)
Fitness certificate New Rules: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯು ಮಾಲಿನ್ಯ, ಶಬ್ದಮಾಲಿನ್ಯ, ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಬಳಕೆ, ಹಾಗು ಏರುತ್ತಿರುವ ಅಪಘಾತಗಳ ಸಂಖ್ಯೆಯ ಕಾರಣಕ್ಕೆ ಕೇಂದ್ರ ಸರ್ಕಾರ ಈಗ ಹಳೆಯ ವಾಹನಗಳ ಬಗ್ಗೆ ಇದ್ದ ಫಿಟ್ನೆಸ್ ಪ್ರಮಾಣಪತ್ರ (Fitness Certificate) ನೀಡುವ ನಿಯಮಗಳನ್ನು ಬದಲಾಯಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು ಈಗ ಏಜೆಂಟ್ಗಳು, ಕಾಗದಪತ್ರಗಳು ಅಥವಾ ವೈಯಕ್ತಿಕ ಸಂಪರ್ಕಗಳಿಲ್ಲದೆ ವಾಹನದ ಭವಿಷ್ಯವನ್ನು ನಿರ್ಧರಿಸಬಹುದಾಗಿದೆ.
ಸಂಚಾರಿ ಪೊಲೀಸರಿಗೆ (Traffic Police) ಸಿಕ್ಕಾಕಿಕೊಂಡರಷ್ಟೇ ದಂಡ ವಿಧಿಸುತ್ತಾರೆ. ಅಥವಾ ನಮ್ಮ 15 ವರ್ಷ ಹಳೆಯ ಸ್ಕೂಟರ್, ಬೈಕ್ ಅಥವಾ ಕಾರನ್ನು ಸೀಜ್ ಮಾಡುತ್ತಾರೆ ಎಂದುಕೊಂಡರೆ ಅದು ಇನ್ನು ಮುಂದೆ ಸುಳ್ಳು. ಈಗ ಸ್ವಯಂಚಾಲಿತ ಪರೀಕ್ಷಾ ಕೇಂದ್ರದಲ್ಲಿ (ATS) ಕೇವಲ 10 ಸೆಕೆಂಡುಗಳಲ್ಲಿ ಡಿಜಿಟಲ್ ವೀಡಿಯೊ ಪರೀಕ್ಷೆಯ ಮೂಲಕ ನಿಮ್ಮ 15 ವರ್ಷ ಹಳೆಯ ಸ್ಕೂಟರ್, ಬೈಕ್ ಅಥವಾ ಕಾರು ಎಲ್ಲಿದೆ? ಅದನ್ನು ಸ್ಕ್ರ್ಯಾಪ್ ಮಾಡಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ.
ಯಾವ ಕಾರಣಕ್ಕಾಗಿ ಈ ಕಠಿಣ ಕ್ರಮ?
15 ವರ್ಷ ಹಳೆಯ ಸ್ಕೂಟರ್, ಬೈಕ್ ಅಥವಾ ಕಾರುಗಳನ್ನು ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳು ಡಿಜಿಟಲ್ ವೀಡಿಯೊ ಪರೀಕ್ಷೆಯ ಮೂಲಕ ಸ್ಕ್ರ್ಯಾಪ್ ಮಾಡಲು ಮುಂದಾಗಿರುವುದಕ್ಕೆ ಸಕಾರಣವಿದೆ. ಈ ಹೊಸ ನಿಯಮದ ಪ್ರಮುಖ ಉದ್ದೇಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿವಿಧ ಬಗೆಯ ಮಾಲಿನ್ಯವನ್ನು ಕಮ್ಮಿ ಮಾಡುವುದು. ಜೊತೆಗೆ ವಾಹನಗಳು ಕಂಡೀಷನ್ ಇಲ್ಲದ ಕಾರಣಕ್ಕಾಗಿ ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟುವುದು. ಇದಲ್ಲದೆ ವಾಹನ ಫಿಟ್ನೆಸ್ ಪ್ರಮಾಣೀಕರಣದಲ್ಲಿನ (Fitness Certificate) ಭ್ರಷ್ಟಾಚಾರವನ್ನು ನಿವಾರಿಸುವುದಾಗಿದೆ.
ಹಳೆಯ ವಾಹನಗಳ ಬಗ್ಗೆ ಬಂದಿರುವ ಹೊಸ ನಿಯಮ ಏನು?
ವಾಹನಗಳನ್ನು ಆರ್ಟಿಒ ಕಚೇರಿಗೆ ತರದೆ ಬ್ರೋಕರ್ ಅಥವಾ ಏಜೆಂಟ್ಗಳ ಮೂಲಕ ಫಿಟ್ನೆಸ್ ಪ್ರಮಾಣಪತ್ರ (Fitness Certificate)ಗಳನ್ನು ಪಡೆಯುವ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದುಹಾಕಲೆಂದು ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಹೊಸ ನಿಯಮದಲ್ಲಿ 15 ವರ್ಷಕ್ಕಿಂತ ಹಳೆಯ ಎಲ್ಲಾ ವಾಹನಗಳನ್ನು ಸುಧಾರಿತ ಯಂತ್ರಗಳು ಮತ್ತು ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಂಡು ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಲ್ಲಿ (ATS) ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜೊತೆಗೆ ಸ್ಕ್ರ್ಯಾಪ್ ಮಾಡಬೇಕೇ ಬೇಡವೇ ಎಂದು ಕೂಡ ನಿರ್ಧರಿಸಲಾಗುತ್ತದೆ.
ವೀಡಿಯೊ ನಿಯಮ ಎಂದರೇನು?
ಇಲ್ಲಿಯವರೆಗೆ ವಾಹನಗಳನ್ನು ಪರಿಶೀಲನೆ ಮಾಡಿ ಅದನ್ನು ಸ್ಕ್ರ್ಯಾಪ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ವ್ಯಕ್ತಿಗಳೇ ನಿರ್ಧರಿಸುತ್ತಿದ್ದರು. ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಯಂತ್ರಗಳು ಆ ಕೆಲಸವನ್ನು ಮಾಡುತ್ತವೆ. ವಾಹನಗಳಿಗೆ ಮಾಡಿರುವ ಜಿಯೋ-ಟ್ಯಾಗ್ ಮೂಲಕ ವೀಡಿಯೊ ರೆಕಾರ್ಡಿಂಗ್ ಮಾಡಿ ಅದರ ಆಧರದ ಮೇಲೆ ವಾಹನದ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ.
10 ಸೆಕೆಂಡುಗಳಲ್ಲಿ ಮುಗಿದು ಹೋಗುತ್ತೆ ಪರೀಕ್ಷೆ!
ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳು (ATS) ಮಾಡುವ ಡಿಜಿಟಲ್ ವೀಡಿಯೊ ಪರೀಕ್ಷೆಯು ಕೇವಲ 10 ಸೆಕೆಂಡುಗಳಿರುತ್ತೆ. ವಾಹನವು ಎಟಿಎಸ್ ಕೇಂದ್ರ ಪ್ರವೇಶಿಸಿದ 10 ಸೆಕೆಂಡುಗಳ ವಾಹನದ ವೀಡಿಯೊವನ್ನು ರೆಕಾರ್ಡ್ ಮಾಡಲಾಗುತ್ತದೆ. ಆ ಮೂಲಕ ವಾಹನದ ಕಂಡೀಷನ್ ಹೇಗಿದೆ ಎನ್ನುವುದನ್ನು ದಾಖಲು ಮಾಡಲಾಗುತ್ತದೆ. ವಾಹನದ ಎಂಜಿನ್ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆ ಮೂಲಕ ಆ ವಾಹನದ ಆಯಸ್ಸು ಎಷ್ಟು? ಎಂಬುದನ್ನು ಪತ್ತೆ ಮಾಡಲಾಗುತ್ತದೆ. ವೀಡಿಯೊವನ್ನು ಸರ್ಕಾರಿ ಪೋರ್ಟಲ್ಗೆ ಅಪ್ಲೋಡ್ ಮಾಡಲಾಗುತ್ತದೆ. ಇಂಥ ವಿಡಿಯೊ ಇಲ್ಲದೆ ಇನ್ನು ಮುಂದೆ ಯಾವುದೇ ಪರೀಕ್ಷೆಯು ಮಾನ್ಯವಾಗುವುದಿಲ್ಲ. ಇದರ ಅರ್ಥ ವಾಹನವನ್ನು ಆರ್ಟಿಒ ಕಚೇರಿಗೆ ಮತ್ತು ಸ್ವಯಂಚಾಲಿತ ಪರೀಕ್ಷಾ ಕೇಂದ್ರಕ್ಕೆ (ATS) ತರದೆ ಫಿಟ್ನೆಸ್ ಪ್ರಮಾಣಪತ್ರ (Fitness Certificate) ಸಿಗುವುದಿಲ್ಲ. ಇದರಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಜೊತೆಗೆ ಭ್ರಷ್ಟಾಚಾರ ನಡೆಯುವುದಿಲ್ಲ ಎನ್ನಲಾಗಿದೆ.