ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ

VRS New Guidelines: ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ವಿಆರ್ಎಸ್ ಕುರಿತಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸ್ವಯಂಪ್ರೇರಿತ ನಿವೃತ್ತಿ (VRS) ನಿಯಮ ಬದಲಾವಣೆ ಕುರಿತಂತೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದ್ದು, ಇದರಿಂದ ಲಕ್ಷಾಂತರ ನೌಕರರ ಮೇಲೆ ನೇರ ಪ್ರಯೋಜನವನ್ನು ನೀಡಲಿದೆ. 

Written by - Yashaswini V | Last Updated : Nov 7, 2025, 10:06 AM IST
  • ವಿಆರ್ಎಸ್ ನಿಯಮ ಬದಲಾಯಿಸಿದ ಮೋದಿ ಸರ್ಕಾರ
  • ಸ್ವಯಂಪ್ರೇರಿತ ನಿವೃತ್ತಿ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ
  • ಸ್ವಯಂ ನಿವೃತ್ತಿ ಪಡೆಯಲು ಈ ನಿಯಮ ಕಡ್ಡಾಯ
ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ನ್ಯೂಸ್: VRS ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ

Voluntary Retirement Guidelines 2025: ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಸಂಬಂಧಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಈ ಕುರಿತಂತೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ - DoPPW ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಏಕೀಕೃತ ಪಿಂಚಣಿ ಯೋಜನೆ (UPS) ಆಯ್ಕೆ ಮಾಡಿಕೊಂಡಿರುವ ಸರ್ಕಾರಿ ನೌಕರರ ವಿಆರ್ಎಸ್ ಸಂಬಂಧ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

Add Zee News as a Preferred Source

ವಿಆರ್ಎಸ್ ಪಡೆಯಲು ನಿಬಂಧನೆ: 
ಕೇಂದ್ರ ಸರ್ಕಾರಿ ನೌಕರರ ಸ್ವಯಂಪ್ರೇರಿತ ನಿವೃತ್ತಿ(VRS) ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿರುವ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ (DoPPW), ಎನ್ಪಿಎಸ್ ಅಧಿಯಲ್ಲಿ ಏಕೀಕೃತ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡಿರುವ ಕೇಂದ್ರ ಸರ್ಕಾರಿ ನೌಕರರು ನಿಯಮ 13ರ ಅಡಿಯಲ್ಲಿ ಸ್ವಯಂಪ್ರೇರಿತ ನಿವೃತ್ತಿಯನ್ನು ಪಡೆಯಬಹುದು ಎಂದು ಉಲ್ಲೇಖಿಸಿದೆ. 

ನಿಯಮ 13 ಏನು ಹೇಳುತ್ತದೆ?  
ಕೇಂದ್ರ ಸರ್ಕಾರಿ ನೌಕರರ ನಿಯಮ 13ರ ಪ್ರಕಾರ, ಯಾವುದೇ ಸರ್ಕಾರಿ ಉದ್ಯೋಗಿಯು 20ವರ್ಷಗಳ ನಿಯಮಿತ ಸೇವಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಅಗತ್ಯವಿದ್ದರೆ ಸ್ವಯಂಪ್ರೇರಿತವಾಗಿ ನಿವೃತ್ತಿ ಹೊಂದುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳುತ್ತದೆ. 

ವಿಆರ್ಎಸ್ ಪಡೆಯಲು ಈ ನಿಯಮ ಕಡ್ಡಾಯ:
ಆದಾಗ್ಯೂ, ಕೇಂದ್ರ ಸರ್ಕಾರಿ ನೌಕರರ ನಿಯಮ 13ರ ಅನ್ವಯ ಯಾವುದೇ ಉದ್ಯೋಗಿ ವಿಆರ್ಎಸ್ ಪಡೆಯುವ ಮೊದಲು ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ತಮ್ಮ ನೇಮಕಾತಿ ಪ್ರಾಧಿಕಾರಕ್ಕೆ  ಲಿಖಿತ ಸೂಚನೆ ನೀಡುವುದು ಕಡ್ಡಾಯವಾಗಿದೆ ಎಂದು ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯ(DoPPW) ಸ್ಪಷ್ಟಪಡಿಸಿದೆ. ಅರ್ಥಾತ್, ಯಾವುದೇ ಉದ್ಯೋಗಿ 20ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ವಿಆರ್ಎಸ್ ಪಡೆಯಲು ಬಯಸಿದರೆ ಅವರು ಕನಿಷ್ಠ ಮೂರು ತಿಂಗಳ ಮೊದಲೇ ಇಲಾಖೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕಾಗುತ್ತದೆ. 

ಏಕೀಕೃತ ಪಿಂಚಣಿ ಯೋಜನೆ ಅಡಿಯಲ್ಲಿ ವಿಆರ್ಎಸ್ ಪಡೆಯುವುದರ ಲಾಭವೇನು? 
ಏಕೀಕೃತ ಪಿಂಚಣಿ ಯೋಜನೆಯಡಿ ಸ್ವಯಂಪ್ರೇರಿತ ನಿವೃತ್ತಿ (VRS) ಪಡೆಯುವ ಸರ್ಕಾರಿ ಉದ್ಯೋಗಿಯು ಅರ್ಹತಾ ಮಾನದಂಡಗಳ ಪ್ರಕಾರ ಪಿಂಚಣಿ, ಗ್ರಾಚ್ಯುಟಿ ಮತ್ತು ಇತರ ನಿವೃತ್ತಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ವಿಆರ್ಎಸ್ ಕುರಿತ ಹೊಸ ಮಾರ್ಗಸೂಚಿ ಸ್ಪಷ್ಟವಾಗಿ ಉಲ್ಲೇಖಿಸಿದೆ. 

ಇದನ್ನೂ ಓದಿ- ಕೇವಲ ಮೆಸೇಜ್, ಮಿಸ್ಡ್ ಕಾಲ್ ಮೂಲಕವೇ ನಿಮ್ಮ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು! ಇಲ್ಲಿದೆ ಸುಲಭ ಮಾರ್ಗ

ಇದನ್ನೂ ಓದಿ- EPFO: ಪಿಎಫ್ ಖಾತೆಯಲ್ಲಿ ಎಂದಿಗೂ ಈ 5 ತಪ್ಪುಗಳನ್ನು ಮಾಡಬೇಡಿ, ಇಲ್ಲವೇ ಕಡಿಮೆಯಾಗುತ್ತೆ ನಿಮ್ಮ ನಿವೃತ್ತಿ ನಿಧಿ

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News