LPG Price Drop: ದೇಶೀಯ ತೈಲ ಕಂಪನಿಗಳು ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 51.50ರೂ. ಇಳಿಕೆ ಮಾಡಿದ್ದು ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿವೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಸಿಲಿಂಡರ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

LPG Cylinder Price: ತಿಂಗಳ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಿದ್ದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ (Commercial LPG Cylinder Price) ಬರೋಬ್ಬರಿ 51.50ರೂ. ಇಳಿಕೆ ಮಾಡಿವೆ. ಇಂಡಿಯನ್, ಎಚ್ಪಿ, ಭಾರತ್ ಗ್ಯಾಸ್ ನ ಪರಿಷ್ಕೃತ ದರಗಳು ಇಂದಿನಿಂದಲೇ (ಸೆಪ್ಟೆಂಬರ್ 1) ರಿಂದ ಜಾರಿಯಾಗಲಿವೆ.
ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 51.50 ರೂ. ಇಳಿಕೆ:
ಸೆಪ್ಟೆಂಬರ್ ಮೊದಲ ದಿನವೇ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 51.50 ರೂ. ಇಳಿಕೆ ಆಗಿರುವುದರಿಂದ ಪರಿಷ್ಕೃತ ಬೆಲೆ ಪ್ರತಿ ಸಿಲಿಂಡರ್ಗೆ (LPG Cylinder) 1,580 ರೂ. ಆಗಲಿದೆ. ಇದರಿಂದಾಗಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಆಹಾರೋದ್ಯಮಗಳಿಗೆ ಕೊಂಚ ಪರಿಹಾರ ದೊರೆತಂತಾಗಿದೆ. ಆದಾಗ್ಯೂ, ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಪ್ರಸ್ತುತ ಬೆಂಗಳೂರಿನಲ್ಲಿ ಯಾವ ಸಿಲಿಂಡರ್ ಬೆಲೆ ಎಷ್ಟಿದೆ?
ಪ್ರಸ್ತುತ ಬೆಂಗಳೂರಿನಲ್ಲಿ ಯಾವ ಸಿಲಿಂಡರ್ ಬೆಲೆ ಎಷ್ಟಿದೆ ಎಂದು ನೋಡುವುದಾದರೆ...
>> ಬೆಂಗಳೂರಿನಲ್ಲಿ ವಾಣಿಜ್ಯ ಬಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಈ 51.50 ರೂ. ಇಳಿಕೆ ಆಗಿ 1,653 ರೂ. ಆಗಿದೆ.
>> ವಾಣಿಜ್ಯ ಬಕೆಯ ಎಲ್ಪಿಜಿ ಸಿಲಿಂಡರ್ 47.5 ಕೆಜಿ 4,129 ರೂ. ಆಗಿದೆ. ಅಂದರೆ, ಇದರ ಬೆಲೆ 127 ರೂ. ಇಳಿಕೆಯಾಗಿದೆ.
ಗೃಹ ಬಳಕೆಯ ಎಲ್ಪಿಜಿ ಬೆಲೆ:
* ಗೃಹ ಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ 14ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 855.50 ರೂ. ಗಳಾಗಿವೆ.
* 5 ಕೆಜಿ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 318.50 ರೂ. ಆಗಿದೆ.