)
ನೌಕರಿ ಅಂದ ಮೇಲೆ ವೇತನ ಇರಲೇ ಬೇಕು. ಇನ್ನು ಪ್ರತಿ ವರ್ಷ ವೇತನ ಎಷ್ಟು ಹೆಚ್ಚಾಯಿತು, ಎಷ್ಟು ಹೆಚ್ಚಾಗುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡು ಬದುಕುವವರೇ ಹೆಚ್ಚು. ದಿನನಿತ್ಯದ ಬೆಲೆ ಏರಿಕೆ ಜಂಜಾಟದಲ್ಲಿ ವೇತನ ಒಂದು ದಿನ ತಡವಾದರೂ ಸಹಿಸುವುದು ಕಷ್ಟ ಸಾಧ್ಯ. ಅಲ್ಲದೆ ಪ್ರತಿ ತಿಂಗಳು ವೇತನ ಪಡೆದರೂ ಉಳಿತಾಯ ಮಾಡುವುದು ಕೂಡಾ ಸಾಧ್ಯವಾಗುವುದಿಲ್ಲ. ಹಾಗಿರುವಾಗ ಈ ವ್ಯಕ್ತಿ ಬರೋಬ್ಬರಿ 5 ವರ್ಷಗಳಿಂದ ಒಂದೇ ಒಂದು ರೂಪಾಯಿ ವೇತನ ಪಡೆದಿಲ್ಲ, ಯಾವ ಭತ್ಯೆ ಕೂಡಾ ಪಡೆದಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಈ ವ್ಯಕ್ತಿಯ ಆಸ್ತಿ ಬೆಳೆಯುತಲೇ ಇದೆ.
ಹೌದು, ನಾವಿಲ್ಲಿ ಹೇಳುತ್ತಿರುವುದು ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಬಗ್ಗೆ. ರಿಲಯನ್ಸ್ ಇಂಡಸ್ಟ್ರಿ ಗ್ರೂಪ್ ಚೇರ್ಮೆನ್ ಮುಕೇಶ್ ಅಂಬಾನಿ ಕಳೆದ ನಾಲ್ಕು ವರ್ಷಗಳಿಂದ ಒಂದೇ ಒಂದು ರೂಪಾಯಿ ವೇತನ ಪಡೆದಿಲ್ಲ. 5ನೇ ವರ್ಷವೂ ಇದೇ ನಿಲುವನ್ನು ಮುಂದುವರೆಸಿದ್ದಾರೆ.ಕೋವಿಡ್ ವೇಳೆ ಮುಕೇಶ್ ಅಂಬಾನಿ ತಮ್ಮ ಕಂಪನಿಯಿಂದ ವೇತನ ಪಡೆಯುವುದನ್ನು ನಿಲ್ಲಿಸಿದ್ದರು. ಕಂಪನಿಯ ಉದ್ಯೋಗಿಗಳಿಗೆ ಯಾವುದೇ ರೀತಿಯಲ್ಲಿ ಆರ್ಥಿಕ ಸಮಸ್ಯೆ ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದ್ದರು. ನಂತರ ತಮ್ಮ ಈ ನಿಲುವನ್ನು ಇಂದಿಗೂ ಮುಂದುವರೆಸಿಕೊಂಡೇ ಬಂದಿದ್ದಾರೆ.
ವೇತನ ಪಡೆಯದೇ ಹೋದರೂ ಕೋಟಿಗಟ್ಟಲೆ ಆದಾಯ :
ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಮುಕೇಶ್ ಅಂಬಾನಿ ವೇತನ ಪಡೆಯುತ್ತಿಲ್ಲ ಸರಿ. ಆದರೂ ಪ್ರತಿ ವರ್ಷ ಹೆಚ್ಚು ಕಡಿಮೆ 3,000 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಕಳೆದ ವರ್ಷವೂ ಮುಖೇಶ್ 3,600 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಈಗ ಎದುರಾಗುವ ಪ್ರಶ್ನೆ ಒಂದೇ ಒಂದು ರೂಪಾಯಿ ವೇತನ ಪಡೆಯದೇ ಹೋದರೂ ಕೋಟಿಗಟ್ಟಲೆ ಆದಾಯ ಬರುತ್ತಿರುವುದಾದರೂ ಎಲ್ಲಿಂದ?
ಡಿವಿಡೆಂಡ್ ಮೂಲಕ ಮುಕೇಶ್ ಅಂಬಾನಿ ಖಾತೆಗೆ ಆದಾಯ :
ಮುಕೇಶ್ ಅಂಬಾನಿ ಬರೋಬ್ಬರಿ 110 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಒಡೆಯ. ಹೀಗಾಗಿ ಅವರು ಡಿವಿಡೆಂಡ್ ಮೂಲಕ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ರಿಲಯನ್ಸ್ ಕಂಪನಿಯ 1.61 ಕೋಟಿ ಷೇರುಗಳು ಮುಕೇಶ್ ಅಂಬಾನಿ ಹೆಸರಿನಲ್ಲಿದೆ. ಶೇಕಡಾ 5.50ರ ಬಡ್ಡಿದರ ಮೂಲಕ ಮುಕೇಶ್ ಅಂಬಾನಿ 8.85 ಕೋಟಿ ರೂಪಾಯಿ ಡಿವೆಡೆಂಟ್ ಮೊತ್ತ ಆದಾಯ ರೂಪಾಯದಲ್ಲಿ ಪಡೆಯುತ್ತಾರೆ. ಇನ್ನು ಅಂಬಾನಿ ಒಡೆತದನ ಪ್ರಮೋಟರ್ ಗ್ರೂಪ್ ಕಂಪನಿಯ ಬಹುತೇಕ ಷೇರು ಮುಕೇಶ್ ಅಂಬಾನಿ ಬಳಿಯೇ ಇದೆ. ಹೀಗಾಗಿ 2024-25 ಸಾಲಿನಲ್ಲಿ ಡಿವಿಡೆಂಡ್ ರೂಪದಲ್ಲಿ 3655 ರೂಪಾಯಿ ಆದಾಯವನ್ನು ಮುಕೇಶ್ ಅಂಬಾನಿ ಗಳಿಸಿದ್ದಾರೆ.
ಕೋವಿಡ್ಗೂ ಮೊದಲು ಎಷ್ಟಿತ್ತು ಅಂಬಾನಿ ವೇತನ ? :
ಕೋವಿಡ್ಗೂ ಮೊದಲು ಮುಕೇಶ್ ಅಂಬಾನಿ ಖಂಡಿತವಾಗಿಯೂ ತಮ್ಮ ಕಂಪನಿಯಿಂದ ವಾರ್ಷಿಕ ವೇತನ ಪಡೆಯುತ್ತಿದ್ದರು. ಆಗ ಅವರು ವಾರ್ಷಿಕವಾಗಿ 15 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದರು. ಇನ್ನು ಮುಕೇಶ್ ಅಂಬಾನಿ ರಿಲಯನ್ಸ್ ಬೋರ್ಡ್ನಲ್ಲಿ ಹಲವು ಸದಸ್ಯರಿದ್ದಾರೆ. ಇಲ್ಲಿ ಹುದ್ದೆಗೆ ಅನುಸಾರವಾಗಿ ಅವರವ ವೇತನ ನಿಗದಿಯಾಗಿರುತ್ತದೆ. 2023ರಲ್ಲಿ ರಿಲಯನ್ಸ್ ಬೋರ್ಡ್ ಸದಸ್ಯರಾಗಿ ಇಶಾ ಅಂಬಾನಿ, ಅಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಈ ವೇಳೆ ಇವರಿಗೆ ಯಾವುದೇ ವಾರ್ಷಿಕ ವೇತನ ಇರಲಿಲ್ಲ. ಇತ್ತೀಚೆಗೆ ಅನಂತ್ ಅಂಬಾನಿ ರಿಲಯನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಗೊಂಡಿದ್ದು, ಅವರ ವಾರ್ಷಿಕ ವೇತನವನ್ನು 10 ರಿಂದ 20 ಕೋಟಿ ರೂಪಾಯಿಗೆ ನಿಗದಿ ಮಾಡಲಾಗಿದೆ.