ತೆರಿಗೆ ಪಾವತಿದಾರರಿಗೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕೆಲವು ಅನುಕೂಲಗಳಿವೆ. ಕೆಲವು ಖರ್ಚುಗಳಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಕೆಲಸಕ್ಕಾಗಿ ಬಳಸುವ ಫೋನ್ ಬಿಲ್‌ಗೆ ತೆರಿಗೆ ಕಡಿತ ಸೇರಿದಂತೆ ಅನೇಕ ಲಾಭಗಳನ್ನು ಪಡೆಯಬಹುದು.
ವಿಶೇಷ ಚೇತನರಿಗೆ ಪ್ರತಿ ತಿಂಗಳು 3,200 ರೂಪಾಯಿವರೆಗೆ ತೆರಿಗೆ ವಿನಾಯಿತಿ ಲಾಭ ಸಿಗುತ್ತದೆ. ಅಂದರೆ ವಿಶೇಷ ಚೇತನರು ವರ್ಷಕ್ಕೆ 38,400 ರೂಪಾಯಿ ತೆರಿಗೆ ವಿನಾಯಿತಿ ಪಡೆಯಬಹುದು. ಕಣ್ಣು ಕಾಣದ, ಕಿವಿ ಕೇಳದ, ಮಾತನಾಡಲು ಕಷ್ಟಪಡುವ, ಅಥವಾ ಕಾಲುಗಳಲ್ಲಿ ಅಂಗವೈಕಲ್ಯ ಇರುವವರಿಗೆ ಸಾರಿಗೆ ಭತ್ಯೆಗೆ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ.
ಕೆಲಸದ ಸಲುವಾಗಿ ಮಾಡುವ ಪ್ರಯಾಣಗಳಿಗಾಗಿಯೂ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. ಸಾಗಣೆ ಮರುಪಾವತಿ ಎಂಬ ಭತ್ಯೆಯ ಲಾಭವನ್ನು ತೆರಿಗೆ ಪಾವತಿದಾರರಿಗೆ ನೀಡಲಾಗುತ್ತದೆ. ಕೆಲವು ಕಂಪನಿಗಳು ಉದ್ಯೋಗಿಗಳಿಗೆ ಕಾರು ನೀಡುತ್ತವೆ. ಹೀಗೆ ಕೊಡುವ ಕಾರಿನ ಬಾಡಿಗೆಯನ್ನು ಉದ್ಯೋಗಿಗಳ ಸಂಬಳದ ಒಂದು ಭಾಗ ಎಂದೇ ಪರಿಗಣಿಸಲಾಗುವುದು. ಇದರ ಮೇಲಿನ ತೆರಿಗೆ ಹೊರೆ ಕಡಿಮೆ ಇರುವುದು.
ಇದನ್ನೂ ಓದಿ: ಕನ್ನಡದ ಜನಪ್ರಿಯ ನಟಿ ಬಂಧನ.. ಚಿನ್ನ ಕಳ್ಳ ಸಾಗಣೆ ಆರೋಪದಡಿ ಅರೆಸ್ಟ್!
ಮೊಬೈಲ್ ಮರುಪಾವತಿ, ಸಾರಿಗೆ ಮರುಪಾವತಿ, ಸಾಗಣೆ ಮರುಪಾವತಿ, NPS ಹೂಡಿಕೆಗಳು, ಮತ್ತು EPF ಹೂಡಿಕೆಗಳು ಇದೆಲ್ಲವನ್ನೂ ನಿಮ್ಮ ಸಂಬಳ ರಚನೆಯಲ್ಲಿ ಸೇರಿಸಿ. ಇದರಿಂದ ನಿಮ್ಮ ತೆರಿಗೆ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಹೊಸ ತೆರಿಗೆ ಪದ್ಧತಿಯಲ್ಲಿ ಏನಿದೆ?
ಸ್ಟ್ಯಾಂಡರ್ಡ್ ಡಿಡಕ್ಷನ್: 75,000 ರೂಪಾಯಿ ಕುಟುಂಬ ಪಿಂಚಣಿ - 25,000 ರೂಪಾಯಿ, NPS (ಕಂಪನಿಯಿಂದ 14% ಕೊಡುಗೆ), EPF (ಕಂಪನಿಯಿಂದ 12% ಕೊಡುಗೆ) ಇದು ಹೊಸ ತೆರಿಗೆ ಪದ್ಧತಿಯಲ್ಲಿದೆ.
2025-26ನೇ ಸಾಲಿನ ತೆರಿಗೆ ದರ :
,00,000 ರೂಪಾಯಿವರೆಗೆ: ತೆರಿಗೆ ಇಲ್ಲ
4,00,001 - 8,00,000 ರೂಪಾಯಿ: 5%
8,00,001 - 12,00,000 ರೂಪಾಯಿ: 10%
12,00,001 - 16,00,000 ರೂಪಾಯಿ: 15%
16,00,001 - 20,00,000 ರೂಪಾಯಿ: 20%
20,00,001 - 24,00,000 ರೂಪಾಯಿ: 25%
24,00,000 ರೂಪಾಯಿಗಿಂತ ಹೆಚ್ಚು: 30%
ಈ ರೀತಿ ಸರಿಯಾದ ವೇತನ ರಚನೆ ಮತ್ತು ತೆರಿಗೆ ಯೋಜನೆಯನು ನೀವು ರೂಪಿಸಿಕೊಂಡಿದ್ದೇ ಆದಲ್ಲಿ ಸಂಪೂರ್ಣ ಸಂಬಳ ತೆರಿಗೆ ಮುಕ್ತ ಮಾಡಿಕೊಳ್ಳಬಹುದಾಗಿದೆ.
13 ಲಕ್ಷ ರೂಪಾಯಿ ಆದಾಯ ಇರುವವರು ಈಗ 12 ಲಕ್ಷ ರೂಪಾಯಿ ಆದಾಯದ ಮಿತಿಗಿಂತ ಹೆಚ್ಚಿನ ಆದಾಯ ತೆರಿಗೆ ಉಳಿಸಬಹುದಾಗಿದೆ. 75,000 ರೂಪಾಯಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ಸುಮಾರು 30,000 ರೂಪಾಯಿ ಕನಿಷ್ಠ ಪರಿಹಾರ ಸೇರಿಸಬಹುದಾಗಿದೆ.
ಈ ಹಿಂದೆ ಎರಡೂ ಪದ್ಧತಿಗಳಲ್ಲಿ 15 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಇರುವವರರು 30% ತೆರಿಗೆ ಕಟ್ಟಬೇಕಿತ್ತು. 20 ಲಕ್ಷ ರೂಪಾಯಿಗಳಿಂದ 24 ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸುವವರಿಗೆ 25% ರಷ್ಟು ತೆರಿಗೆ ಕಟ್ಟಬೇಕಿತ್ತು. ಈಗ ಈ ಪದ್ಧತಿಯನ್ನು ಬದಲಿಸಲಾಗಿದೆ.
ಇದನ್ನೂ ಓದಿ: ಶೀಘ್ರದಲ್ಲೇ ನಟ ಧನುಷ್ ಎರಡನೇ ಮದುವೆ?! ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಕಾಲಿವುಡ್ ಸ್ಟಾರ್..
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









