)
DA Pension Gratuity Retirement Rules Change: ಕೇಂದ್ರ ಸರ್ಕಾರವು ತನ್ನ ನೌಕರರು, ಪಿಂಚಣಿದಾರರ ಅನುಕೂಲಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿದ್ದು ಅವರಿಗೆ ನೀಡಲಾಗುವ ಡಿಎ, ಡಿಆರ್ ನಂತಹ ಭತ್ಯೆಗಳು, ಪಿಂಚಣಿ ಹಾಗೂ ಗ್ರ್ಯಾಚುಟಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇದರಿಂದ ದೇಶಾದ್ಯಂತ ಕೇಂದ್ರ ಸರ್ಕಾರಿ ನೌಕರಿಯಲ್ಲಿರುವ ಲಕ್ಷಾಂತರ ಸರ್ಕಾರಿ ನೌಕರರಿಗೆ ನೇರ ಪ್ರಯೋಜನವಾಗಲಿದೆ.
ಏಕೀಕೃತ ಪಿಂಚಣಿ ವ್ಯವಸ್ಥೆ:
ಮೊದಲಿಗೆ ಈ ವರ್ಷ ಏಪ್ರಿಲ್ನಿಂದ ಹೊಸತಾಗಿ ಜಾರಿಯಾಗಿರುವ ಯುಪಿಎಸ್- ಏಕೀಕೃತ ಪಿಂಚಣಿ ವ್ಯವಸ್ಥೆ, ಒಪಿಎಸ್ (ಹಳೆಯ ಪಿಂಚಣಿ ಯೋಜನೆ) ಹಾಗೂ ಎನ್ಪಿಎಸ್ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ನ ಪ್ರಮುಖ ಅಂಶಗಳ ಸಮಾಗಮವಾಗಿದೆ. ಯುಪಿಎಸ್ ಯೋಜನೆಯಲ್ಲಿ 25 ವರ್ಷ ಸೇವಾವಧಿ ಪೂರ್ಣಗೊಳಿಸಿರುವ ನೌಕರರಿಗೆ 12 ತಿಂಗಳ ಮೂಲವೇತನದ 50% ಪಿಂಚಣಿಯ ಭರವನೆ ನೀಡುತ್ತದೆ. ಅಷ್ಟೇ ಅಲ್ಲ, ಕನಿಷ್ಠ 10ವರ್ಷಗಳ ಕಾಲ ದುಡಿದು ಅನಿವಾರ್ಯ ಕಾರಣಗಳಿಂದ ನಿವೃತ್ತರಾಗುವ ಅಥವಾ ಕೆಲಸ ಬಿಡುವ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಮಾಸಿಕ 10,000ರೂ.ಗಳ ಪಿಂಚಣಿ ಭರವಸೆಯನ್ನು ನೀಡುತ್ತದೆ.
ಡಿಎ, ಡಿಆರ್ 58% ಏರಿಕೆ:
ಕೇಂದ್ರ ಸರ್ಕಾರವು 2025ರಲ್ಲಿ ಎರಡು ಬಾರಿ ನೌಕರರ ಡಿಎ, ಡಿಆರ್ ಭಟ್ಯೇಗಳಲ್ಲಿ ಭಾರೀ ಹೆಚ್ಚಳವನ್ನು ಘೋಷಿಸಿದೆ. ಮೊದಲಿಗೆ ಜನವರಿ-ಜೂನ್ ಅವಧಿಯಲ್ಲಿ 2% ಭತ್ಯೆ ಹೆಚ್ಚಿಸಿದ್ದ ಸರ್ಕಾರ ಬಳಿಕ ಜುಲೈ-ಡಿಸೆಂಬರ್ ಅವಧಿಯ ಭತ್ಯೆಗಳನ್ನೂ 3% ಏರಿಸಿದೆ. ಇದರಿಂದ ಪ್ರಸ್ತುತ ಡಿಎ ದರ ಶೇ. 58ಕ್ಕೆ ತಲುಪಿದೆ. ಇದು ಕೇಂದ್ರ ಸರ್ಕಾರಿ ನೌಕರರ, ಪಿಂಚಣಿದಾರರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.
ವಸ್ತ್ರ ಭತ್ಯೆ ಅನುಪಾತಿಕ ವಿತರಣೆ:
ಈ ಮೊದಲು ವಸ್ತ್ರ ಭತ್ಯೆಯನ್ನು ವರ್ಷಕ್ಕೆ ಒಮ್ಮೆ ನೀಡುತ್ತಿದ್ದ ಸರ್ಕಾರ, ಇದೀಗ 2025ರಲ್ಲಿ ಸರ್ಕಾರಿ ನೌಕರರ ಡ್ರೆಸ್ ಭತ್ಯೆಗೆ ಸಂಬಂಧಿಸಿದಂತೆ ನಿಯಮ ಬದಲಾಯಿಸಿದೆ. ಇದೀಗ, ವಸ್ತ್ರ ಭತ್ಯೆಯನ್ನು ಅನುಪಾತಿಕ ಆಧಾರದ ಮೇಲೆ ವಿತರಿಸಲಾಗುತ್ತದೆ. ಉದ್ಯೋಗಿಯು ವರ್ಷದಲ್ಲಿ ಎಷ್ಟು ತಿಂಗಳು ಸೇವೆ ಸಲ್ಲಿಸುತ್ತಾರೋ ಅದನ್ನೇ ಅನುಗುಣವಾಗಿ ಭತ್ಯೆಯನ್ನು ಲೆಕ್ಕ ಹಾಕಲಾಗುತ್ತದೆ. ಇದು ಹೊಸದಾಗಿ ಕೆಲಸಕ್ಕೆ ಸೇರುವ ನೌಕರರು ಹಾಗೂ ನಿವೃತ್ತರಾಗುವ ನೌಕರರ ಮೇಲೆ ನೇರ ಪರಿಣಾಮ ಬೀರುತ್ತದೆ.
ಗ್ರಾಚ್ಯುಟಿ ನಿಯಮ ಬದಲಾವಣೆ:
ಎಪ್ರಿಲ್ 2025ರಿಂದ ಹೊಸತಾಗಿ ಜಾರಿಯಾಗಿರುವ ಯುಪಿಎಸ್ ಎಂದರೆ ಏಕೀಕೃತ ಪಿಂಚಣಿ ವ್ಯವಸ್ಥೆಯ ಅಧಿಯಲ್ಲಿ ಇದೀಗ ಗ್ರಾಚ್ಯುಟಿ ಹಾಗೂ ಇತರ ಮೊತ್ತ ಪಾವತಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ. ಎನ್ಪಿಎಸ್ ವ್ಯವಸ್ಥೆಯಲ್ಲಿ ನೌಕರರು ಕಡಿಮೆ ಮೊತ್ತದ ಗ್ರಾಚ್ಯುಟಿಯನ್ನು ಪಡೆಯುತ್ತಿದ್ದರು. ಆದರೆ, ಇದೀಗ ಯುಪಿಎಸ್ ಜಾರಿಯಿಂದಾಗಿ ನೌಕರರಿಗೆ ನಿವೃತ್ತಿಯಾ ಸಮಯದಲ್ಲಿ ಭಾರೀ ಪ್ರಮಾಣದ ಮೊತ್ತ ಕೈ ಸೇರುವ ಭರವಸೆಯನ್ನು ನೀಡುತ್ತದೆ. ಇದು ನೌಕರರ ನಿವೃತ್ತಿ ನಂತರದ ಆರ್ಥಿಕ ಯೋಜನೆಗಳಿಗೆ ಬಲ ಒದಗಿಸುತ್ತದೆ.
ನಿವೃತ್ತಿ ದಿನವೇ ಸಿಗಳಿಗೆ ಪಿಂಚಣಿ, ಗ್ರಾಚ್ಯುಟಿ:
ಈ ಹಿಂದೆ ನೌಕರರು ನಿವೃತ್ತಿ ಹೊಂದಿದ ಬಳಿಕ ಅವರ ಪಿಂಚಣಿ ಪಾವತಿ ಆದೇಶಕ್ಕಾಗಿ ತಿಂಗಳುಗಟ್ಟಲೆ ಕಾಯಬೇಕಿದ್ದ ಪಿಂಚಣಿದಾರರ ಜೀವನವನ್ನು ಸುಧಾರಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಹೊಸ ನಿಯಮಾನುಸಾರ ಯಾವುದೇ ನೌಕರರು ನಿವೃತ್ತಿ ಹೊಂದುವ 12 ರಿಂದ 15ತಿಂಗಳುಗಳ ಮೊದಲೇ ಅವರ ಫೈಲ್ ಸಿದ್ದಪಡಿಸುವಂತೆ ಆದೇಶಿಸಲಾಗಿದ್ದು, ಇದರಿಂದಾಗಿ ನೌಕರರು ನಿವೃತ್ತಿ ಹೊಂದುವ ದಿನವೇ ಪಿಂಚಣಿ, ಗ್ರಾಚ್ಯುಟಿ, ಪಿಎಫ್ ಹಾಗೂ ನಿವೃತ್ತಿಯ ನಂತರ ಸಿಗಬೇಕಿದ್ದ ಎಲ್ಲ ಪ್ರಯೋಜನಗಳನ್ನು ದೊರೆಯುವಂತೆ ಮಾಡಲಾಗಿದೆ.