)
Samantha Ruth Prabhu: ಸ್ಟಾರ್ ನಟಿ ಸಮಂತಾ, ತಮ್ಮ ವಿಶಿಷ್ಟ ಆಕರ್ಷಣೆ ಮತ್ತು ಶೈಲಿಯಿಂದ ಜೋಯಲ್ಲೂಕಾಸ್ನ ಶಾಶ್ವತ ವಿನ್ಯಾಸಗಳು ಹಾಗೂ ಅದ್ಭುತ ಕರಕುಶಲ ಪರಂಪರೆಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರತಿನಿಧಿಸಲಿದ್ದಾರೆ. ಈ ಹೊಸ ಸಹಭಾಗಿತ್ವವು ಪರಿಪೂರ್ಣತೆ, ನಂಬಿಕೆ ಮತ್ತು ಶ್ರೇಷ್ಟತೆಯ ಮೌಲ್ಯಗಳನ್ನು ಹಂಚಿಕೊಂಡಿರುವ ಎರಡು ಐಕಾನ್ಗಳನ್ನು ಒಂದೇ ವೇದಿಕೆಯಲ್ಲಿ ತರಲಿದೆ. ಸಮಂತಾ ಅವರ ವಿನಯಶೀಲತೆ ಮತ್ತು ಆಕರ್ಷಕ ವ್ಯಕ್ತಿತ್ವ, ಕಳೆದ ಮೂರು ದಶಕಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಗ್ರಾಹಕರ ಮನ ಗೆದ್ದಿರುವ ಜೋಯಲ್ಲೂಕಾಸ್ನ ನಿಷ್ಠೆ ಮತ್ತು ಕಲಾತ್ಮಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
ಈ ಕುರಿತು ಜೋಯಲ್ಲೂಕಾಸ್ ಗ್ರೂಪ್ನ ಅಧ್ಯಕ್ಷ ಡಾ. ಜಾಯ್ ಅಲೂಕಾಸ್ ಮಾತನಾಡಿ, “ಸಮಂತಾ ನವಯುಗದ ಆತ್ಮವಿಶ್ವಾಸಿ ಮಹಿಳೆಯ ಪ್ರತೀಕ, ಶೈಲಿಶೀಲ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ನಟಿ. ಅವರ ವ್ಯಕ್ತಿತ್ವ ನಮ್ಮ ಬ್ರ್ಯಾಂಡ್ನ ತತ್ವಗಳಾದ ‘ಜೀವನದ ಅಮೂಲ್ಯ ಕ್ಷಣಗಳನ್ನು ಆಭರಣಗಳೊಂದಿಗೆ ಸಂಭ್ರಮಿಸುವುದು’ ಎಂಬ ಅರ್ಥದೊಂದಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ನಾವು ಸಮಂತಾ ಅವರನ್ನು ಜೋಯಲ್ಲೂಕಾಸ್ ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ.” ಎಂದರು..
ಅದರಂತೆ ಸಮಂತಾ ರೂತ್ ಪ್ರಭು ಕೂಡ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದು, “ಆಭರಣಗಳು ಯಾವಾಗಲೂ ನನ್ನ ವ್ಯಕ್ತಿತ್ವದ ಪ್ರತಿಬಿಂಬ ಮಾತ್ರವಲ್ಲದೇ, ಭಾವನೆ, ಸಂಭ್ರಮ ಮತ್ತು ಶಕ್ತಿ.. ಜೋಯಲ್ಲೂಕಾಸ್ ಈ ಎಲ್ಲ ಅಂಶಗಳನ್ನು ಅಚ್ಚುಕಟ್ಟಾಗಿ ಪ್ರತಿನಿಧಿಸುತ್ತದೆ. ಮಹಿಳೆಯರು ತಮ್ಮ ಒಳಗಿನ ಆತ್ಮವಿಶ್ವಾಸದಿಂದ ಕಂಗೊಳಿಸಬೇಕು ಎಂಬ ಸಂದೇಶ ನೀಡುವ ಬ್ರ್ಯಾಂಡ್ನ ಭಾಗವಾಗಿರುವುದು ನನಗೆ ಸಂತೋಷ ತಂದಿದೆ.” ಎಂದಿದ್ದಾರೆ..
ಇನ್ನು ಶೀಘ್ರದಲ್ಲೇ ಈ ಸಹಭಾಗಿತ್ವವನ್ನು ಜಾಗತಿಕ ಅಭಿಯಾನದ ಮೂಲಕ ಪ್ರಚಾರ ಮಾಡಲಾಗುವುದು. ಸಮಂತಾ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಜೋಯಲ್ಲೂಕಾಸ್ನ ಶ್ರೀಮಂತ ವಿನ್ಯಾಸ ಪರಂಪರೆಯನ್ನು ಪ್ರತಿನಿಧಿಸಲಿದ್ದಾರೆ. ಇದರೊಂದಿಗೆ ಜೋಯಲ್ಲೂಕಾಸ್ ಬ್ರ್ಯಾಂಡ್ ಈಗ ಸಮಂತಾ ರೂತ್ ಪ್ರಭು ಮತ್ತು ಬಾಲಿವುಡ್ ನಟಿ ಕಾಜೋಲ್ ಸೇರಿದಂತೆ ಇಬ್ಬರು ಗ್ಲೋಬಲ್ ಐಕಾನ್ಗಳ ಮೂಲಕ ವಿಶ್ವದಾದ್ಯಂತ ತನ್ನ ಬ್ರ್ಯಾಂಡ್ ಪ್ರತಿಷ್ಠೆಯನ್ನು ಮತ್ತಷ್ಟು ಬಲಪಡಿಸಲು ಸಜ್ಜಾಗಿದೆ.