ಪಿಎಫ್ ಚಂದಾದಾರರಿಗೆ ಭರ್ಜರಿ ಲಾಭ !ಪಿಂಚಣಿ ಹೆಚ್ಚಳದಿಂದ ಪಿಎಫ್ ವರ್ಗಾವಣೆಯವರೆಗೆ ಪ್ರಮುಖ ನಿಯಮಗಳಲ್ಲಿ ಬದಲಾವಣೆ ತಂದ ಇಪಿಎಫ್‌ಒ

EPFO Latest News :ಪಿಎಫ್ ಚಂದಾದಾರರಿಗೆ ಐದು  ೊಸ ನಿಯಮಗಳನ್ನು ಇಪಿಎಫ್ಓ ಜಾರಿಗೆ ತಂದಿದೆ. ಪಿಎಫ್ ಗೆ ಸಂಬಂಧಿಸಿದ ಕೆಲವೊಂದು ಕೆಲಸಗಳನ್ನು ಸರಳೀಕರಿಸುವ ನಿಟ್ಟಿನಲ್ಲಿ ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.  

Written by - Ranjitha R K | Last Updated : Apr 28, 2025, 10:32 AM IST
  • ನೌಕರರ ಭವಿಷ್ಯ ನಿಧಿ ಸಂಸ್ಥೆಯ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆ
  • ಸದಸ್ಯರ ಕಲ್ಯಾಣ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆ ಜಾರಿಗೆ
  • ಇಪಿಎಫ್‌ಒ 5 ಪ್ರಮುಖ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ.
ಪಿಎಫ್ ಚಂದಾದಾರರಿಗೆ ಭರ್ಜರಿ ಲಾಭ !ಪಿಂಚಣಿ ಹೆಚ್ಚಳದಿಂದ ಪಿಎಫ್ ವರ್ಗಾವಣೆಯವರೆಗೆ ಪ್ರಮುಖ ನಿಯಮಗಳಲ್ಲಿ ಬದಲಾವಣೆ ತಂದ ಇಪಿಎಫ್‌ಒ

EPFO Latest News : ನೌಕರರ ಭವಿಷ್ಯ ನಿಧಿ ಸಂಸ್ಥೆಯು 2025ರಲ್ಲಿ ತನ್ನ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ.   ಕೋಟ್ಯಂತರ ಸದಸ್ಯರ ಕಲ್ಯಾಣ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆಯನ್ನು ಜಾರಿಗೆ ತರಲಾಗಿದೆ.  ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುವುದು, ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

ಪಿಎಫ್ ಖಾತೆಯಲ್ಲಿ ನಿಮ್ಮ ಪ್ರೊಫೈಲ್ ಅನ್ನು ನವೀಕರಿಸುವುದಾಗಲೀ, ಉದ್ಯೋಗ ಬದಲಾಯಿಸುವಾಗ ಪಿಎಫ್ ಖಾತೆಯನ್ನು ಬದಲಾಯಿಸುವುದಾಗಲಿ   ಅಥವಾ ನಿವೃತ್ತಿ ಸಂಬಂಧಿತ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದಾಗಲಿ ಎಲ್ಲರಿಗೂ ಈ ಹೊಸ ನಿಯಮಗಳು ಅನುಕೂಲಕರವಾಗಿರಲಿದೆ. ಇಪಿಎಫ್‌ಒ  5 ಪ್ರಮುಖ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ. 

ಇದನ್ನೂ ಓದಿ : ಅಕ್ಷಯ ತೃತೀಯಗೂ ಮುನ್ನ ಆಭರಣ ಪ್ರಿಯರಿಗೆ ಶುಭ ಸುದ್ದಿ.. ಗಣನೀಯವಾಗಿ ಕುಸಿದ ಚಿನ್ನದ ಬೆಲೆ!

1.ಪಿಎಫ್ ಖಾತೆಯಲ್ಲಿ ಪ್ರೊಫೈಲ್ ಅಪ್ಡೇಟ್ ಮಾಡುವುದು : 
ಇಪಿಎಫ್‌ಒ ನೋಂದಣಿಯಲ್ಲಿ ಪ್ರೊಫೈಲ್ ಅಪ್ಡೇಟ್ ಮಾಡುವುದು ಈಗ ಮೊದಲಿನಂತೆ ಕಷ್ಟಕರವೇನಲ್ಲ. ಯುಎಎನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದ್ದರೆ, ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ರಾಷ್ಟ್ರೀಯತೆ, ಪೋಷಕರ ಹೆಸರುಗಳು, ವೈವಾಹಿಕ ಸ್ಥಿತಿ, ಸಂಗಾತಿಯ ವಿವರಗಳು ಮತ್ತು ಉದ್ಯೋಗಕ್ಕೆ ಸೇರಿದ ಮತ್ತು ಬಿಡುವ ದಿನಾಂಕ ಸೇರಿದಂತೆ ಎಲ್ಲಾ ಅಗತ್ಯ ಬದಲಾವಣೆಗಳನ್ನು ಅಥವಾ ತಿದ್ದುಪಡಿಗಳನ್ನು ಆನ್ಲೈನ್ ನಲ್ಲಿಯೇ ಮಾಡಬಹುದು. ಇದಕ್ಕೆ ಯಾವುದೇ ದಾಖಲೆಗಳ ಅಗತ್ಯ ಇಲ್ಲ ಎನ್ನುವುದು ಗಮನಾರ್ಹ ಸಂಗತಿ. ನಿಮ್ಮ UAN ಸಂಖ್ಯೆ ಅಕ್ಟೋಬರ್ 1, 2017 ಕ್ಕಿಂತ ಹಿಂದಿನದಾಗಿದ್ದರೆ, ಕೆಲವು ವಿವರಗಳನ್ನು ನವೀಕರಿಸಲು ಉದ್ಯೋಗದಾತರ ಅನುಮೋದನೆ ಬೇಕಾಗಬಹುದು.

2.ಉದ್ಯೋಗ ಬದಲಾಯಿಸಿದಾಗ PF ಖಾತೆಯನ್ನು ಕೂಡಾ ಸುಲಭವಾಗಿ ಬದಲಾಯಿಸಬಹುದು : 
ಮೊದಲು ಉದ್ಯೋಗ ಬದಲಾಯಿಸುವಾಗ ಪಿಎಫ್ ಖಾತೆಯನ್ನು ವರ್ಗಾಯಿಸುವಾಗ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು.  ಆದರೆ ಈಗ ಈ ಪ್ರಕ್ರಿಯೆಯು ಕೂಡಾ ಸರಳವಾಗಿದೆ.ಇದಕ್ಕೆ ಸಂಬಂಧಿಸಿದಂತೆ ಇಪಿಎಫ್ ಓ ಜನವರಿ 15, 2025 ರಂದು, ​​ಹೊಸ ಸೂಚನೆಗಳನ್ನು ನೀಡಿದೆ.  ಈ ಸೂಚನೆ ಅಡಿಯಲ್ಲಿ ಕೆಲವು ಸಂದರ್ಭಗಳಲ್ಲಿ, ಪಿಎಫ್ ವರ್ಗಾವಣೆಗೆ ಹಳೆಯ ಉದ್ಯೋಗದಾತರ ಒಪ್ಪಿಗೆಯಾಗಲಿ ಅಥವಾ ಹೊಸ ಉದ್ಯೋಗದಾತರ ಒಪ್ಪಿಗೆಯಾಗಲಿ ಅಗತ್ಯವಿಲ್ಲ.

ಇದನ್ನೂ ಓದಿ : ಇನ್ನು ಮುಂದೆ ಪ್ರತಿ ಬಾರಿ ATMನಿಂದ ಹಣ ತೆಗೆಯುವಾಗಲೂ ಕಟ್ ಆಗುವುದು ಇಷ್ಟು ದೊಡ್ಡ ಮೊತ್ತ ! ಬ್ಯಾಲೆನ್ಸ್ ಚೆಕ್ ಮಾಡಿದರೂ ಆಗುವುದು ಹಣ ಡಿಡೆಕ್ಟ್

ಈ ವೈಶಿಷ್ಟ್ಯವು ಈ ಕೆಳಗಿನ ಸಂದರ್ಭಗಳಲ್ಲಿ ಲಭ್ಯವಿದೆ:
1.ಒಂದೇ UAN ಗೆ ಲಿಂಕ್ ಮಾಡಲಾದ ಎಲ್ಲಾ ಸದಸ್ಯರ ID ಗಳ ವರ್ಗಾವಣೆ.
2.ಎರಡು ವಿಭಿನ್ನ UAN ಸಂಖ್ಯೆಗಳನ್ನು ಆಧಾರ್‌ಗೆ ಲಿಂಕ್ ಮಾಡಿದ್ದರೆ, ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗದಂತಹ ವಿವರಗಳು ಒಂದೇ ಆಗಿದ್ದರೆ.
3.ಒಂದು UAN ಹಳೆಯದಾಗಿದ್ದರೆ ಮತ್ತು ಇನ್ನೊಂದು ಹೊಸದಾಗಿದ್ದರೆ, ಮತ್ತು ಆಧಾರ್ ಮತ್ತು ಇತರ ಮಾಹಿತಿಗಳು ಹೊಂದಿಕೆಯಾಗುತ್ತಿದ್ದರೆ ಹಳೆಯ ಉದ್ಯೋಗದಾತರ ಒಪ್ಪಿಗೆಯಾಗಲಿ ಅಥವಾ ಹೊಸ ಉದ್ಯೋಗದಾತರ ಅನುಮೊದನೆಯಾಗಲಿ ಅಗತ್ಯವಿಲ್ಲ.

3.ಹೆಚ್ಚಿನ ಪಿಂಚಣಿಗಳಿಗೆ ಸಂಬಂಧಿಸಿದ ಪರಿಸ್ಥಿತಿಯ ಬಗ್ಗೆ ಸ್ಪಷ್ಟೀಕರಣ :
ಹೆಚ್ಚಿನ ಸಂಬಳದ ಆಧಾರದ ಮೇಲೆ ಪಿಂಚಣಿ ಪಡೆಯುತ್ತಿರುವ ಅಥವಾ ಪಡೆಯಲು ಉದ್ದೇಶಿಸಿರುವ ಸದಸ್ಯರಿಗೆ, EPFO ​​ಹೊಸ ನೀತಿಯನ್ನು ಜಾರಿಗೆ ತಂದಿದೆ. ಎಲ್ಲಾ ಪಿಂಚಣಿದಾರರಿಗೆ ಪಿಂಚಣಿ ಲೆಕ್ಕಾಚಾರವನ್ನು ಏಕರೂಪವಾಗಿ ಮಾಡಲಾಗುತ್ತದೆ. ವಿನಾಯಿತಿ ಪಡೆದ ಘಟಕಗಳು ಟ್ರಸ್ಟ್‌ನ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. 

ಇದನ್ನೂ ಓದಿ : EPFO: ಪಿಂಚಣಿಯಲ್ಲಿ ಭಾರೀ ಹೆಚ್ಚಳ: ಯಾರಿಗೆಲ್ಲಾ ಜಾಕ್‌ಪಾಟ್‌..!

4.ಪಿಂಚಣಿ ಒದಗಿಸುವ ಹೊಸ ವಿಧಾನ: 
ಜನವರಿ 1, 2025 ರಿಂದ, EPFO ​​ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (CPPS) ಎಂಬ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ, ಪಿಂಚಣಿಯನ್ನು ಈಗ NPCI ವೇದಿಕೆಯ ಮೂಲಕ ದೇಶದ ಯಾವುದೇ ಬ್ಯಾಂಕ್ ಖಾತೆಗೆ ನೇರವಾಗಿ ಕಳುಹಿಸಬಹುದು. ಇದು ಪ್ರಾದೇಶಿಕ ಕಚೇರಿಗಳ ನಡುವೆ PPO ವಿನಿಮಯದ ಅಗತ್ಯವನ್ನು ನಿವಾರಿಸುತ್ತದೆ. ಹೊಸ PPO ನೀಡುವಾಗ, ಡಿಜಿಟಲ್ ಲೈಫ್ ಸರ್ಟಿಫಿಕೇಟ್‌ನ ಸೌಲಭ್ಯವನ್ನು ಪಡೆಯಲು UAN-ಆಧಾರಿತ ಲಿಂಕ್ ಅಗತ್ಯವಿದೆ. ಒಂದು ವೇಳೆ ವಿನಂತಿಯನ್ನು ತಪ್ಪಾಗಿ ತಪ್ಪು ಕಚೇರಿಗೆ ಕಳುಹಿಸಿದ್ದರೆ, ಅದನ್ನು ಸರಿಯಾದ ಕಚೇರಿಗೆ ಹಿಂತಿರುಗಿಸಲಾಗುತ್ತದೆ.

5. Joint Declaration ಸರಳಗೊಳಿಸಲಾಗಿದೆ : 
ಜನವರಿ 16, 2025 ರಂದು ಜಾಯಿಂಟ್ ಡಿಕ್ಲೆರೇಶನ್ ಪ್ರಕ್ರಿಯೆಗೆ EPFO ​​ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇಲ್ಲಿ ಸದಸ್ಯರನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ:
1.ಆಧಾರ್ ಆಧಾರಿತ UAN ಹೊಂದಿರುವವರು ಆನ್‌ಲೈನ್‌ನಲ್ಲಿ Joint Declaration ಮಾಡಬಹುದು.
2.ಯುಎಎನ್ ಹಳೆಯದಾಗಿದ್ದು, ಆಧಾರ್ ಮೂಲಕ ಪರಿಶೀಲಿಸಲ್ಪಟ್ಟವರು ಆನ್‌ಲೈನ್‌ನಲ್ಲಿ ಜಾಯಿಂಟ್ ಡಿಕ್ಲೆರೇಶನ್ ಮಾಡಬಹುದು.
3.ಯುಎಎನ್ ಇಲ್ಲದವರಿಗೆ, ಆಧಾರ್ ಪರಿಶೀಲಿಸದವರಿಗೆ ಅಥವಾ ಸದಸ್ಯರ ಮರಣದ ಸಂದರ್ಭದಲ್ಲಿ ಜಾಯಿಂಟ್ ಡಿಕ್ಲೆರೇಶನ್  ಸೌಲಭ್ಯವನ್ನು ಒದಗಿಸಲಾಗಿದೆ.

ಈಗ ಈ 5 ಪ್ರಮುಖ ಬದಲಾವಣೆಗಳೊಂದಿಗೆ, EPFO ​​ಸೇವೆಗಳು ಹೆಚ್ಚು ಆಧುನಿಕ, ಡಿಜಿಟಲ್ ಮತ್ತು ಉದ್ಯೋಗಿಗಳಿಗೆ ಅನುಕೂಲಕರವಾಗಿವೆ. ನಿಮ್ಮ ಪ್ರೊಫೈಲ್ ನವೀಕರಿಸುವುದು, ನಿಮ್ಮ ಪಿಎಫ್ ಖಾತೆಯನ್ನು ಬದಲಾಯಿಸುವುದು ಅಥವಾ ಪಿಂಚಣಿ ಸಂಬಂಧಿತ ಕೆಲಸ ಮಾಡುವ ಪ್ರಕ್ರಿಯೆ ಈಗ ಮೊದಲಿಗಿಂತ ಸುಲಭ ಮತ್ತು ಸರಳವಾಗಿ ಆಗಲಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News