)
ನಂದಿನಿ ಉತ್ಪನ್ನ ಬಳಕೆದಾರರಿಗೆ ಇಂದು ಸಿಹಿ ಸುದ್ದಿ ಸಿಗಲಿದೆ. ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ್ದ ಸಾಮಾನ್ಯ ಜನತೆಗೆ ಇಂದು ಒಳ್ಳೆಯ ಸುದ್ದಿ ಸಿಗಲಿದೆ. ಇಂದು KMF ಎಂಡಿ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದೆ.
ಆಹಾರ ಉತ್ಪನ್ನಗಳ ಬೆಲೆ ಇಳಿಕೆ ಬಗ್ಗೆ ಈ ಸಭೆ ನಡೆಯಲಿದೆ. ಪರಿಷ್ಕೃತ ದರ ಸೋಮವಾರದಿಂದಲೇ ಜಾರಿಯಾಗಲಿದೆ.
ಆಹಾರ ಉತ್ಪನ್ನಗಳ ಮೇಲಿನ GST ಇಳಿಕೆ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳ ದರ ಇಳಿಕೆ ಬಗ್ಗೆ ಇಂದು ಸಭೆ ನಡೆಯಲಿದೆ. 11 ಗಂಟೆಗೆ KMF ಎಂಡಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. 12% ರಿಂದ 5%ಕ್ಕೆ ಜಿಎಸ್ಟಿ ಇಳಿಕೆ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳ ದರ ಇಳಿಕೆ ಬಗ್ಗೆ ಸಭೆ ನಡೆಯಲಿದೆ.
ಈ ಸಭೆಯ ಬಳಿಕ ನಂದಿನಿ ಉತ್ಪನ್ನಗಳ ದರ ಇಳಿಕೆಯಾಗಲಿದೆ ಎನ್ನಲಾಗಿದೆ.
ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಬೆಲೆ ಇಳಿಕೆಯಾಗಲಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಬೆಲೆ ಇಳಿಕೆಯಾಗುವುದು ಖಚಿತವಾಗಿದೆ. ಲೆಕ್ಕಾಚಾರದ ಪ್ರಕಾರ ಮೊಸರಿನ ದರ ಲೀಟರ್ಗೆ 4ರವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ.
ಎಲ್ಲಾ ನಂದಿನಿ ಉತ್ಪನ್ನಗಳ ದರ ಶೇ.7ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೆ ಸೂಚನೆ ಕೂಡಾ ನೀಡಲಾಗಿದೆ.