ಬೆಂಗಳೂರು : ಪ್ರತಿದಿನ ಬೆಳಿಗ್ಗೆ, ಗ್ರಾಮೀಣ ಭಾರತದ ರೈತರು ಹೊಸ ಭರವಸೆಯೊಂದಿಗೆ ಹೊಲಗಳಿಗೆ ಹೋಗುತ್ತಾರೆ. ಆದರೆ ಇಂದಿನ ಕಾಲದಲ್ಲಿ, ರಾಸಾಯನಿಕ ಕೃಷಿ ರೈತರ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸಿದೆ. ಮಣ್ಣು ಮೊದಲಿನಂತೆ ಫಲವತ್ತಾಗಿಲ್ಲ, ಬೆಳೆಗಳು ದುರ್ಬಲವಾಗಲು ಪ್ರಾರಂಭಿಸಿವೆ. ಆರ್ಥಿಕ ಬಿಕ್ಕಟ್ಟು ರೈತರನ್ನು ಕಾಡುತ್ತಿದೆ. ಈ ಹೊತ್ತಿನಲ್ಲಿ ಪತಂಜಲಿ ರೈತರಿಗೆ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಮೂಲಕ, ಇದು ಮಣ್ಣನ್ನು ಪುನರುಜ್ಜೀವನಗೊಳಿಸುವುದಲ್ಲದೆ, ರೈತರ ಜೀವನವನ್ನು ಬದಲಾಯಿಸುತ್ತಿದೆ. ಈಗ ರೈತರು ಹೊಲಗಳಲ್ಲಿ ಶ್ರಮಿಸುವುದಷ್ಟೇ ಅಲ್ಲ, ಸಮೃದ್ಧ ನಾಳೆಯತ್ತ ಹೆಜ್ಜೆ ಇಡುವುದಕ್ಕೆ ಸಾಧ್ಯವಾಗುತ್ತಿದೆ.
ಪತಂಜಲಿ ಸಾವಯವ ಕೃಷಿಯು ಮಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿ ಮತ್ತು ರೈತರನ್ನು ಸಬಲೀಕರಣಗೊಳಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಿದೆ ಎನ್ನುವ ಅಂಶ ಗಮನಾರ್ಹವಾಗಿದೆ.
ಇದನ್ನೂ ಓದಿ : ಖಾಸಗಿ ವಲಯದ ಉದ್ಯೋಗಿಗಳಿಗೆ ಜಾಕ್‌ಪಾಟ್:ಪಿಂಚಣಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ
ಪತಂಜಲಿ ಸಾವಯವ ಕೃಷಿಯ ಉದ್ದೇಶ :
ಪತಂಜಲಿ ಸಾವಯವ ಕೃಷಿಯ ಮುಖ್ಯ ಉದ್ದೇಶ ರಾಸಾಯನಿಕ ಕೃಷಿಯ ಹಾನಿಯನ್ನು ಕಡಿಮೆ ಮಾಡುವುದು ಮತ್ತು ನೈಸರ್ಗಿಕ ವಿಧಾನಗಳ ಮೂಲಕ ಕೃಷಿಯನ್ನು ಉತ್ತೇಜಿಸುವುದು. ಈ ಮೂಲಕ ಮಣ್ಣಿನ ಫಲವತ್ತತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವತ್ತ ಗಮನಹರಿಸುತ್ತದೆ. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ದೀರ್ಘಕಾಲೀನ ಮತ್ತು ಅತಿಯಾದ ಬಳಕೆಯು ಮಣ್ಣಿನ ಬಲವನ್ನು ಕಡಿಮೆ ಮಾಡಿದೆ. ಇದರ ಪರಿಣಾಮವಾಗಿ ಇಳುವರಿ ಕಡಿಮೆಯಾಗುವುದರ ಜೊತೆಗೆ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಸಂಶೋಧನಾ ಆಧಾರಿತ ವರದಿಗಳು ತೋರಿಸುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು, ಪತಂಜಲಿ ಸಾವಯವ ಕೃಷಿಯನ್ನು ಆಶ್ರಯಿಸಿದೆ. ಇದು ಮಣ್ಣು ಮತ್ತು ರೈತರಿಬ್ಬರಿಗೂ ಪ್ರಯೋಜನಕಾರಿಯಾಗಿದೆ.
ರೈತರಿಗೆ ಸೂಕ್ತ ತರಬೇತಿ :
ರೈತರ ಪ್ರಗತಿಗಾಗಿ ಪತಂಜಲಿ ಮಾಡುತ್ತಿರುವ ದೊಡ್ಡ ಕೆಲಸವೆಂದರೆ ಅವರಿಗೆ ಸರಿಯಾದ ತರಬೇತಿ ನೀಡುವುದು. ಪತಂಜಲಿಯ 'ಕಿಸಾನ್ ಸಮೃದ್ಧಿ ಕಾರ್ಯಕ್ರಮ' ರೈತರಿಗೆ ಸಾವಯವ ಕೃಷಿಯ ಸುಲಭ ಮತ್ತು ಲಾಭದಾಯಕ ವಿಧಾನಗಳನ್ನು ಕಲಿಸುತ್ತದೆ. ಇದರಿಂದ ರೈತರು ಕಡಿಮೆ ರಾಸಾಯನಿಕಗಳನ್ನು ಬಳಸುವಂತಾಗುತ್ತದೆ. ಈ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚುವುದರೊಂದಿಗೆ ಬೆಳೆಗಳು ಸಹ ಆರೋಗ್ಯಕರ ಮತ್ತು ಉತ್ತಮವಾಗುತ್ತವೆ. ಇದರೊಂದಿಗೆ, ಪತಂಜಲಿ ರೈತರಿಗೆ ನೀರನ್ನು ಉಳಿಸುವ ಮಾರ್ಗಗಳು ಮತ್ತು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾದ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದು ಕೃಷಿಯನ್ನು ಸುಧಾರಿಸುವುದಲ್ಲದೆ ಪರಿಸರವನ್ನು ರಕ್ಷಿಸುತ್ತದೆ ಮತ್ತು ರೈತರಿಗೆ ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ : ಮನೆಯಲ್ಲಿ ದಾಖಲೆಗಳಿಲ್ಲದೆ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು? ಐಟಿ ಇಲಾಖೆ ನೀಡಿರುವ ಮಿತಿ ಎಷ್ಟು?
ರೈತರ ಆದಾಯ ಹೆಚ್ಚಿಸುವುದು :
ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಪತಂಜಲಿ ಪ್ರಾಮಾಣಿಕ ಮತ್ತು ಸರಿಯಾದ ವ್ಯವಹಾರ ವಿಧಾನಗಳನ್ನು ಅಳವಡಿಸಿಕೊಳ್ಳುತ್ತದೆ. ರೈತರಿಗೆ ತಮ್ಮ ಸಾವಯವ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವುದನ್ನು ಖಚಿತಪಡಿಸುತ್ತದೆ. ಇದರಿಂದ ರೈತರ ಆದಾಯ ಹೆಚ್ಚಾಗುತ್ತದೆ. ಕಂಪನಿಯು ರೈತರಿಗೆ ಉತ್ತಮ ಬೀಜಗಳು, ಸಾವಯವ ಗೊಬ್ಬರಗಳು ಮತ್ತು ನೈಸರ್ಗಿಕ ಕೀಟನಾಶಕಗಳನ್ನು ಸಹ ಒದಗಿಸುತ್ತದೆ. ಇದರಿಂದಾಗಿ ಅವರ ಬೆಳೆಗಳು ಉತ್ತಮವಾಗಿರುತ್ತವೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ. ಇದಲ್ಲದೆ, ಪತಂಜಲಿ ರೈತರಿಗೆ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಂಪರ್ಕ ಕಲ್ಪಿಸುತ್ತಿದೆ. ಇದರಿಂದಾಗಿ ಅವರು ಹೊಸ ಮಾರುಕಟ್ಟೆಗಳ ಬಗ್ಗೆ ಮಾಹಿತಿಯನ್ನು ನಿರಂತರವಾಗಿ ಪಡೆಯುವುದು ಸಾಧ್ಯವಾಗುತ್ತದೆ.
ಇದಲ್ಲದೆ, ಪತಂಜಲಿ ಗುತ್ತಿಗೆ ಕೃಷಿಯನ್ನು (contract farming)ಮಾಡುತ್ತದೆ. ಇದರಲ್ಲಿ ರೈತರು ಅಲೋವೆರಾ, ತುಳಸಿ ಮತ್ತು ದುಂಡು ಮಲ್ಲಿಗೆಯಂತಹ ವಿಶೇಷ ಬೆಳೆಗಳನ್ನು ಬೆಳೆಯಬಹುದು. ಈ ಬೆಳೆಗಳನ್ನು ಪತಂಜಲಿ ಖರೀದಿಸುವ ಮೂಲಕ ರೈತರ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆಯನ್ನು ಒದಗಿಸುತ್ತದೆ. ಇದೆಲ್ಲದರ ಮೂಲಕ ರೈತರು ಆರ್ಥಿಕ ಸ್ಥಿರತೆಯನ್ನು ಪಡೆಯುತ್ತಾರೆ. ರಾಸಾಯನಿಕ ಕೃಷಿಯ ಅಪಾಯಗಳನ್ನು ತಪ್ಪಿಸುತ್ತಾರೆ. ಸಾವಯವ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಅವರು ತಮ್ಮ ಕುಟುಂಬಗಳಿಗೆ ಉತ್ತಮ ಜೀವನವನ್ನು ಒದಗಿಸಲು ಸಾಧ್ಯವಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









