ಖಾಸಗಿ ವಲಯದ ಉದ್ಯೋಗಿಗಳಿಗೆ ಜಾಕ್‌ಪಾಟ್:ಪಿಂಚಣಿಯಲ್ಲಿ ದೊಡ್ಡ ಮಟ್ಟದ ಹೆಚ್ಚಳ

EPS Pension Latest News:ಖಾಸಗಿ ವಲಯದ ಉದ್ಯೋಗಿಗಳಿಗೆ ಕನಿಷ್ಠ ಮಾಸಿಕ ಪಿಂಚಣಿ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸಂಸದೀಯ ಸಮಿತಿಯೂ ತನ್ನ ಶಿಫಾರಸನ್ನು ನೀಡಿದೆ.  

Written by - Ranjitha R K | Last Updated : Apr 16, 2025, 04:12 PM IST
  • ಇಪಿಎಫ್ ಸದಸ್ಯರಿಗೆ ಕಾದಿದೆ ಶುಭ ಸುದ್ದಿ :
  • ಕನಿಷ್ಠ ಮಾಸಿಕ ಪಿಂಚಣಿ ಹೆಚ್ಚಿಸಲು ಆಗ್ರಹ
  • ಕಾರ್ಮಿಕ ಸಂಸದೀಯ ಸಮಿತಿಯಿಂದ ಶಿಫಾರಸು
ಖಾಸಗಿ ವಲಯದ ಉದ್ಯೋಗಿಗಳಿಗೆ ಜಾಕ್‌ಪಾಟ್:ಪಿಂಚಣಿಯಲ್ಲಿ  ದೊಡ್ಡ ಮಟ್ಟದ ಹೆಚ್ಚಳ

EPS Pension Latest News: ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲರಿಗೂ ಇದು ಸಿಹಿ ಸುದ್ದಿ. ನೌಕರರ ಕನಿಷ್ಠ ಪಿಂಚಣಿ  1,000 ರೂ.ಯಿಂದ  7,500. ರೂ.ಗಳಿಗೆ ಹೆಚ್ಚಾಗಬಹುದು. ಇದು ಉದ್ಯೋಗಿಗಳಿಗೆ ದೊಡ್ಡ ಪರಿಹಾರವಾಗಲಿದೆ.

Add Zee News as a Preferred Source

ಇಪಿಎಫ್ ಸದಸ್ಯರಿಗೆ ಕಾದಿದೆ ಶುಭ ಸುದ್ದಿ :
ಖಾಸಗಿ ವಲಯದ ಉದ್ಯೋಗಿಗಳಿಗೆ ಕನಿಷ್ಠ ಮಾಸಿಕ ಪಿಂಚಣಿ ಹೆಚ್ಚಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸಂಸದೀಯ ಸಮಿತಿಯೂ ತನ್ನ ಶಿಫಾರಸನ್ನು ನೀಡಿದೆ. ಪ್ರಸ್ತುತ, ಈ ಯೋಜನೆಯಡಿ ಕನಿಷ್ಠ ಪಿಂಚಣಿ 1000.ರೂ. ಈ ಮೊತ್ತವನ್ನು ಸುಮಾರು 10 ವರ್ಷಗಳ ಹಿಂದೆ ಬದಲಾಯಿಸಲಾಗಿತ್ತು ಎಂಬುದು ಗಮನಾರ್ಹ. 

ಇದನ್ನೂ ಓದಿ : ಮನೆಯಲ್ಲಿ ದಾಖಲೆಗಳಿಲ್ಲದೆ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು? ಐಟಿ ಇಲಾಖೆ ನೀಡಿರುವ ಮಿತಿ ಎಷ್ಟು?

ಕನಿಷ್ಠ ಮಾಸಿಕ ಪಿಂಚಣಿ: 
ಇಪಿಎಫ್‌ಒ ಪಿಂಚಣಿಯ ಫಲಾನುಭವಿಗಳಾದ ಕೋಟ್ಯಂತರ ಜನರಿಗೆ ಒಳ್ಳೆಯ ಸುದ್ದಿ ಇದೆ. 10 ವರ್ಷಗಳ ನಂತರ, ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕನಿಷ್ಠ ಪಿಂಚಣಿ 7,500 ರೂ.ಗಳಿಗೆ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಸಿಗುವ ಕನಿಷ್ಠ ಪಿಂಚಣಿ 1,000 ರೂ. ತೀರಾ ಕಡಿಮೆಯಾಗಿದ್ದು, ಅದನ್ನು  7,500 ರೂ.ಗೆ ಹೆಚ್ಚಿಸಬೇಕು ಎಂದು ಇತ್ತೀಚೆಗೆ, ಸಂಸದೀಯ ಸಮಿತಿ ಹೇಳಿದೆ. 2014 ರಲ್ಲಿ, ಕೇಂದ್ರ ಸರ್ಕಾರವು ಇಪಿಎಫ್‌ಒ ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು 250 ರೂ.ಗಳಿಂದ 1000 ರೂಪಾಯಿಗೆ ಹೆಚ್ಚಿಸಿತ್ತು.  

ಕನಿಷ್ಠ ಪಿಂಚಣಿ ಹೆಚ್ಚಿಸಲು ಆಗ್ರಹ : 
ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದ ಕಾರ್ಮಿಕ ಸಂಸದೀಯ ಸಮಿತಿ  ಇಪಿಎಫ್‌ಒ ನೌಕರರ ಪಿಂಚಣಿಯನ್ನು 7,500 ರೂ.ಗಳಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇಲ್ಲಿಯವರೆಗೆ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮಾಸಿಕ 1,000. ರೂ. ಪಿಂಚಣಿ ನೀಡಲಾಗುತ್ತಿತ್ತು. 
2014 ಕ್ಕೆ ಹೋಲಿಸಿದರೆ ಹಣದುಬ್ಬರ ಗಣನೀಯವಾಗಿ ಹೆಚ್ಚಾಗಿದೆ ಎಂದು ಸಮಿತಿ ಹೇಳಿದೆ. ಆದ್ದರಿಂದ, ಉದ್ಯೋಗಿಗಳಿಗೆ ಪಿಂಚಣಿಗಳನ್ನು ಅದಕ್ಕೆ ತಕ್ಕಂತೆ ಹೆಚ್ಚಿಸಬೇಕು ಎಂದು ಆಗ್ರಹಿಸಿದೆ. ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು, ಪಿಂಚಣಿದಾರರು ಮತ್ತು ಅವರ ಕುಟುಂಬ ಸದಸ್ಯರ ಪ್ರಯೋಜನಕ್ಕಾಗಿ ಸರ್ಕಾರವು ಸಾಕಷ್ಟು ಪಿಂಚಣಿಗಳನ್ನು ಒದಗಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಇದನ್ನೂ ಓದಿ : ರೈಲಿನಲ್ಲಿಯೇ ಎಟಿಎಂ ಅಳವಡಿಕೆ ! ಭಾರತೀಯ ರೈಲ್ವೆಯ ನೂತನ ಪ್ರಯೋಗ ! ರೈಲು ಪ್ರಯಾಣಿಕರು ಫುಲ್ ಖುಷ್

ಖಾಸಗಿ ವಲಯದ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಮೂಲ ವೇತನದ ಸುಮಾರು 12% ಅನ್ನು ಪ್ರತಿ ತಿಂಗಳು ಇಪಿಎಫ್‌ಗಾಗಿ ಕಡಿತಗೊಳಿಸಲಾಗುತ್ತದೆ. ಕಂಪನಿಯು ಸಹ ಅಷ್ಟೇ ಮೊತ್ತದ ಕೊಡುಗೆ ನೀಡುತ್ತದೆ. ಕಂಪನಿಯು ಪಾವತಿಸುವ ಮೊತ್ತದ 8.33% ಇಪಿಎಸ್ ಖಾತೆಗೆ ಹೋಗುತ್ತದೆ. ಇಪಿಎಫ್ ಖಾತೆಯಲ್ಲಿ ಶೇ. 3.67 ರಷ್ಟು ಮೊತ್ತವನ್ನು ಠೇವಣಿ ಇಡಲಾಗುತ್ತದೆ. ಈ ರೀತಿಯಾಗಿ, ಪ್ರತಿ ತಿಂಗಳು ನಿವೃತ್ತಿಗಾಗಿ ವೇತನದ  ಒಂದು ಸಣ್ಣ ಭಾಗವನ್ನು ಮೀಸಲಿಡಲಾಗುತ್ತದೆ. ಆದ್ದರಿಂದ, ಪಿಂಚಣಿ ಹೆಚ್ಚಳವು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆರ್ಥಿಕ ಒತ್ತಡವಿಲ್ಲದೆ ಉತ್ತಮ ಜೀವನ ನಡೆಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇಪಿಎಸ್ ಪಿಂಚಣಿದಾರರಿಗೆ ಸಿಗುವ ಪ್ರಯೋಜನ ಯಾವುದು ?: 
ಕನಿಷ್ಠ ಮಾಸಿಕ ಪಿಂಚಣಿ ಹೆಚ್ಚಿಸಿದರೆ, ಇಪಿಎಸ್ ಪಿಂಚಣಿದಾರರಿಗೆ ದೊಡ್ಡ ಪರಿಹಾರ ಸಿಗಲಿದೆ. ಇದಲ್ಲದೆ, ದಿನನಿತ್ಯ ಏರುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಪಿಂಚಣಿದಾರರು ಮತ್ತು ಅವರ ಸಂಗಾತಿಗೆ ತುಟ್ಟಿ ಭತ್ಯೆ ಪಾವತಿ ಮತ್ತು ಉಚಿತ ಸರ್ಕಾರಿ ವೈದ್ಯಕೀಯ ಸೇವೆಗಳಂತಹ ಅಗತ್ಯ ಬೆಂಬಲವನ್ನು ಇಪಿಎಫ್ ಸದಸ್ಯರು ಕೋರಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News