PIB Fact Check: ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಸೈಬರ್ ವಂಚಕರು ಹೊಸ ಹೊಸ ರೀತಿಯಲ್ಲಿ ಸಾಮಾನ್ಯ ಜನರನ್ನು ತಮ್ಮ ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ. ವಂಚನೆ ಮಾಡಲು ಸುಲಭವಾದ ಮಾರ್ಗವೆಂದರೆ ಹಣ ಗಳಿಸುವ ಅಥವಾ ಸರ್ಕಾರಿ ಯೋಜನೆಗಳ ಭರವಸೆ ನೀಡಿ ಮುಗ್ಧ ಜನರನ್ನು ಬಲೆಗೆ ಬೀಳಿಸುವುದು. ಈಗ ಹೊಸ ಯೋಜನೆಯ ಬಗ್ಗೆಯೂ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ, ಇದರ ಮೂಲಕ ನಾಗರಿಕರು ದಿನಕ್ಕೆ 10,000 ರೂ.ಗಳವರೆಗೆ ಗಳಿಸಬಹುದು ಎಂದು ಹೇಳಲಾಗುತ್ತಿದೆ. ಪತ್ರಿಕಾ ಮಾಹಿತಿ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಈ ಹೇಳಿಕೆಯನ್ನು ಸುಳ್ಳು ಎಂದು ಘೋಷಿಸಿದ್ದು, ಇದನ್ನು ನಕಲಿ ಎಂದು ಸ್ಪಷ್ಟಪಡಿಸಿದೆ.
ಪಿಐಬಿ ಹೇಳಿದ್ದೇನು?
ಹೊಸ ಸರ್ಕಾರಿ ಯೋಜನೆಯನ್ನು ನೀಡುವುದಾಗಿ ಸುಳ್ಳು ಹೇಳಿಕೊಳ್ಳುತ್ತಿರುವ ನಕಲಿ ವೆಬ್‌ಸೈಟ್ ಬಗ್ಗೆ ಪಿಐಬಿ ಗಂಭೀರ ಎಚ್ಚರಿಕೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಗರಿಕರು ದಿನಕ್ಕೆ 10,000 ರೂ.ಗಳವರೆಗೆ ಸಂಪಾದಿಸಲು ಅನುವು ಮಾಡಿಕೊಡುವ ಯೋಜನೆಯನ್ನು ಪ್ರಾರಂಭಿಸಿದ್ದಾರೆಂದು ಸೈಟ್‌ವೊಂದು ತಿಳಿಸಿದೆ. ಆದರೆ ಪಿಐಬಿ ಫ್ಯಾಕ್ಟ್ ಚೆಕ್ ಪೋಸ್ಟ್ ಪ್ರಕಾರ, ಈ ಮಾಹಿತಿ ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಸಾರ್ವಜನಿಕರನ್ನು ಮೋಸಗೊಳಿಸಲು ಇದನ್ನ ಸೃಷ್ಟಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: EPFO: ಪಿಂಚಣಿದಾರರಿಗೆ ಜಾಕ್ ಪಾಟ್! ಕನಿಷ್ಠ 10ವರ್ಷ ಸೇವೆ ಸಲ್ಲಿಸಿದ್ದವರಿಗೆ ಸಿಗುತ್ತೆ ಈ ಬಂಪರ್ ಲಾಭ
ಸುಳ್ಳು ಮಾಹಿತಿ ಬಗ್ಗೆ ಎಚ್ಚರ!!
"ಪ್ರಧಾನಿ ನರೇಂದ್ರ ಮೋದಿ ಅವರು ದಿನಕ್ಕೆ 10,000 ರೂ.ವರೆಗೆ ಗಳಿಸಬಹುದಾದ ಹೊಸ ಯೋಜನೆಯನ್ನು ಪ್ರಾರಂಭಿಸಿದ ನಂತರ ATMಗಳ ಮುಂದೆ ಉದ್ದನೆಯ ಸರತಿ ಸಾಲಿದೆ ಎಂದು ಸಾಮಾನ್ಯ ಜನರನ್ನು ವಂಚಿಸಲು ನಕಲಿ ವೆಬ್‌ಸೈಟ್ ಹೇಳಿಕೊಂಡಿದೆ. "ಸಾವಿರಾರು ಭಾರತೀಯರು ಈಗಾಗಲೇ ಒಂದು ತಿಂಗಳಲ್ಲಿ 80,000 ರಿಂದ 350,000 ರೂ. ಗಳಿಸಿದ್ದಾರೆ" ಎಂದೂ ಹೇಳಿದೆ. "ಈ ಸಂವೇದನಾಶೀಲ ಶೀರ್ಷಿಕೆಯು ಜನರನ್ನು ತಮ್ಮ ವೈಯಕ್ತಿಕ ಮತ್ತು ಆರ್ಥಿಕ ಮಾಹಿತಿಯನ್ನ ಹಂಚಿಕೊಳ್ಳುವಂತೆ ಆಮಿಷವೊಡ್ಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಇದು ಸಂಪೂರ್ಣವಾಗಿ ಸುಳ್ಳು" ಎಂದು ಹೇಳುವ ಮೂಲಕ ಪಿಐಬಿ ಇಂತಹ ಯಾವುದೇ ಸರ್ಕಾರಿ ಯೋಜನೆಯ ಘೋಷಣೆಯನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ಪಿಐಬಿ ಸತ್ಯ ಪರಿಶೀಲನೆ ಎಚ್ಚರಿಕೆ
🕵️♂️ #Fraudulent_Website_Alert
A #FAKE website is falsely claiming that Prime Minister Narendra Modi has launched a project allowing citizens to earn up to ₹10,000 per day.
📣 The Government of India has NOT made any such announcement.
⚠️ Be cautious! Do NOT… pic.twitter.com/Bf1Q4BhQPb
— PIB Fact Check (@PIBFactCheck) May 15, 2025
ಈ ಹಗರಣದ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಸ್ಪಷ್ಟ ಎಚ್ಚರಿಕೆ ನೀಡಿದೆ. ಅವರು ಈ ಹೇಳಿಕೆಯನ್ನು ನಕಲಿ ಎಂದು ಹೇಳಿದ್ದು, ಇದರ ಬಗ್ಗೆ ಜನಸಾಮಾನ್ಯರು ಜಾಗರೂಕರಾಗಿರಬೇಕು ಎಂದು ಹೇಳಿದೆ. ಇಂತಹ ವೆಬ್‌ಸೈಟ್‌ಗಳಲ್ಲಿ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿ ಹಂಚಿಕೊಳ್ಳುವುದರಿಂದ ಗುರುತಿನ ಕಳ್ಳತನ, ಆರ್ಥಿಕ ನಷ್ಟ ಅಥವಾ ಇತರ ರೀತಿಯ ವಂಚನೆಗೆ ಕಾರಣವಾಗಬಹುದು. ಮಾರ್ಚ್‌ನಲ್ಲಿ ಬ್ರೆಜಿಲ್ ಮತ್ತು ಭಾರತದಲ್ಲಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು 23,000ಕ್ಕೂ ಹೆಚ್ಚು ಫೇಸ್‌ಬುಕ್ ಪುಟಗಳು ಮತ್ತು ಖಾತೆಗಳನ್ನು ತೆಗೆದುಹಾಕುವ ಮೂಲಕ ವಂಚನೆಯ ಚಟುವಟಿಕೆಯ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಫೇಸ್‌ಬುಕ್ ಘೋಷಿಸಿದೆ. ಈ ದೇಶಗಳ ಪ್ರಸಿದ್ಧ ವೈಯಕ್ತಿಕ ಹಣಕಾಸು ಪ್ರಭಾವಿಗಳು, ಕ್ರಿಕೆಟ್ ಆಟಗಾರರು ಮತ್ತು ಬ್ಯುಸಿನೆಸ್‌ಮನ್‌ಗಳಂತೆ ನಟಿಸುವ ಮೂಲಕ ಬಳಕೆದಾರರನ್ನು ವಂಚಿಸಲು ಸ್ಕ್ಯಾಮರ್‌ಗಳು ಡೀಪ್‌ಫೇಕ್‌ಗಳು ಸೇರಿದಂತೆ ವಿವಿಧ ತಂತ್ರಗಳನ್ನು ಬಳಸುತ್ತಿದ್ದರು. ಈ ನಕಲಿ ಖಾತೆಗಳು ಮೋಸದ ಹೂಡಿಕೆ ಅಪ್ಲಿಕೇಶನ್‌ಗಳು ಮತ್ತು ಜೂಜಿನ ವೆಬ್‌ಸೈಟ್‌ಗಳನ್ನು ಬೆಂಬಲಿಸುತ್ತಿದ್ದವು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ