Unified Pension Scheme: ಹೊಸ ಆರ್ಥಿಕ ವರ್ಷದಿಂದ ಕೇಂದ್ರ ಸರ್ಕಾರಿ ನೌಕರರಿಗಾಗಿ 'ಏಕೀಕೃತ ಪಿಂಚಣಿ ಯೋಜನೆ' ಆರಂಭವಾಗಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರಿ ನೌಕರರಿಗೆ ಏನು ಪ್ರಯೋಜನವಾಗಲಿದೆ. ಕನಿಷ್ಠ 10ವರ್ಷ ಕೆಲಸ ಮಾಡಿದ್ರೆ ಎಷ್ಟು ಪಿಂಚಣಿ ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ.

Unified Pension Scheme: ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರ ಭವಿಷ್ಯವನ್ನು ಉಜ್ವಲವಾಗಿರಿಸುವ ನಿಟ್ಟಿನಲ್ಲಿ 01 ಏಪ್ರಿಲ್ 2025ರಿಂದ ಜಾರಿಗೆ ಬರುವಂತೆ "ಏಕೀಕೃತ ಪಿಂಚಣಿ ಯೋಜನೆ"(ಯುಪಿಎಸ್) ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್), ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಹೊಸ ನಿಯಮವನ್ನು ಪ್ರಕಟಿಸಿದ್ದು, ಈ ಯೋಜನೆ ಯಾರಿಗೆ ಲಾಭದಾಯಕ, ಇದರ ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ...
ಏಕೀಕೃತ ಪಿಂಚಣಿ ಯೋಜನೆಗೆ ಯಾರೆಲ್ಲಾ ಅರ್ಹರು?
ಪಿಎಫ್ಆರ್ಡಿಎ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಪ್ರಸ್ತುತ ಸೇವೆಯಲ್ಲಿರುವ ಎಲ್ಲಾ ಕೇಂದ್ರ ಸರ್ಕಾರಿ ನೌಕರರು, ಈಗಾಗಲೇ ಎನ್ಪಿಎಸ್ ಅಡಿಯಲ್ಲಿ ಒಳಪಟ್ಟವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. 01 ಏಪ್ರಿಲ್ 2025 ಅಥವಾ ನಂಟ ಕೇಂದ್ರ ಸರ್ಕಾರಿ ಸೇವೆಗೆ ಸೇರುವವವರು ಕೆಲಸಕ್ಕೆ ಸೇರಿದ 30ದಿನಗಳ ಒಳಗೆ ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಗಮನಿಸಬೇಕಾದ ಅಂಶವೆಂದರೆ ಏಕೀಕೃತ ಪಿಂಚಣಿ ಯೋಜನೆಯು ಒಂದು ಆಯ್ಕೆಯಾಗಿದ್ದು ಇದು ಕಡ್ಡಾಯವಲ್ಲ. ನೌಕರರು ಒಮ್ಮೆ ಯುಪಿಎಸ್ ಆಯ್ಕೆಯನ್ನು ಆರಿಸಿ ಸಲ್ಲಿಸಿದರೆ ಅದೇ ಅಂತಿಮವಾಗಿರುತ್ತದೆ. ಭವಿಷ್ಯದಲ್ಲಿ ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನೂ ನೆನಪಿನಲ್ಲಿಡಬೇಕು.
ಯುಪಿಎಸ್ ಅಧಿಯಲ್ಲಿ ನೌಕರರು ಮತ್ತು ಕೇಂದ್ರ ಸರ್ಕಾರದ ಕೊಡುಗೆ ಲೆಕ್ಕಾಚಾರ:
ನೌಕರರ ಕೊಡುಗೆ (ಮೂಲ ವೇತನ + ತುಟ್ಟಿ ಭತ್ಯೆ) 10% ಆಗಿರುತ್ತದೆ. ಇದೇ ವೇಳೆ ಕೇಂದ್ರ ಸರ್ಕಾರದ ಕೊಡುಗೆ (ಮೂಲವೇತನ + ತುಟ್ಟಿ ಭತ್ಯೆ) ಯ ಶೇ. 10ರಷ್ಟಿರುತ್ತದೆ. ಈ ಎರಡನ್ನೂ ಪ್ರತಿ ಉದ್ಯೋಗಿಯ ವೈಯಕ್ತಿಕ ನಿಧಿಗೆ ಜಮಾ ಮಾಡಲಾಗುವುದು. ಯುಪಿಎಸ್ ನಲ್ಲಿ ಖಚಿತ ಪಾವತಿಯನ್ನು ಬೆಂಬಳಿಸಲು ಸರ್ಕಾರವು ಹೆಚ್ಚುವರಿ ಕೊಡುಗೆಯಾಗಿ ಅಂದಾಜು 8.5% ಹೆಚ್ಚುವರಿ ಕೊಡುಗೆಯನ್ನು ಒದಗಿಸುತ್ತದೆ.
ಖಚಿತ ಪಿಂಚಣಿಯ ಭರವಸೆ:
ಏಕೀಕೃತ ಪಿಂಚಣಿ ಯೋಜನೆಯು ಕೇಂದ್ರ ಸರ್ಕಾರಿ ನೌಕರರಿಗೆ ಖಚಿತ ಪಾವತಿಯ ಭರವಸೆಯನ್ನು ನೀಡುತ್ತದೆ. ಪೂರ್ಣ ಖಚಿತ ಪಾವತಿ ದರವು ನಿವೃತ್ತಿಗೆ ಮುಂಚಿತವಾಗಿ 12 ಮಾಸಿಕ ಸರಾಸರಿ ಮೂಲ ವೇತನದ 50% ನಷ್ಟಿರುತ್ತದೆ. ಕನಿಷ್ಠ 25ವರ್ಷಗಳ ಸೇವಾವಧಿಯ ಬಳಿಕ ಈ ಪೂರ್ಣ ಖಚಿತ ಪಾವತಿ ನೀಡಲಾಗುತ್ತದೆ.
10ವರ್ಷ ಸೇವೆ ಪೂರ್ಣಗೊಳಿಸಿದ ನೌಕರರಿಗೆ ಎಷ್ಟು ಪಿಂಚಣಿ ಲಭ್ಯವಾಗಲಿದೆ?
ನೌಕರರು 10ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅರ್ಹತಾ ಸೇವೆಯ ಬಳಿಕ ನಿವೃತ್ತಿ ಹೊಂದಿದರೆ, ಇದರಲ್ಲಿ ಸಕಾಲಿಕ/ಯಾವುದೇ ನಿಯಮಿತ ಕೊಡುಗೆಗಳ ಲಾಭವನ್ನು ಪಡೆಯದಿದ್ದಲ್ಲಿ ಅಂತಹ ನೌಕರರಿಗೆ ಕನಿಷ್ಠ 10,000ರೂ. ಖಾತರಿ ಪಾವತಿ ನೀಡಲಾಗುತ್ತದೆ.
ಏಕೀಕೃತ ಪಿಂಚಣಿ ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ, ಸಂದರ್ಭಕ್ಕೆ ಅನುಗುಣವಾಗಿಯೇ ಖಚಿತ ಪಾವತಿ ಮತ್ತು ಕುಟುಂಬ ಪಾವತಿಯ ಮೇಲೆ ತುಟ್ಟಿ ಪರಿಹಾರವೂ ಲಭ್ಯವಾಗಲಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.