ಉದ್ಯಮಿ ಮುಖೇಶ್ ಅಂಬಾನಿಗೆ ದೊಡ್ಡ ಆಘಾತ; ಸರ್ಕಾರಕ್ಕೆ 24,522 ಕೋಟಿ ರೂ. ಪಾವತಿಸುವಂತೆ ನೋಟಿಸ್, ವಿವಾದವೇನು ಗೊತ್ತಾ?

Reliance Industries: ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ತನ್ನ KG-D5 ಮತ್ತು G-4 ಬ್ಲಾಕ್‌ಗಳ ವಿಸ್ತೀರ್ಣವು ರಿಲಯನ್ಸ್‌ನ KG-D6 ಬ್ಲಾಕ್‌ಗೆ ಸಂಬಂಧಿಸಿದೆ ಎಂದು ಆರೋಪಿಸಿದಾಗ ಜುಲೈ 2013ರಲ್ಲಿ ಈ ವಿವಾದವು ಪ್ರಾರಂಭವಾಯಿತು.

Written by - Puttaraj K Alur | Last Updated : Mar 4, 2025, 08:41 PM IST
  • ಕೃಷ್ಣ ಗೋದಾವರಿ ಬೇಸಿನ್‌ ಗ್ಯಾಸ್‌ ವಿವಾದ ಪ್ರಕರಣ
  • ಉದ್ಯಮಿ ಮುಖೇಶ್ ಅಂಬಾನಿಗೆ ದೊಡ್ಡ ಆಘಾತ
  • ಸರ್ಕಾರಕ್ಕೆ 24,522 ಕೋಟಿ ರೂ. ಪಾವತಿಸುವಂತೆ ನೋಟಿಸ್!
ಉದ್ಯಮಿ ಮುಖೇಶ್ ಅಂಬಾನಿಗೆ ದೊಡ್ಡ ಆಘಾತ; ಸರ್ಕಾರಕ್ಕೆ 24,522 ಕೋಟಿ ರೂ. ಪಾವತಿಸುವಂತೆ ನೋಟಿಸ್, ವಿವಾದವೇನು ಗೊತ್ತಾ?
ಮುಖೇಶ್ ಅಂಬಾನಿಗೆ ದೊಡ್ಡ ಆಘಾತ!

Mukesh Ambani: ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಗೆ ದೊಡ್ಡ ಹೊಡೆತ ಬಿದ್ದಿದೆ. ಮುಖೇಶ್ ಅಂಬಾನಿ ಪ್ರವರ್ತಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ಪಾಲುದಾರ ಸಂಸ್ಥೆ ಬಿಪಿಗೆ ಕೇಂದ್ರ ಸರ್ಕಾರ ಸುಮಾರು 24,522 ಕೋಟಿ ರೂ.ಗಳ ಪರಿಹಾರವನ್ನು ಪಾವತಿಸುವಂತೆ ನೋಟಿಸ್ ಕಳುಹಿಸಿದೆ. ದೆಹಲಿ ಹೈಕೋರ್ಟ್‌ನ ತೀರ್ಪಿನ ನಂತರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಿಲಯನ್ಸ್‌ಗೆ ಈ ನೋಟಿಸ್ ಕಳುಹಿಸಿದೆ.

Add Zee News as a Preferred Source

ಫೆಬ್ರವರಿ 14ರಂದು ದೆಹಲಿ ಹೈಕೋರ್ಟ್, ಹತ್ತಿರದ ಬ್ಲಾಕ್‌ನಿಂದ ಹೊರತೆಗೆಯಲಾದ ಅನಿಲಕ್ಕೆ ರಿಲಯನ್ಸ್ ಮತ್ತು ಬಿಪಿ ಯಾವುದೇ ಪರಿಹಾರಕ್ಕೆ ಹೊಣೆಗಾರರಲ್ಲ ಎಂಬ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯ ತೀರ್ಪನ್ನು ರದ್ದುಗೊಳಿಸಿತ್ತು. ರಿಲಯನ್ಸ್ ಷೇರು ಮಾರುಕಟ್ಟೆಗೆ ಕಳುಹಿಸಿದ ಮಾಹಿತಿಯಲ್ಲಿ ಈ ಬೇಡಿಕೆ ಸೂಚನೆಯ ಬಗ್ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಇಲ್ಲಿ ಕೇವಲ ₹2.47ಗೆ ಒಂದು ಲೀಟರ್‌ ಪೆಟ್ರೋಲ್‌ ಸಿಗುತ್ತೆ; ₹62ಗೆ ಕಾರಿನ ಟ್ಯಾಂಕ್‌ ತುಂಬಿಸಬಹುದು!!

ಕಂಪನಿ ಹೇಳಿದ್ದೇನು?

ʼವಿಭಾಗೀಯ ಪೀಠದ ತೀರ್ಪಿನ ನಂತರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಬಿಪಿ ಎಕ್ಸ್‌ಪ್ಲೋರೇಶನ್ (ಆಲ್ಫಾ) ಲಿಮಿಟೆಡ್ ಮತ್ತು ಎನ್‌ಇಸಿಒ ಲಿಮಿಟೆಡ್‌ನಿಂದ 2.81 ಬಿಲಿಯನ್ ಡಾಲರ್‌ ಪಾವತಿಸುವಂತೆ ಕೋರಿದೆʼ ಎಂದು ಕಂಪನಿ ತಿಳಿಸಿದೆ.

ಕೃಷ್ಣ ಗೋದಾವರಿ ಬೇಸಿನ್ ಡೀಪ್-ವಾಟರ್ ಬ್ಲಾಕ್‌ನಲ್ಲಿ ರಿಲಯನ್ಸ್ ಮೂಲತಃ ಶೇ.60ರಷ್ಟು ಪಾಲನ್ನು ಹೊಂದಿದ್ದರೆ, ಬಿಪಿ ಶೇ.30ರಷ್ಟು ಮತ್ತು ಕೆನಡಾದ ಕಂಪನಿ ನಿಕೊ ಉಳಿದ ಶೇ.10ರಷ್ಟು ಪಾಲನ್ನು ಹೊಂದಿತ್ತು. ತರುವಾಯ ರಿಲಯನ್ಸ್ ಮತ್ತು ಬಿಪಿ ಉತ್ಪಾದನಾ ಹಂಚಿಕೆ ಒಪ್ಪಂದದಲ್ಲಿ (PSC) ನಿಕೊ ಅವರ ಪಾಲನ್ನು ಪಡೆದುಕೊಂಡವು. ಈಗ ಅವರ ಪಾಲು ಕ್ರಮವಾಗಿ ಶೇ.66.66 ಮತ್ತು 33.33ಕ್ಕೆ ಏರಿದೆ.

ಪರಿಹಾರ ನೀಡಲು ನಿರಾಕರಣೆ

ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಯ ಸುತ್ತಮುತ್ತಲಿನ ಕ್ಷೇತ್ರಗಳಿಂದ ಕೆಜಿ-ಡಿ6 ಬ್ಲಾಕ್‌ಗೆ ವರ್ಗಾಯಿಸಲಾದ ಅನಿಲದ ಮೊತ್ತಕ್ಕಾಗಿ ಸರ್ಕಾರ 2016ರಲ್ಲಿ ರಿಲಯನ್ಸ್ ಮತ್ತು ಅದರ ಪಾಲುದಾರರಿಂದ $1.55 ಬಿಲಿಯನ್ ಹಣವನ್ನು ಪರಿಹಾರವಾಗಿ ನೀಡುವಂತೆ ಕೋರಿತ್ತು. ಈ ಹಕ್ಕನ್ನು ರಿಲಯನ್ಸ್ ವಿರೋಧಿಸಿತ್ತು ಮತ್ತು ಜುಲೈ 2018ರಲ್ಲಿ ಮಧ್ಯಸ್ಥಿಕೆ ನ್ಯಾಯಮಂಡಳಿಯು ಪರಿಹಾರ ಪಾವತಿಸಲು ಬದ್ಧವಾಗಿಲ್ಲವೆಂದು ಹೇಳಿದೆ.
ಈ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್‌ನ ಏಕ ಪೀಠವು ಮೇ 2023ರಲ್ಲಿ ವಜಾಗೊಳಿಸಿತ್ತು ಮತ್ತು ಮಧ್ಯಸ್ಥಿಕೆ ತೀರ್ಪನ್ನು ಎತ್ತಿಹಿಡಿದಿತ್ತು. ಆದಾಗ್ಯೂ, ಕಳೆದ ತಿಂಗಳು ಅದೇ ಹೈಕೋರ್ಟ್‌ನ ವಿಭಾಗೀಯ ಪೀಠವು ರಿಲಯನ್ಸ್ ಮತ್ತು ಅದರ ಪಾಲುದಾರರ ವಿರುದ್ಧ ತೀರ್ಪು ನೀಡಿ ಏಕ ನ್ಯಾಯಾಧೀಶರ ಆದೇಶವನ್ನು ರದ್ದುಗೊಳಿಸಿತ್ತು.

ಇದನ್ನೂ ಓದಿಮೋದಿ ಸರ್ಕಾರದಲ್ಲಿ ನಿರುದ್ಯೋಗ, ಹಣದುಬ್ಬರ ಬೃಹತ್‌ ಪ್ರಮಾಣದಲ್ಲಿ ಸೃಷ್ಟಿಯಾಗಿದೆ: ರಾಹುಲ್ ಗಾಂಧಿ

ಇದೇ ಮಾರ್ಚ್ 3ರಂದು ಸರ್ಕಾರದಿಂದ ಬೇಡಿಕೆ ಪತ್ರವನ್ನು ಕಂಪನಿ ಸ್ವೀಕರಿಸಿದೆ ಎಂದು ರಿಲಯನ್ಸ್ ಹೇಳಿದೆ. ಇದರೊಂದಿಗೆ "ವಿಭಾಗೀಯ ಪೀಠದ ನಿರ್ಧಾರ ಮತ್ತು ಈ ಬೇಡಿಕೆ ಸಮರ್ಥನೀಯವಲ್ಲವೆಂದು ಕಂಪನಿಗೆ ಕಾನೂನುಬದ್ಧವಾಗಿ ಸಲಹೆ ನೀಡಲಾಗಿದೆ. ವಿಭಾಗೀಯ ಪೀಠದ ನಿರ್ಧಾರವನ್ನು ಪ್ರಶ್ನಿಸಲು ಕಂಪನಿಯು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಈ ಪ್ರಕರಣದಲ್ಲಿ ಕಂಪನಿಯು ಯಾವುದೇ ಹೊಣೆಗಾರಿಕೆಯನ್ನು ನಿರೀಕ್ಷಿಸುವುದಿಲ್ಲ" ಎಂದು ರಿಲಯನ್ಸ್ ಇಂಡಸ್ಟ್ರೀಸ್ ಹೇಳಿದೆ. ಈ ಹಿಂದೆ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ರಿಲಯನ್ಸ್ ಹೇಳಿತ್ತು.

ಏನಿದು ವಿವಾದ?

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ತನ್ನ KG-D5 ಮತ್ತು G-4 ಬ್ಲಾಕ್‌ಗಳ ವಿಸ್ತೀರ್ಣವು ರಿಲಯನ್ಸ್‌ನ KG-D6 ಬ್ಲಾಕ್‌ಗೆ ಸಂಬಂಧಿಸಿದೆ ಎಂದು ಆರೋಪಿಸಿದಾಗ 2013ರ ಜುಲೈನಲ್ಲಿ ಈ ವಿವಾದ ಪ್ರಾರಂಭವಾಯಿತು. ಕೆಜಿ-ಡಿ5 ಬ್ಲಾಕ್‌ನ ಗಡಿ ಪ್ರದೇಶಗಳಲ್ಲಿ ರಿಲಯನ್ಸ್ ತೋಡಿದ ಕನಿಷ್ಠ ನಾಲ್ಕು ಬಾವಿಗಳು ಸಹ ತನ್ನ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಗಂಭೀರ ಆರೋಪ ಮಾಡಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News