)
ಇತ್ತೀಚೆಗೆ ಟೋಲ್ ತೆರಿಗೆ ಸಂಗ್ರಹಕ್ಕಾಗಿ ವಾರ್ಷಿಕ ಪಾಸ್ ನೀಡಲಾಗಿದೆ. 3000 ರೂ.ಗಳ ವಾರ್ಷಿಕ ಪಾಸ್ಗಳನ್ನು ನೀಡಲಾಗುತ್ತಿದೆ. ಇದೀಗ ಜುಲೈ 15 ರಿಂದ ಹೆದ್ದಾರಿಯಲ್ಲಿ ಹಾದುಹೋಗುವ ದ್ವಿಚಕ್ರ ವಾಹನಗಳು ಸಹ ಟೋಲ್ ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಜುಲೈ 15 ರಿಂದ ದ್ವಿಚಕ್ರ ವಾಹನಗಳ ಮೇಲೆ ಟೋಲ್ ತೆರಿಗೆ ವಿಧಿಸಲು NHAI ನಿರ್ಧರಿಸಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಒಂದು ವೇಳೆ ತಪ್ಪಿದರೆ 2000 ರೂ.ಗಳ ದಂಡ ವಿಧಿಸಬಹುದು.
ದ್ವಿಚಕ್ರ ವಾಹನ ಸವಾರರು ನಿಜವಾಗಿಯೂ ಟೋಲ್ ತೆರಿಗೆ ಪಾವತಿಸಬೇಕೇ? :
ದ್ವಿಚಕ್ರ ವಾಹನಗಳ ಮೇಲೆ ಟೋಲ್ ವಿಧಿಸುವ ವರದಿಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನಿರಾಕರಿಸಿದ್ದಾರೆ. ಅಂಥಹ ಯಾವುದೇ ನಿರ್ಧಾರವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಹೇಳಿದ್ದಾರೆ. ದ್ವಿಚಕ್ರ ವಾಹನಗಳ ಮೇಲೆ ಟೋಲ್ ತೆರಿಗೆ ವಿಧಿಸುವ ಬಗ್ಗೆ ಕೆಲವು ಮಾಧ್ಯಮಗಳು ದಾರಿತಪ್ಪಿಸುವ ಸುದ್ದಿಗಳನ್ನು ಹರಡುತ್ತಿವೆ ಎಂದು ಕೇಂದ್ರ ಸಚಿವರು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ ಬರೆದಿದ್ದಾರೆ. ವಿಚಕ್ರ ವಾಹನಗಳ ಮೇಲಿನ ಟೋಲ್ ಮೇಲೆ ಸಂಪೂರ್ಣ ವಿನಾಯಿತಿ ಮುಂದುವರಿಯುತ್ತದೆ.
ಟೋಲ್ ಟ್ಯಾಕ್ಸ್ ನಿಂದ ವಿನಾಯಿತಿ :
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲಾ ಟೋಲ್ಗಳಲ್ಲಿ ದ್ವಿಚಕ್ರ ವಾಹನಗಳು ಸಹ ತೆರಿಗೆ ಪಾವತಿಸಬೇಕಾಗುತ್ತದೆ ಮತ್ತು ಈ ನಿಯಮ ಜುಲೈ 15 ರಿಂದ ಜಾರಿಗೆ ಬರಲಿದೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿತ್ತು. ಟೋಲ್ ಪಾವತಿಸಲು, ದ್ವಿಚಕ್ರ ವಾಹನಗಳು ಕಾರುಗಳಂತೆ ಫಾಸ್ಟ್ಟ್ಯಾಗ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸುವ ವಾಹನವು 2 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕೇಂದ್ರ ಸಚಿವರು ಸ್ವತಃ ಈ ಸುದ್ದಿಯನ್ನು ನಿರಾಕರಿಸಿದ್ದಾರೆ.
ವಾರ್ಷಿಕ ಫಾಸ್ಟ್ಟ್ಯಾಗ್ನ ಘೋಷಣೆ :
ಇದಕ್ಕೂ ಮೊದಲು, ಕೇಂದ್ರ ಸಚಿವ ನಿತಿನ್ ಗಡ್ಕರಿ ಜೂನ್ 18 ರಂದು ವಾರ್ಷಿಕ ಫಾಸ್ಟ್ಟ್ಯಾಗ್ ಅನ್ನು ಘೋಷಿಸಿದ್ದರು. ಖಾಸಗಿ ಚಾಲಕರ ಮೇಲಿನ ಟೋಲ್ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಈ ಘೋಷಣೆ ಮಾಡಿದೆ. ಆಗಸ್ಟ್ 15, 2025 ರಿಂದ 3,000 ರೂ. ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಮಾನ್ಯವಾಗಿರುತ್ತದೆ.
ಈ ವಾರ್ಷಿಕ ಪಾಸ್ ಫಾಸ್ಟ್ಟ್ಯಾಗ್ ಅನ್ನು ಪದೇ ಪದೇ ರೀಚಾರ್ಜ್ ಮಾಡುವ ತೊಂದರೆಯಿಂದ ಮುಕ್ತಗೊಳಿಸುತ್ತದೆ. ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಕೇಂದ್ರ ಸಚಿವರ ಪ್ರಕಾರ, ಈ ವಾರ್ಷಿಕ ಪಾಸ್ ಅನ್ನು ವಾಣಿಜ್ಯೇತರ ಖಾಸಗಿ ವಾಹನಗಳಿಗೆ (ಕಾರುಗಳು, ಜೀಪ್ಗಳು, ವ್ಯಾನ್ಗಳು ಇತ್ಯಾದಿ) ಮಾತ್ರ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣವನ್ನು ಸಾಧ್ಯವಾಗಿಸುತ್ತದೆ. ವಾರ್ಷಿಕ ಪಾಸ್ ಅನ್ನು ನವೀಕರಿಸಲು ಶೀಘ್ರದಲ್ಲೇ ಹೆದ್ದಾರಿ ಪ್ರಯಾಣ ಅಪ್ಲಿಕೇಶನ್ ಮತ್ತು NHAI / MoRTH ವೆಬ್ಸೈಟ್ಗಳಲ್ಲಿ ಪ್ರತ್ಯೇಕ ಲಿಂಕ್ ಲಭ್ಯವಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ