದೀಗ ಬೆಲೆ ಗಗನಕ್ಕೇರುತ್ತಿರುವಾಗ, ಜನರು ಹೊಸ ಚಿನ್ನವನ್ನು ಖರೀದಿಸುವ ಬದಲು ತಮ್ಮ ಹಳೆಯ ಆಭರಣಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಅಥವಾ ಮಾರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ : ಲಾಭಕ್ಕಾಗಿ ಅಲ್ಲ, ಬದಲಾಗಿ ಸೇವೆಗಾಗಿ ಗುಲಾಬ್ ಶರ್ಬತ್ ಬಿಡುಗಡೆ ಮಾಡಿದ ಪತಂಜಲಿ : ಆರೋಗ್ಯ ಸಂಜೀವಿನಿ ಈ ಪಾನೀಯ

ಹಾಲ್‌ಮಾರ್ಕ್ ಇಲ್ಲದ ಹಳೆಯ ಆಭರಣಗಳನ್ನು ಮಾರಾಟ ಮಾಡಬಹುದೇ? : 
ಪ್ರಸ್ತುತ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಹಾಲ್‌ಮಾರ್ಕಿಂಗ್ ಕಡ್ಡಾಯವಾಗಿದೆ. ಹಾಲ್‌ಮಾರ್ಕ್ ಗುರುತು ಗ್ರಾಹಕರಿಗೆ ಆಭರಣಗಳಲ್ಲಿನ ಚಿನ್ನ ಅಥವಾ ಬೆಳ್ಳಿಯ ಶುದ್ಧತೆಯು ನಿಗದಿತ ಮಾನದಂಡಗಳ ಪ್ರಕಾರವಾಗಿದೆ ಎನ್ನುವ ಭರವಸೆ ನೀಡುತ್ತದೆ. ಹಾಲ್‌ಮಾರ್ಕ್ ಇಲ್ಲದ ಹಳೆಯ ಆಭರಣಗಳನ್ನು ಈಗ ಮಾರಾಟ ಮಾಡಬಹುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿ ಮೂಡುವುದು ಸಹಜ.  

ಇದಕ್ಕೆ ಉತ್ತರ ಹೌದು. ಹಾಲ್‌ಮಾರ್ಕ್ ಇಲ್ಲದಿದ್ದರೂ ಹಳೆಯ ಚಿನ್ನಾಭರಣಗಳನ್ನು ಮಾರಾಟ ಮಾಡಬಹುದು. ಗ್ರಾಹಕರು ತಮ್ಮ ಹಳೆಯ, ಹಾಲ್‌ಮಾರ್ಕ್ ಮಾಡದ ಆಭರಣಗಳನ್ನು ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಬಹುದು ಎಂದು ಬಿಐಎಸ್ ಸ್ಪಷ್ಟಪಡಿಸಿದೆ. ಅಂದರೆ ಹಾಲ್‌ಮಾರ್ಕ್ ಇಲ್ಲದೆ ಆಭರಣಗಳನ್ನು ಮಾರಾಟ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಯಾವುದೇ ನಿಷೇಧವಿಲ್ಲ. ಆಭರಣ ವ್ಯಾಪಾರಿಗಳು ಹಳೆಯ ಮತ್ತು ಹಾಲ್‌ಮಾರ್ಕ್ ಮಾಡದ ಆಭರಣಗಳನ್ನು ಅವುಗಳ ಶುದ್ಧತೆಯನ್ನು ಪರಿಶೀಲಿಸಿದ ನಂತರ ಸ್ವೀಕರಿಸುತ್ತಾರೆ. ಹಾಗಾಗಿ ನಿಮ್ಮಲ್ಲಿರುವ ಚಿನ್ನದ ಶುದ್ದತೆಯನ್ನು ಆಧರಿಸಿ ನಿಮಗೆ ಹಣ ಸಿಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News