)
PM SVANidhi Yojane: ದೇಶಾದ್ಯಂತ ಲಕ್ಷಾಂತರ ಮಂದಿ ಬೀದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಅಗತ್ಯ ಸಮಯದಲ್ಲಿ ಆರ್ಥಿಕ ನೆರವು ನೀಡುವ ಮಹತ್ವದ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM SVANidhi) ಯೋಜನೆಯ ಅವಧಿಯನ್ನು 2030ರ ಮಾರ್ಚ್ 31 ರವರೆಗೆ ವಿಸ್ತರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ಯಾಬಿನೆಟ್ ಗ್ರೀನ್ ಸಿಗ್ನಲ್ ನೀಡಿದೆ. ಇದರ ಜೊತೆಗೆ ಶಾಲಾ ಮಿತಿ ವಿಸ್ತರಣೆಗೂ ಕೂಡ ಮೋದಿ ಕ್ಯಾಬಿನೆಟ್ ಅಸ್ತು ಎಂದಿದ್ದು ಕೋಟ್ಯಾಂತರ ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ನೆಮ್ಮದಿಯನ್ನು ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ಏನಿದು ಪಿಎಂ ಸ್ವನಿಧಿ ಯೋಜನೆ:
ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ ಯೋಜನೆಯೇ ಪಿಎಂ ಸ್ವನಿಧಿ ಯೋಜನೆ. 2024ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಂಡಿದ್ದ ಈ ಯೋಜನೆಯನ್ನು ಇದೀಗ ಯೂನಿಯನ್ ಕ್ಯಾಬಿನೆಟ್ 31 ಮಾರ್ಚ್ 2030ರವರೆಗೆ ವಿಸ್ತರಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು 'ಪಿಎಂ ಸ್ವನಿಧಿ ಯೋಜನೆ'ಯ ಮೂಲಕ ದೇಶಾದ್ಯಂತ ಸುಮಾರು 1.15 ಕೋಟಿ ಸಣ್ಣ ವ್ಯಾಪಾರಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಗುರಿಹೊಂದಿದೆ.
ಪಿಎಂ ಸ್ವನಿಧಿ ಯೋಜನೆಯಲ್ಲಿ ಸಾಲ ಮಿತಿ ಏರಿಕೆ:
ಪಿಎಂ ಸ್ವನಿಧಿ ಯೋಜನೆಯನ್ನು ವಿಸ್ತರಿಸುವುದರ ಜೊತೆಗೆ ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ನೀಡಲಾಗುತ್ತಿದ್ದ ಸಾಲ ಮಿತಿಯನ್ನು ಕೂಡ ಹೆಚ್ಚಿಸಿದೆ. ಗಮನಾರ್ಹವಾಗಿ ಈ ಮೊದಲು ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ₹30 ಸಾವಿರದವರೆಗೆ ಸಾಲ ನೀಡಲಾಗುತ್ತಿತ್ತು. ಇದೀಗ ಮೋದಿ ಕ್ಯಾಬಿನೆಟ್ ಈ ಸಾಲ ಮಿತಿಯನ್ನು ₹50 ಸಾವಿರದವರೆಗೆ ಏರಿಸಲು ಅನುಮೋದನೆ ನೀಡಿದೆ.
ಪಿಎಂ ಸ್ವನಿಧಿ ಯೋಜನೆಯ ಸಾಲ ಮಿತಿ ಏರಿಕೆಯ ಪ್ರಯೋಜನಗಳು:
* ಪಿಎಂ ಸ್ವನಿಧಿ ಯೋಜನೆಯಲ್ಲಿ ಈ ಮೊದಲು ಬೀದಿ ವ್ಯಾಪಾರಿಗಳು ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ಕೇವಲ 10,000ರೂ. ಸಾಲ ಸೌಲಭ್ಯ ಮಾತ್ರ ನೀಡಲಾಗುತ್ತಿತ್ತು. ಇದೀಗ ಈ ಮಿತಿಯನ್ನು 15,000ರೂ.ವರೆಗೆ ಏರಿಸಲಾಗಿದೆ.
* ಎರಡನೇ ಹಂತದಲ್ಲಿ 20 ಸಾವಿರ ರೂ. ನೀಡಲಾಗುತ್ತಿದ್ದ ಸಾಲ ಮಿತಿಯು ಇದೀಗ 25 ಸಾವಿರ ರೂಪಾಯಿಗಳಿಗೆ ಏರಿಕೆಯಾಗಿದೆ.
* ಈ ಹಿಂದೆ ಮೊದಲು ಮತ್ತು ಎರಡನೇ ಹಂತದಲ್ಲಿ ನೀಡಲಾದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸಿದ ಸಣ್ಣ ವ್ಯಾಪಾರಿಗಳಿಗೆ ಮೂರನೇ ಹಂತದಲ್ಲಿ 30 ಸಾವಿರ ರೂ.ವರೆಗೆ ಸಾಲ ಸೌಲಭ್ಯ ನೀಡಗುತ್ತಿತ್ತು. ಇದೀಗ ಸರ್ಕಾರವು ಈ ಮಿತಿಯನ್ನು 50,000ರೂ. ಗಳಿಗೆ ಹೆಚ್ಚಿಸಿದೇ.
ಪಿಎಂ ಸ್ವನಿಧಿ ಯೋಜನೆಯ ಇತರ ಪ್ರಯೋಜನಗಳು:
ಪಿಎಂ ಸ್ವನಿಧಿ ಯೋಜನೆಯಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಬೀದಿ ಬದಿಯ ವ್ಯಾಪಾರಿಗಳಿಗೆ, ಸಣ್ಣ ವ್ಯಾಪಾರಿಗಳಿಗೆ ಮೂರನೇ ಹಂತದಲ್ಲಿ ಸಾಲ ನಿಡುವಾಗ ಯುಪಿಐ ಆಹಾರೀತ ರೂಪೇ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಕೂಡ ನೀಡಲಾಗುತ್ತದೆ. ತುರ್ತು ವ್ಯಾಪಾರ ಬಂಡವಾಳ, ಹಾಗಾಗೂ ವೈಯಕ್ತಿಕ ಅಗತ್ಯತೆಗಳಿಗಾಗಿ ಈ ಕ್ರೆಡಿಟ್ ಕಾರ್ಡ್ ಬಳಸಿಕೊಳ್ಳಬಹುದು.